ಮಮತಾ ಎದುರು ಜೈ ಶ್ರೀರಾಮ್ ಘೋಷಣೆ: ಓರ್ವನ ಬಂಧನ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತೊಮ್ಮೆ ತಮ್ಮ ತಾಳ್ಮೆ ಕಳೆದುಕೊಂಡಿದ್ದಾರೆ.
ಮಮತಾ ಎದುರು ಜೈ ಶ್ರೀರಾಮ್ ಘೋಷಣೆ: ಓರ್ವನ ಬಂಧನ
ಮಮತಾ ಎದುರು ಜೈ ಶ್ರೀರಾಮ್ ಘೋಷಣೆ: ಓರ್ವನ ಬಂಧನ
Updated on
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತೊಮ್ಮೆ ತಮ್ಮ ತಾಳ್ಮೆ ಕಳೆದುಕೊಂಡಿದ್ದಾರೆ. 
ನಾರ್ತ್ 24 ಪರಗಣಾಸ್ ನಲ್ಲಿ ಮಮತಾ ಬ್ಯಾನರ್ಜಿ ತೆರಳುತ್ತಿದ್ದ ವೇಳೆ ಯುವಕರ ತಂಡ 
ಜೈ ಶ್ರೀರಾಮ್ ಘೋಷಣೆ ಕೂಗಿದೆ.  ಜೈ ಶ್ರೀರಾಮ್ ಘೋಷಣೆ ಕೂಗುತ್ತಿದ್ದಂತೆಯೇ ಮಮತಾ ಬ್ಯಾನರ್ಜಿ ತಮ್ಮ ತಾಳ್ಮೆ ಕಳೆದುಕೊಂಡಿದ್ದಾರೆ. 
ಕಾರಿನಿಂದ ಹೊರಬಂದ ಮಮತಾ ಬ್ಯಾನರ್ಜಿ, ಭದ್ರತಾ ಅಧಿಕಾರಿಗಳಿಗೆ ಜೈ ಶ್ರೀರಾಮ್ ಘೋಷಣೆ ಕೂಗಿದವರ ಹೆಸರನ್ನು ಬರೆದುಕೊಳ್ಳುವಂತೆ ಸೂಚನೆ ನೀಡಿದ್ದಾರೆ. 
ನಿಮ್ಮನ್ನು ಏನೆಂದುಕೊಂಡಿದ್ದೀರಿ? ಬೇರೆ ರಾಜ್ಯಗಳಿಂದ ಇಲ್ಲಿಗೆ ಬಂದು, ನಮ್ಮನ್ನೇ ನಿಂದಿಸುತ್ತೀರಾ? ಇದನ್ನು ಸಹಿಸಲು ಸಾಧ್ಯವಿಲ್ಲ. ನನ್ನನ್ನು ನಿಂದಿಸುವುದಕ್ಕೆ ಎಷ್ಟು ಧೈರ್ಯ, ನಿಮ್ಮೆಲ್ಲರ ಹೆಸರನ್ನೂ ಬರೆದುಕೊಳ್ಳಲಾಗಿದೆ ಎಂದು ಮಮತಾ ಬ್ಯಾನರ್ಜಿ ಘೋಷಣೆ ಕೂಗಿರುವ ಯುವಕರಿಗೆ ಹೇಳಿರುವುದು ವರದಿಯಾಗಿದೆ. ಇತ್ತೀಚಿನ ವರದಿ ಪ್ರಕಾರ ಮಮತಾ ಬ್ಯಾನರ್ಜಿ ಎದುರು ಜೈ ಶ್ರೀರಾಮ್ ಘೋಷಣೆ ಕೂಗಿದ ಯುವಕರ ಪೈಕಿ ಓರ್ವನನ್ನು ಬಂಧಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com