ಮೋದಿ ಸರ್ಕಾರ 2.0; ಪಿಯೂಷ್ ಗೋಯಲ್ ಗೆ ಮತ್ತೊಮ್ಮೆ ರೈಲ್ವೆ ಖಾತೆ ನೀಡಿದ್ದೇಕೆ?

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ನೂತನ ಎನ್ ಡಿಎ ಸರ್ಕಾರ ತನ್ನ ಸಚಿವರಿಗೆ ಖಾತೆ ಹಂಚಿಕೆ ಮಾಡಿದ್ದು, ಖಾತೆ ಹಂಚಿಕೆಯಲ್ಲೂ ಮೋದಿ ಹಲವು ಅಚ್ಚರಿ ನಡೆಗಳನ್ನು ಇರಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ನೂತನ ಎನ್ ಡಿಎ ಸರ್ಕಾರ ತನ್ನ ಸಚಿವರಿಗೆ ಖಾತೆ ಹಂಚಿಕೆ ಮಾಡಿದ್ದು, ಖಾತೆ ಹಂಚಿಕೆಯಲ್ಲೂ ಮೋದಿ ಹಲವು ಅಚ್ಚರಿ ನಡೆಗಳನ್ನು ಇರಿಸಿದ್ದಾರೆ.
ಇದುವರೆಗೆ ಮೋದಿ ಸಂಪುಟದಲ್ಲಿ ಮೊದಲ ರಕ್ಷಣಾ ಸಚಿವೆ ಎಂಬ ಕೀರ್ತಿಗೆ ಭಾಜನರಾಗಿದ್ದ ಮತ್ತು ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್ ಅವರಿಗೆ ಹಣಕಾಸು ಹೊಣೆಗಾರಿಕೆ ನೀಡಲಾಗಿದೆ. ಜೊತೆಗೆ ಕಾರ್ಪೊರೇಟ್ ವ್ಯವಹಾರಗಳ ಖಾತೆಯ ಹೊಣೆಯನ್ನೂ ನೀಡಲಾಗಿದೆ. ಪ್ರಹ್ಲಾದ್ ಜೋಷಿ ಅವರಿಗೆ ಈ ಹಿಂದೆ ಅನಂತ್‌ಕುಮಾರ್ ಅವರು ನಿರ್ವಹಣೆ ಮಾಡುತ್ತಿದ್ದ ಸಂಸದೀಯ ವ್ಯವಹಾರಗಳ ಖಾತೆ ವಹಿಸಿಕೊಡಲಾಗಿದೆ. ಜೊತೆಗೆ ಗಣಿ ಮತ್ತು ಕಲ್ಲಿದ್ದಲು ಖಾತೆಯ ಜವಾಬ್ದಾರಿ ನೀಡಲಾಗಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ಗೃಹ ಖಾತೆ ಹೊಣೆಗಾರಿಕೆ ನೀಡಲಾಗಿದೆ. ಈ ಹಿಂದೆ  ಅವರು ಗುಜರಾತ್ ನಲ್ಲಿ ಅವರು ಇದೇ ಖಾತೆಯ ಹೊಣೆಗಾರಿಕೆಯನ್ನು ನಿರ್ವಹಣೆ ಮಾಡಿದ್ದರು. ರಾಜ್‌ನಾಥ್ ಸಿಂಗ್ ಅವರಿಗೆ ರಕ್ಷಣಾ ಸಚಿವರ ಜವಾಬ್ದಾರಿ ನೀಡಲಾಗಿದೆ. ರವಿಶಂಕರ್ ಪ್ರಸಾದ್  ಅವರಿಗೆ ಕಾನೂನು, ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ವಹಿಸಲಾಗಿದೆ.
ಪಿಯೂಷ್ ಗೋಯಲ್ ಗೆ ಮತ್ತೊಮ್ಮೆ ರೈಲ್ವೆ ಖಾತೆ
ಇನ್ನು ಪಿಯೋಷ್ ಗೋಯಲ್ ಅವರಿಗೆ ಮತ್ತೆ ರೈಲ್ವೈ ಖಾತೆ ಜವಾಬ್ದಾರಿ ನೀಡಲಾಗಿದ್ದು, ಕಳೆದ ಬಾರಿಯೂ ಗೋಯಲ್ ಇದೇ ಜವಾಬ್ದಾರಿ ಹೊತ್ತಿದ್ದರು. ಸುರೇಶ್ ಪ್ರಭು ಅವರು ರೈಲ್ವೇ ಖಾತೆಯಿಂದ ಹಿಂದೆ ಸರಿದ ಬಳಿಕ ಗೋಯಲ್ ಅವರು ಈ ಜವಾಬ್ದಾರಿ ಹೊತ್ತಿದ್ದರು. 
ವೃತ್ತಿಯಲ್ಲಿ ಚಾರ್ಟೆರ್ಡ್‌ ಅಕೌಂಟೆಂಟ್ ಆಗಿರುವ ಮುಂಬೈ ನ ರಾಜಕಾರಣಿ ಪಿಯೂಷ್ ಗೋಯಲ್ ಅವರಿಗೆ ಹಣಕಾಸು ಖಾತೆ ತಪ್ಪಿ ಹಳೆಯ ರೈಲ್ವೆ ಖಾತೆಯೇ ಮುಂದುವರಿದಿರುವುದು ಏಕೆ?
ರೈಲ್ವೆ ಇಲಾಖೆಯಲ್ಲಿ ಅವರು ಹೆಚ್ಚು ಶ್ರಮ ಹಾಕಿ ಚೆನ್ನಾಗಿ ಕೆಲಸ ಮಾಡಿದ ಕಾರಣದಿಂದಲೇ ಮೋದಿ ಇಷ್ಟಪಟ್ಟು ಪಿಯೂಷ್ ಗೋಯಲ್ ಖಾತೆಯನ್ನು ಬದಲಾವಣೆ ಮಾಡದೇ ಅದೇ ಖಾತೆಯಲ್ಲಿ ಮುಂದುವರಿಸಿದ್ದಾರೆ ಎಂದು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ. ಭಾರತೀಯ ರೈಲುಗಳನ್ನು ವೇಗವಾಗಿ ಪರಿವರ್ತನೆ ಮಾಡುವಲ್ಲಿ ಅವರು ಹೆಚ್ಚಿನ ಕೆಲಸ ಮಾಡಿದ್ದು ಬಹಳ ದಶಕಗಳಿಂದಲೂ ರೈಲುಗಳ ವೇಗ ಹೆಚ್ಚಾಗಬೇಕು ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿತ್ತು.
ವಂದೇ ಮಾತರಂ ಎಕ್ಸ್ ಪ್ರೆಸ್ ಸೇರಿದಂತೆ ಅನೇಕ ರೈಲುಗಳ ವೇಗವನ್ನು ಹೆಚ್ಚಳ ಮಾಡಲು ಗೋಯಲ್ ಕಾರಣಕರ್ತರಾಗಿದ್ದರು. ಮುಖ್ಯವಾಗಿ ಮುಂಬೈ-ಅಹಮದಾಬಾದ್ ನಡುವಿನ ಬುಲೆಟ್ ರೈಲು ಯೋಜನೆಯನ್ನು ನಿರೀಕ್ಷಿತ ಅವಧಿಯಲ್ಲಿ ಸಾಕಾರಗೊಳಿಸಲು ಸಹಾಯಕವಾಗುತ್ತದೆ ಎಂಬ ಉದ್ದೇಶದಿಂದ ಮೋದಿ ಅವರು ಗೋಯಲ್ ಅವರನ್ನು ರೈಲ್ವೆ ಖಾತೆಯಲ್ಲೇ ಮುಂದುವರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ವೃತ್ತಿಯಲ್ಲಿ ಲೆಕ್ಕ ಪರಿಶೋಧಕರಾಗಿರುವ ಗೋಯಲ್ ಅವರಿಗೆ ಈ ಬಾರಿ ಹಣಕಾಸು ಖಾತೆ ಜವಾಬ್ದಾರಿ ಸಿಗಲಿದೆ ಎಂಬ ಮಾತು ದಟ್ಟವಾಗಿ ಕೇಳಿ ಬಂದಿತ್ತು. ಅದರಲ್ಲೂ ವಿಶೇಷವಾಗಿ ಅರುಣ್ ಜೇಟ್ಲಿ ಸಂಪುಟದಲ್ಲಿ ಮುಂದುವರಿಯುವುದಿಲ್ಲ ಎಂದು ಪ್ರಧಾನಿ ಅವರಿಗೆ ಮನವಿ ಮಾಡಿದ ನಂತರ ಹಣಕಾಸು ಖಾತೆ ಹೊಣೆಗಾರಿಗೆ ಗೋಯಲ್ ಅವರಿಗೆ ಸಿಗಲಿದೆ ಎಂಬ ಅಚಲ ನಂಬಿಕೆ ಬಿಜೆಪಿ ನಾಯಕರಲ್ಲೂ ಮನೆಮಾಡಿತ್ತು. 
ರೈಲ್ವೆ ಇಲಾಖೆಯಲ್ಲಿ ಪಿಯೂಷ್ ಗೋಯಲ್ ಮಾಡಿರುವ ಕೆಲಸ ಕಾರ್ಯಗಳನ್ನು ನೋಡಿಯೇ ಪ್ರಧಾನಿ ಮೋದಿ ಅವರು ಅದೇ ಖಾತೆಯ ಹೊಣೆಗಾರಿಕೆಯನ್ನು ಇಷ್ಟಪಟ್ಟು ನೀಡಿದ್ದಾರೆ ಎಂದು ಹೇಳಲಾಗಿದೆ. ಪಿಯೂಷ್ ಗೋಯಲ್ ಅವರ ತಂದೆ ವೇದ ಪ್ರಕಾಶ್ ಗೋಯಲ್ ಅವರೂ ಕೂಡ ಕೇಂದ್ರ ಸಚಿವ ಸಂಪುಟದಲ್ಲಿ ಸಚಿವರಾಗಿ ಕೆಲಸ ಮಾಡಿ, ಜೊತೆಗೆ 20 ವರ್ಷಗಳ ಕಾಲ ಬಿಜೆಪಿ ಜೊತೆ ಒಡನಾಟ ಹೊಂದಿದ್ದರು. ಅವರ ತಾಯಿ ಚಂದ್ರಕಾಂತಾ ಗೋಯಲ್ ಮುಂಬೈ ಮಹಾನಗರದಿಂದ ಮೂರು ಬಾರಿ ಬಿಜೆಪಿ ಶಾಸಕಿಯಾಗಿ ಆಯ್ಕೆಯಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com