ದೆಹಲಿ ಈಗ ಗ್ಯಾಸ್ ಚೇಂಬರ್, ಪಕ್ಕದ ರಾಜ್ಯಗಳಿಂದಾಗಿ ಇಲ್ಲಿ ಮಾಲಿನ್ಯ: ಅರವಿಂದ್ ಕೇಜ್ರಿವಾಲ್ ಆರೋಪ

ದೆಹಲಿಯಲ್ಲಿ ಮಾಲಿನ್ಯ ಪ್ರಮಾಣ ಇಷ್ಟು ಹೆಚ್ಚಾಗಲು ಪಂಜಾಬ್ ಮತ್ತು ಹರ್ಯಾಣ ಸರ್ಕಾರಗಳೇ ಕಾರಣವಾಗಿದ್ದು ಕ್ಯಾಪ್ಟನ್ ಅಂಕಲ್ ಮತ್ತು ಖಟ್ಟರ್ ಅಂಕಲ್ ಗೆ ಪತ್ರ ಬರೆಯಿರಿ ಎಂದು ಶಾಲಾ ಮಕ್ಕಳನ್ನು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಒತ್ತಾಯಿಸಿದ್ದಾರೆ.
ದೆಹಲಿಯಲ್ಲಿ ಶಾಲಾ ಮಕ್ಕಳಿಗೆ ಮಾಸ್ಕ್ ವಿತರಿಸಿದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್
ದೆಹಲಿಯಲ್ಲಿ ಶಾಲಾ ಮಕ್ಕಳಿಗೆ ಮಾಸ್ಕ್ ವಿತರಿಸಿದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್
Updated on

ನವದೆಹಲಿ: ದೆಹಲಿಯಲ್ಲಿ ಮಾಲಿನ್ಯ ಪ್ರಮಾಣ ಇಷ್ಟು ಹೆಚ್ಚಾಗಲು ಪಂಜಾಬ್ ಮತ್ತು ಹರ್ಯಾಣ ಸರ್ಕಾರಗಳೇ ಕಾರಣವಾಗಿದ್ದು ಕ್ಯಾಪ್ಟನ್ ಅಂಕಲ್ ಮತ್ತು ಖಟ್ಟರ್ ಅಂಕಲ್ ಗೆ ಪತ್ರ ಬರೆಯಿರಿ ಎಂದು ಶಾಲಾ ಮಕ್ಕಳನ್ನು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಒತ್ತಾಯಿಸಿದ್ದಾರೆ.


ನಮ್ಮ ಆರೋಗ್ಯದ ಬಗ್ಗೆ ಯೋಚಿಸಿ ಎಂದು ಕ್ಯಾಪ್ಟನ್ ಅಂಕಲ್ ಮತ್ತು ಖಟ್ಟರ್ ಅಂಕಲ್ ಗೆ ಪತ್ರ ಬರೆಯಿರಿ ಎಂದು ಇಂದು ದೆಹಲಿಯಲ್ಲಿ ಶಾಲಾ ಮಕ್ಕಳಿಗೆ ಉಸಿರಾಟದ ಮುಖವಾಡ(masks)ಗಳನ್ನು ವಿತರಿಸಿ ಹೇಳಿದರು.


ಪಕ್ಕದ ರಾಜ್ಯಗಳಲ್ಲಿ ಬೆಳೆಗಳ ಕೂಳೆಗಳನ್ನು ಸುಡುವುದರಿಂದ ದೆಹಲಿಯಲ್ಲಿ ಇಷ್ಟೊಂದು ಹೊಗೆ, ಮಾಲಿನ್ಯವುಂಟಾಗಿದೆ. ಈ ವಿಷಕಾರಿ ಅನಿಲದಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕಾಗಿದೆ. ಖಾಸಗಿ ಮತ್ತು ಸರ್ಕಾರಿ ಶಾಲೆಗಳ ಮೂಲಕ ನಾವು ಇಂದು 50 ಲಕ್ಷ ಮಾಸ್ಕ್ ಗಳನ್ನು ಹಂಚಲು ಆರಂಭಿಸಿದ್ದೇವೆ. ಈ ಮಾಸ್ಕ್ ಗಳನ್ನು ಅಗತ್ಯವಿರುವ ಕಡೆಗಳಲ್ಲೆಲ್ಲಾ ಬಳಸಿ ಎಂದಿದ್ದಾರೆ.


ದೆಹಲಿಯಲ್ಲಿ ವಾಯುಮಾಲಿನ್ಯ ಮಟ್ಟ ದಿನೇದಿನೇ ಏರಿಕೆಯಾಗುತ್ತಿದ್ದು ಜನರಿಗೆ ಹೊರಗೆ ಓಡಾಡಲು ಕಷ್ಟವಾಗುತ್ತಿದೆ. ಇದನ್ನು ನಿಯಂತ್ರಿಸಲು ಮುಖ್ಯಮಂತ್ರಿಗಳು ಕ್ರಮ ಕೈಗೊಂಡಿಲ್ಲ ಎಂದು ಬಿಜೆಪಿ ಮತ್ತು ಕಾಂಗ್ರೆಸ್ ಕೇಜ್ರಿವಾಲ್ ಅವರನ್ನು ಟೀಕಿಸಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಕೇಜ್ರಿವಾಲ್ ದೆಹಲಿ ಗ್ಯಾಸ್ ಚೇಂಬರ್ ಆಗಿದೆ, ಹರ್ಯಾಣದಲ್ಲಿ ಖಟ್ಟರ್ ಮತ್ತು ಪಂಜಾಬ್ ನಲ್ಲಿ ಕ್ಯಾಪ್ಟನ್ ಅಮರಿಂದರ್ ಸರ್ಕಾರಗಳು ರೈತರಿಗೆ ಕೊಯ್ದ ಪೈರಿನ ಕೂಳೆಯನ್ನು ಸುಡುವಂತೆ ಹೇಳುತ್ತವೆ. ಇದರಿಂದ ದೆಹಲಿಯಲ್ಲಿ ತೀವ್ರ ಮಾಲಿನ್ಯವುಂಟಾಗುತ್ತದೆ. ನಿನ್ನೆ ಪಂಜಾಬ್ ಮತ್ತು ಹರ್ಯಾಣ ಭವನಗಳಲ್ಲಿ ರೈತರು ಪ್ರತಿಭಟನೆ ನಡೆಸಿ ತಮ್ಮ ಸಿಟ್ಟು, ಆಕ್ರೋಶಗಳನ್ನು ಹೊರಹಾಕಿದ್ದಾರೆ ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ.

ದೀಪಾವಳಿ ನಂತರ ದೆಹಲಿಯಲ್ಲಿ ವಾಯುಮಾಲಿನ್ಯ ಮತ್ತಷ್ಟು ದಟ್ಟವಾಗಿದೆ. ಈ ವರ್ಷದಲ್ಲಿ ಇಂದು ಬೆಳಗ್ಗೆ 8 ಗಂಟೆಗೆ ವಾಯು ಗುಣಮಟ್ಟ ಸೂಚ್ಯಂಕ(ಎಕ್ಯುಐ) 459ಕ್ಕೆ ತಲುಪಿದ್ದು ಮಾಲಿನ್ಯ ಮಟ್ಟ ನಿನ್ನೆ ಗಂಭೀರ+ ವಲಯವನ್ನು ದಾಟಿದೆ. ಕಳೆದ ಜನವರಿ ಬಳಿಕ ಈ ತಿಂಗಳೇ ದೆಹಲಿಯಲ್ಲಿ ವಾಯುಮಾಲಿನ್ಯ ಮಟ್ಟ ಈ ಮಟ್ಟದ ತುರ್ತು ಸ್ಥಿತಿಗೆ ತಲುಪಿದ್ದು.
 

Delhi has turned into a gas chamber due to smoke from crop burning in neighbouring states

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com