ಅಯೋಧ್ಯೆ ತೀರ್ಪು: ಭೀತಿ ಹುಟ್ಟಿಸಲು ಇಲ್ಲಸಲ್ಲದ ಪೋಸ್ಟ್-ಹೆದರಿ ರೈಲು ಟಿಕೆಟ್ ರದ್ದು ಮಾಡಿದ ಹಲವು ಪ್ರಯಾಣಿಕರು

ಹಲವು ವರ್ಷಗಳ ಅಯೋಧ್ಯೆ ವಿವಾದ ಸಂಬಂಧ ಸುಪ್ರೀಂಕೋರ್ಟ್ ತೀರ್ಪು ಹಿನ್ನೆಲೆಯಲ್ಲಿ ಜನತೆಯಲ್ಲಿ ಭೀತಿ ಹುಟ್ಟಿಸಲು ಸಾಮಾಜಿಕ ಜಾಲತಾಣಗಳಲ್ಲಿ ಕೆಲ ಪೋಸ್ಟ್'ಗಳು ಹರಿದಾಡಿದ್ದು, ಪೋಸ್ಟ್'ಗಳಿಗೆ ಹೆದರಿದ ಹಲವು ಪ್ರಯಾಣಿಕರು ರೈಲು ಟಿಕೆಟ್ ಗಳನ್ನು ರದ್ದು ಮಾಡಿದ್ದಾರೆ. ಪರಿಣಾಮ ಶನಿವಾರ ಉತ್ತರ ಭಾರತಕ್ಕೆ ತೆರಳಬೇಕಿದ್ದ ರೈಲುಗಳು ಖಾಲಿ ಖಾಲಿಯಾಗಿದ್ದುದ್ದು ಸಾಮಾನ್ಯವಾಗಿತ್ತು
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಹಲವು ವರ್ಷಗಳ ಅಯೋಧ್ಯೆ ವಿವಾದ ಸಂಬಂಧ ಸುಪ್ರೀಂಕೋರ್ಟ್ ತೀರ್ಪು ಹಿನ್ನೆಲೆಯಲ್ಲಿ ಜನತೆಯಲ್ಲಿ ಭೀತಿ ಹುಟ್ಟಿಸಲು ಸಾಮಾಜಿಕ ಜಾಲತಾಣಗಳಲ್ಲಿ ಕೆಲ ಪೋಸ್ಟ್'ಗಳು ಹರಿದಾಡಿದ್ದು, ಪೋಸ್ಟ್'ಗಳಿಗೆ ಹೆದರಿದ ಹಲವು ಪ್ರಯಾಣಿಕರು ರೈಲು ಟಿಕೆಟ್ ಗಳನ್ನು ರದ್ದು ಮಾಡಿದ್ದಾರೆ. ಪರಿಣಾಮ ಶನಿವಾರ ಉತ್ತರ ಭಾರತಕ್ಕೆ ತೆರಳಬೇಕಿದ್ದ ರೈಲುಗಳು ಖಾಲಿ ಖಾಲಿಯಾಗಿದ್ದುದ್ದು ಸಾಮಾನ್ಯವಾಗಿತ್ತು. 

ಅಯೋಧ್ಯೆ ತೀರ್ಪು ಹಿನ್ನಲೆಯಲ್ಲಿ ಹಿಂದೂ ಹಾಗೂ ಮುಸ್ಲಿಮರ ನಡುವೆ ಸಂಘರ್ಷ ಏರ್ಪಡಬಹುದು ಎಂಬ ಸುದ್ದಿಗಳು ಹರಿದಾಡಲು ಆರಂಭಿಸಿದ್ದವು. ಈ ಹಿನ್ನಲೆಯಲ್ಲಿ ಉತ್ತರಪ್ರದೇಶ ಹಾಗೂ ಉತ್ತರ ಭಾರತದ ಇತರೆ ಪ್ರದೇಶಗಳಿಗೆ ತೆರಳಬೇಕಿದ್ದ ಹಲವು ರೈಲುಗಳು ಪ್ರಯಾಣಿಕರಿಲ್ಲದೆ, ಖಾಲಿ ಹೊಡೆಯುತ್ತಿದ್ದವು. 

ತೀರ್ಪು ಹಿನ್ನಲೆಯಲ್ಲಿ ಉತ್ತರಪ್ರದೇಶಕ್ಕೆ ತೆರಳವ ಕಠಿಣ ನಿರ್ಧಾರ ತೆಗೆದುಕೊಳ್ಳುವುದು ಬೇಡ ಎನಿಸಿತ್ತು. ವಿಮಾನಗಳ ಟಿಕೆಟ್'ಗೆ ಹೋಲಿಸಿದರೆ, ರಾಜಧಾನಿ ರೈಲು ಟಿಕೆಟ್ ಗಳ ಬೆಲೆ ಹೆಚ್ಚಾಗಿದೆ. ವಿಮಾನ ಟಿಕೆಟ್ ಗಳ ಬೆಲೆಯೇ ಕಡಿಮೆ ಇದ್ದರಿಂದ ಹಾಗೂ ಸುರಕ್ಷೆ ಹೆಚ್ಚಾಗಿರುವುದರಿಂದ ವಿಮಾನದಲ್ಲಿ ಪ್ರಯಾಣಿಸುವುದು ಉತ್ತಮ ಎನಿಸಿತು ಎಂದು ಹೈಬಾದ್ ನಿವಾಸಿಯಾಗಿರುವ ಜ್ಯೋತಿ ಕುಮಾರ್ ಅವರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com