ಅರವಿಂದ್ ಸಾವಂತ್ ಮತ್ತು ಜವಡೇಕರ್
ಅರವಿಂದ್ ಸಾವಂತ್ ಮತ್ತು ಜವಡೇಕರ್

ಅರವಿಂದ್ ಸಾವಂತ್ ರಾಜೀನಾಮೆ ಅಂಗೀಕಾರ: ಹೆಚ್ಚುವರಿ ಬೃಹತ್ ಕೈಗಾರಿಕೆ ಸಚಿವರಾಗಿ ಜವಡೇಕರ್ ನೇಮಕ

ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮ ಸಚಿವ ಸ್ಥಾನಕ್ಕೆ ಅವರಿಂದ್ ಸಾವಂತ್ ಅವರು ಸಲ್ಲಿಸಿದ್ದ ರಾಜೀನಾಮೆಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಮಂಗಳವಾರ ಅಂಗೀಕರಿಸಿದ್ದಾರೆ. 

ನವದೆಹಲಿ: ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮ ಸಚಿವ ಸ್ಥಾನಕ್ಕೆ ಅವರಿಂದ್ ಸಾವಂತ್ ಅವರು ಸಲ್ಲಿಸಿದ್ದ ರಾಜೀನಾಮೆಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಮಂಗಳವಾರ ಅಂಗೀಕರಿಸಿದ್ದಾರೆ. 

ರಾಜೀನಾಮೆ ಅಂಗೀಕಾರಗೊಂಡ ಹಿನ್ನಲೆಯಲ್ಲಿ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಸಾರ್ವಜನಿನಕ ಉದ್ಯಮ ಹೆಚ್ಚುವರಿ ಸಚಿವರಾಗಿ ಪ್ರಕಾಶ್ ಜವಡೇಕರ್ ಅವರನ್ನು ನೇಮಿಸಲಾಗಿದೆ. 

ಮಹಾರಾಷ್ಟ್ರದಲ್ಲಿ ಶಿವಸೇನೆ ಮತ್ತು ಬಿಜೆಪಿ ನಡುವಿನ ಸರ್ಕಾರ ರಚನೆ ತಿಕ್ಕಾಟ ತಾರಕಕ್ಕೇರಿರುವಂತೆಯೇ  ಶಿವಸೇನಾ ಸಂಸದ ಹಾಗೂ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮ ಸಚಿವ ಅರವಿಂದ್‌ ಸಾವಂತ್‌ ಅವರು ನಿನ್ನೆಯಷ್ಟೇ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. 

ಪ್ರಧಾನಿ ನರೇಂದ್ರ ಮೋದಿ ಸಂಪುಟದಿಂದ ಹೊರ ಬಂದಿರುವುದಾಗಿ ಹೇಳಿದ ಸಾವಂತ್ ಅವರು, ತಾವು ಧರ್ಮದ ಪರವಾಗಿದ್ದು, ಇಂತಹ ಪರಿಸ್ಥಿತಿಯಲ್ಲಿ ನಾನು ಕೇಂದ್ರ ಸರ್ಕಾರದಲ್ಲಿ ಮುಂದುವರೆಯುವುದು ಸರಿಯಲ್ಲ. ಹೀಗಾಗಿ ನಾನು ನನ್ನ ಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡುತ್ತಿದ್ದೇನೆಂದು ತಿಳಿಸಿದ್ದರು. 

Related Stories

No stories found.

Advertisement

X
Kannada Prabha
www.kannadaprabha.com