ಐಪಿಎಲ್-2020: ಮುಂಬೈಗೆ ಬೌಲ್ಟ್‌, ರಾಜಸ್ಥಾನಕ್ಕೆ ರಜಪೂತ್

ನ್ಯೂಜಿಲೆಂಡ್ ಅನುಭವಿ ವೇಗದ ಬೌಲರ್ ಟ್ರೆಂಟ್ ಬೌಲ್ಟ್‌, ಇಂಡಿಯನ್ ಪ್ರೀಮಿಯರ್ 2020ರ ಆವೃತ್ತಿಯಲ್ಲಿ ಮುಂಬೈ ಇಂಡಿಯನ್‌ಸ್‌ ಪರ ಆಡಲಿದ್ದು, ದೇಶೀಯ ವೇಗಿ ಅಂಕಿತ್ ರಜಪೂತ್ ರಾಜಸ್ಥಾನ್ ರಾಯಲ್ಸ್‌ ಪರ ಕಣಕ್ಕೆ ಇಳಿಯಲಿದ್ದಾರೆ.
ಐಪಿಎಲ್-2020: ಮುಂಬೈಗೆ ಬೌಲ್ಟ್‌, ರಾಜಸ್ಥಾನಕ್ಕೆ ರಜಪೂತ್
ಐಪಿಎಲ್-2020: ಮುಂಬೈಗೆ ಬೌಲ್ಟ್‌, ರಾಜಸ್ಥಾನಕ್ಕೆ ರಜಪೂತ್
Updated on: 

ನವದೆಹಲಿ: ನ್ಯೂಜಿಲೆಂಡ್ ಅನುಭವಿ ವೇಗದ ಬೌಲರ್ ಟ್ರೆಂಟ್ ಬೌಲ್ಟ್‌, ಇಂಡಿಯನ್ ಪ್ರೀಮಿಯರ್ 2020ರ ಆವೃತ್ತಿಯಲ್ಲಿ ಮುಂಬೈ ಇಂಡಿಯನ್‌ಸ್‌ ಪರ ಆಡಲಿದ್ದು, ದೇಶೀಯ ವೇಗಿ ಅಂಕಿತ್ ರಜಪೂತ್ ರಾಜಸ್ಥಾನ್ ರಾಯಲ್ಸ್‌ ಪರ ಕಣಕ್ಕೆ ಇಳಿಯಲಿದ್ದಾರೆ.

ಐಪಿಎಲ್ ಪತ್ರಿಕಾ ಹೇಳಿಕೆ ಪ್ರಕಾರ, ಬೌಲ್ಟ್‌ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ವಹಿವಾಟಿನ ನಂತರ ಮುಂದಿನ ವರ್ಷ ಮುಂಬೈ ಇಂಡಿಯನ್ಸ್‌ ಪರ ಆಡಲಿದ್ದಾರೆ. ಹಾಗೆಯೇ, ಅಂಕಿತ್ ರಜಪೂತ್ ಅವರು ಕಿಂಗ್ಸ್‌ ಇಲೆವೆನ್ ಪಂಜಾಬ್ ಪರ ಯಶಸ್ವಿ ಪ್ರದರ್ಶನ ತೋರಿದ್ದ ಬಳಿಕ ಮುಂದಿನ ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್‌ ಕಲರ್ಸ್ ತೊಡಲಿದ್ದಾರೆ. 

2014ರ ಆವೃತ್ತಿಯಲ್ಲಿ ಐಪಿಎಲ್‌ಗೆ ಪದಾರ್ಪಣೆ ಮಾಡಿದ್ದ ಬೌಲ್ಟ್‌, 2018 ಮತ್ತು 2019ರ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಪರ ಆಡಿದ್ದರು. 33 ಐಪಿಎಲ್ ಪಂದ್ಯಗಳಿಂದ ಒಟ್ಟು 38 ವಿಕೆಟ್‌ಗಳನ್ನು ಕಿತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com