ಯಶವಂತ್ ಸಿನ್ಹಾ
ಯಶವಂತ್ ಸಿನ್ಹಾ

ಅಯೋಧ್ಯೆ ತೀರ್ಪಿನಲ್ಲಿ ದೋಷ, ಆದರೂ ಮುಸ್ಲಿಂರು ಅನಿವಾರ್ಯವಾಗಿ ಒಪ್ಪಿಕೊಳ್ಳಲೇಬೇಕು: ಯಶವಂತ್ ಸಿನ್ಹಾ

ದಶಕಗಳಷ್ಟು ಹಳೆಯ ಅಯೋಧ್ಯೆ ವಿವಾದಕ್ಕೆ ಸುಪ್ರೀಂ ಕೋರ್ಟ್ ಅಂತೂ ಅಂತ್ಯ ಹಾಡಿದೆ. ಆದರೆ ರಾಜಕೀಯ ಮುಖಂಡರು ಮಾತ್ರ ಒಂದಿಲ್ಲೊಂದು ಹೇಳಿಕೆಗಳನ್ನು ನೀಡುತ್ತಾ ತೀರ್ಪಿನ ಬಗ್ಗೆ ತಮ್ಮ ಅಸಮಾಧಾನವನ್ನು ಹೊರಹಾಕುತ್ತಿದ್ದಾರೆ. ಇದೀಗ ಬಿಜೆಪಿ ಮಾಜಿ ನಾಯಕ ಯಶವಂತ ಸಿನ್ಹಾ ಅಯೋಧ್ಯೆ ತೀರ್ಪಿನಲ್ಲಿ ದೋಷವಿದೆ ಎಂದಿದ್ದಾರೆ.

ಮುಂಬೈ: ದಶಕಗಳಷ್ಟು ಹಳೆಯ ಅಯೋಧ್ಯೆ ವಿವಾದಕ್ಕೆ ಸುಪ್ರೀಂ ಕೋರ್ಟ್ ಅಂತೂ ಅಂತ್ಯ ಹಾಡಿದೆ. ಆದರೆ ರಾಜಕೀಯ ಮುಖಂಡರು ಮಾತ್ರ ಒಂದಿಲ್ಲೊಂದು ಹೇಳಿಕೆಗಳನ್ನು ನೀಡುತ್ತಾ ತೀರ್ಪಿನ ಬಗ್ಗೆ ತಮ್ಮ ಅಸಮಾಧಾನವನ್ನು ಹೊರಹಾಕುತ್ತಿದ್ದಾರೆ. ಇದೀಗ ಬಿಜೆಪಿ ಮಾಜಿ ನಾಯಕ ಯಶವಂತ ಸಿನ್ಹಾ ಅಯೋಧ್ಯೆ ತೀರ್ಪಿನಲ್ಲಿ ದೋಷವಿದೆ ಎಂದಿದ್ದಾರೆ. 

ಸುಪ್ರೀಂ ಕೋರ್ಟ್ ನೀಡಿರುವ ಅಯೋಧ್ಯೆ ತೀರ್ಪು ದೋಷದಿಂದ ಕೂಡಿದೆ. ಆದರೆ ಮುಸ್ಲಿಂ ಬಾಂಧವರು ಈ ತೀರ್ಪನ್ನು ಒಪ್ಪಿಕೊಳ್ಳಬೇಕು ಎಂದು ಕೇಳಿಕೊಳ್ಳುತ್ತೇನೆ ಎಂದು ಯಶವಂತ ಸಿನ್ಹಾ ಸುಪ್ರೀಂ ತೀರ್ಪಿನ ಬಗ್ಗೆ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. 

ದೇಶದ ಸರ್ವೋಚ್ಚ ನ್ಯಾಯಾಲಯ ತೀರ್ಪು ನೀಡಿದ ಮೇಲೆ ಮತ್ತೊಂದು ತೀರ್ಪು ಇರುವುದಿಲ್ಲ. ಹೀಗಾಗಿ ಎಲ್ಲರೂ ತೀರ್ಪನ್ನು ಒಪ್ಪಿಕೊಂಡು ಮುಂದೆ ನಡೆಯಬೇಕು ಎಂದು ಹೇಳಿದರು. 

ಬಿಜೆಪಿ ಕೋಮುವಾದಿ ಶಕ್ತಿ ಎಂದು ತಿಳಿದಿದ್ದರೂ 1993ರಲ್ಲಿ ನಾನು ಭ್ರಷ್ಟ ಶಕ್ತಿ(ಕಾಂಗ್ರೆಸ್)ಗಿಂತ ಇದು ಉತ್ತಮ ಪರ್ಯಾವೆಂದು ಭಾವಿಸಿ ಬಿಜೆಪಿ ಸೇರುವ ನಿರ್ಧಾರವನ್ನು ತೆಗೆದುಕೊಂಡಿದ್ದೆ ಎಂದರು. 

Related Stories

No stories found.

Advertisement

X
Kannada Prabha
www.kannadaprabha.com