ಅಜಿತ್ ಪವಾರ್ ಮನವೊಲಿಕೆಗೆ ರಂಗ ಪ್ರವೇಶಿಸಿದವರು ಯಾರು ಗೊತ್ತೇ?

ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬುಧವಾರ ಬಹುಮತ ಸಾಬೀತು ಪಡಿಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿರುವ ಬೆನ್ನಲ್ಲೇ ರಾಜ್ಯ ರಾಜಕೀಯ ಚಟುವಟಿಕೆ ತೀವ್ರ ರಭಸ ಪಡೆದುಕೊಂಡಿದೆ. 
ಅಜಿತ್ ಪವಾರ್ ಮನವೊಲಿಕೆಗೆ ರಂಗ ಪ್ರವೇಶಿಸಿದವರು ಯಾರು ಗೊತ್ತೇ?
ಅಜಿತ್ ಪವಾರ್ ಮನವೊಲಿಕೆಗೆ ರಂಗ ಪ್ರವೇಶಿಸಿದವರು ಯಾರು ಗೊತ್ತೇ?
Updated on: 

ಮುಂಬೈ: ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬುಧವಾರ ಬಹುಮತ ಸಾಬೀತು ಪಡಿಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿರುವ ಬೆನ್ನಲ್ಲೇ ರಾಜ್ಯ ರಾಜಕೀಯ ಚಟುವಟಿಕೆ ತೀವ್ರ ರಭಸ ಪಡೆದುಕೊಂಡಿದೆ. 

ಬಹುಮತ ಸಾಬೀತು ಪರೀಕ್ಷೆ ಎದುರಿಸಲು ರಾಜಕೀಯ ಪಕ್ಷಗಳು ತ್ವರಿತಗತಿಯಲ್ಲಿ ಸಿದ್ದತೆ ನಡೆಸುತ್ತಿವೆ. ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ನಿವಾಸದಲ್ಲಿ ಬಿಜೆಪಿ ಕೋರ್ ಸಮಿತಿ ಸಭೆ ನಡೆಸಲಾಯಿತು. ಸಭೆಯ ನಂತರ ಬಿಜೆಪಿ ತನ್ನ ಶಾಸಕರಿಗೆ ವಿಪ್ ಜಾರಿಗೊಳಿಸಿತು. ನಾಳೆ ನಡೆಯಲಿರುವ ಬಹುಮತ ಪರೀಕ್ಷೆಯಲ್ಲಿ ವಿಜಯ ಸಾಧಿಸುವುದಾಗಿ ಈ ಸಂದರ್ಭದಲ್ಲಿ ವಿಶ್ವಾಸ ವ್ಯಕ್ತಪಡಿಸಿದೆ.  

ಈ ನಡುವೆ ಬಿಜೆಪಿ ಸಖ್ಯ ತೊರೆದು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಸಂಪುಟದಲ್ಲಿ ಉಪಮುಖ್ಯ,ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಅಜಿತ್ ಪವಾರ್ ಗೆ ಶರದ್ ಪವಾರ್ ಅವರ ಪತ್ನಿ ಪ್ರತಿಭಾ ಹಾಗೂ ಮಗಳು ಸುಪ್ರಿಯಾ ಸುಲೆ ಒತ್ತಾಯಿಸಿದ್ದಾರೆ. ಅಜಿತ್ ಪವಾರ್ ಮನವೊಲಿಕೆಯಲ್ಲಿ ಇಬ್ಬರೂ ಯಶಸ್ವಿಯಾಗಿದ್ದು, 

ಶಿವಸೇನೆ ಹಾಗೂ ಕಾಂಗ್ರೆಸ್ ಜೊತೆಗೆ ಹೋಗುವ ಶರದ್ ಪವಾರ್ ನಿರ್ಧಾರದ ಬಗ್ಗೆ ಅಜಿತ್ ಪವಾರ್ ಬೇಸರ ವ್ಯಕ್ತಪಡಿಸಿದ್ದರು ಎಂದು ಅಜಿತ್ ಪವಾರ್ ಬೆಂಬಲಿಗರು ಹೇಳಿದ್ದಾರೆ. ಅಷ್ಟೇ ಅಲ್ಲದೇ  ಪುತ್ರಿ ಸುಪ್ರಿಯಾ ಅವರನ್ನು ತಮ್ಮ ರಾಜಕೀಯ ಉತ್ತರಾಧಿಕಾರಿ ಎಂಬಂತೆ ಶರದ್ ಪವಾರ್ ಬಿಂಬಿಸುತ್ತಿದ್ದರ ಬಗ್ಗೆಯೂ ಅಜಿತ್ ಪವಾರ್ ಬೆಂಬಲಿಗರಲ್ಲಿ ಅಸಮಾಧಾನವಿದ್ದ ಸಂಗತಿ ಬಹಿರಂಗಗೊಂಡಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com