ಪ್ರಿಯಾಂಕಾರೆಡ್ಡಿ 'ಹತ್ಯಾಚಾರ': ಆರೋಪಿಗಳ ಪರ ವಕಾಲತ್ತು ವಹಿಸದಿರಲು ವಕೀಲರ ನಿರ್ಧಾರ!

ನಿರ್ಭಯಾ ಪ್ರಕರಣದ ಬಳಿಕ ಇಡೀ ದೇಶಾದ್ಯಂತ ಮತ್ತೆ ಸಂಚಲನ ಮೂಡಿಸಿರುವ ಪಶುವೈದ್ಯೆ ಪ್ರಿಯಾಂಕಾ ರೆಡ್ಡಿ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲಂಗಾಣ ವಕೀಲರ ಸಂಘ ಸಂಚಲನಾತ್ಮಕ ನಿರ್ಧಾರ ಕೈಗೊಂಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಹೈದರಾಬಾದ್​: ನಿರ್ಭಯಾ ಪ್ರಕರಣದ ಬಳಿಕ ಇಡೀ ದೇಶಾದ್ಯಂತ ಮತ್ತೆ ಸಂಚಲನ ಮೂಡಿಸಿರುವ ಪಶುವೈದ್ಯೆ ಪ್ರಿಯಾಂಕಾ ರೆಡ್ಡಿ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲಂಗಾಣ ವಕೀಲರ ಸಂಘ ಸಂಚಲನಾತ್ಮಕ ನಿರ್ಧಾರ ಕೈಗೊಂಡಿದೆ.

ತೆಲಂಗಾಣದ ಪಶುವೈದ್ಯೆ ಪ್ರಿಯಾಂಕಾ ರೆಡ್ಡಿ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಆರೋಪಿಗಳ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಜನರು ಹಾಗೂ ಸೆಲೆಬ್ರಿಟಿಗಳಿಂದಲೂ ಆಕ್ರೋಶ ವ್ಯಕ್ತವಾಗುತ್ತಿದೆ. 

ಪಂಚರ್ ಆಗಿದ್ದ ಸ್ಕೂಟರ್​ ಟೈರ್​ ರಿಪೇರಿ ಮಾಡಿಕೊಡ್ತೀವಿ ಅಂತ ಬಂದ ಆ ಕಿರಾತಕರು ಪ್ರಿಯಾಂಕಾ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿ, ಮೃತದೇಹವನ್ನು ಭೀಕರವಾಗಿ ಸುಟ್ಟುಹಾಕಿದ್ದರು. ಈ ಪ್ರಕರಣ ಬೆಳಕಿಗೆ ಬಂದ ನಂತರ ದೇಶಾದ್ಯಂತ ತೀವ್ರ ಖಂಡನೆ ವ್ಯಕ್ತವಾಗಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ನಾಲ್ವರು ಆರೋಪಿಗಳಾದ ಮೊಹಮ್ಮದ್​ ಅರೀದ್​, ಜೊಲ್ಲು ಶಿವ, ಜೊಲ್ಲು ನವೀನ್ ಹಾಗೂ ಚಿಂತಾಕುಂಟ ಚೆನ್ನಕೇಶವುಲು ರನ್ನು ಪೊಲೀಸರು ಬಂಧಿಸಿದ್ದಾರೆ. 

ಆದರೆ ಈ ಆರೋಪಿಗಳಿಗೆ ವಕೀಲರು ಕೂಡ ಶಾಕ್ ನೀಡಿದ್ದು, ವಕೀಲರು ಕೂಡ ಆರೋಪಿಗಳ ಪರ ವಾದ ಮಾಡದಿರಲು ನಿರ್ಧರಿಸಿದ್ದಾರೆ. ಈ ಆರೋಪಿಗಳಿಗೆ ಯಾವುದೇ ರೀತಿಯ ಕಾನೂನು ಬೆಂಬಲ ನೀಡಲ್ಲ ಅಂತ ಶಾದ್​ನಗರದ ಬಾರ್​​ ಅಸೋಸಿಯೇಷನ್​​ ತೀರ್ಮಾನ ಮಾಡಿದೆ.

ಪ್ರಿಯಾಂಕಾ ಮೇಲೆ ಗ್ಯಾಂಗ್​​ರೇಪ್​ ನಡೆದಿರುವುದನ್ನು ಸೈಬರಾಬಾದ್​ ಪೊಲೀಸರು ದೃಢಪಡಿಸಿದ್ದಾರೆ. ಅಲ್ಲದೆ ಆರೋಪಿಗಳು ಪ್ರೀ ಪ್ಲ್ಯಾನ್ ಮಾಡಿಕೊಂಡು ಈ ಕೃತ್ಯವೆಸಗಿದ್ದಾರೆ. ವೈದ್ಯೆ ಮೇಲೆ ಅತ್ಯಾಚಾರವೆಸಗಿದ ನಂತರ ಸೀಮೆಎಣ್ಣೆ ಸುರಿದ ಬ್ಲಾಂಕೆಟ್​ ಆಕೆಯ ಮೇಲೆ ಹಾಕಿ ಬೆಂಕಿ ಹಚ್ಚಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಆರೋಪಿಗಳನ್ನ ಇಂದು ಮಧ್ಯಾಹ್ನ 1 ಗಂಟೆಗೆ ಶಾದ್​ನಗರದ ಸ್ಥಳೀಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com