ಏರ್ ಬಸ್ ಮೇಲೆ ಗಾಂಧಿ ಚಿತ್ರ
ದೇಶ
ಮಹಾತ್ಮ ಗಾಂಧಿ ಜನ್ಮದಿನ: ಏರ್ ಇಂಡಿಯಾದಿಂದ ವಿಶೇಷ ಶುಭಾಶಯ!
ರಾಷ್ಟ್ರಪಿತ ಮಹಾತ್ಮಗಾಂಧಿ ಅವರ 150ನೇ ಜನ್ಮ ದಿನಾಚರಣೆ ನಿಮಿತ್ತ ಏರ್ ಇಂಡಿಯಾ ವಿಮಾನಯಾನ ಸಂಸ್ಥೆ ವಿಶೇಷವಾಗಿ ಶುಭ ಕೋರಿದೆ.
ನವದೆಹಲಿ: ರಾಷ್ಟ್ರಪಿತ ಮಹಾತ್ಮಗಾಂಧಿ ಅವರ 150ನೇ ಜನ್ಮ ದಿನಾಚರಣೆ ನಿಮಿತ್ತ ಏರ್ ಇಂಡಿಯಾ ವಿಮಾನಯಾನ ಸಂಸ್ಥೆ ವಿಶೇಷವಾಗಿ ಶುಭ ಕೋರಿದೆ.
ದೇಶದ ಏಕೈಕ ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ ತನ್ನ ವಿಮಾನಗಳ ಬಾಲದಲ್ಲಿ ಮಹಾತ್ಮಗಾಂಧಿ ಚಿತ್ರ ಬಿಡಿಸುವ ಮೂಲಕ ಪ್ರಯಾಣಿಕರಲ್ಲಿ ಗಾಂಧಿ ಕುರಿತ ವಿಚಾರಧಾರೆಗಳನ್ನು ಪ್ರಸರಿಸುತ್ತಿದೆ. ಏರ್ ಇಂಡಿಯಾದ ಏರ್ ಬಸ್ ಎ320 ವಿಮಾನಗಳ ಬಾಲದಲ್ಲಿ ಮಹಾತ್ಮ ಗಾಂಧಿ ಊರುಗೋಲು ಹಿಡಿದು ನಡೆಯುತ್ತಿರುವ ಚಿತ್ರವನ್ನು ಬಿಡಿಸಲಾಗಿದೆ.
ಇನ್ನು ಇಂದು ಮಹಾತ್ಮಗಾಂಧಿ ಅವರ 150ನೇ ಜನ್ಮ ದಿನವಾಗಿದ್ದು, ದೇಶಾದ್ಯಂತ ಕೇಂದ್ರ ಸರ್ಕಾರ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಪ್ರಧಾನಿ ಮೋದಿ ಗಾಂಧಿ ಜನ್ಮ ದಿನ ನಿಮಿತ್ತ ಆರಂಭಿಸಿರುವ ಸ್ವಚ್ಛ ಭಾರತ ಅಭಿಯಾನದ ವಿವಿಧ ಕಾರ್ಯಕ್ರಮಗಳು ಚಾಲ್ತಿಯಲ್ಲಿವೆ.


