ಕಾಶ್ಮೀರ ಮೇಲೆ ದಾಳಿ ಮಾಡಲು ಭಯೋತ್ಪಾದಕ ಸಂಘಟನೆಗಳಿಗೆ ಪಾಕ್ ಆದೇಶ; ಗುಪ್ತಚರ ಮಾಹಿತಿ 

ಪಾಕಿಸ್ತಾನ ಸೇನೆ ಮತ್ತು ಆಂತರಿಕ ಗುಪ್ತಚರ ಸೇವೆ(ಐಎಸ್ಐ) ನೆರವಿನೊಂದಿಗೆ ಅಲ್ಲಿನ ಪ್ರಮುಖ ಮೂರು ಭಯೋತ್ಪಾದನೆ ಸಂಘಟನೆಗಳಿಗೆ ಭಾರತದ ಹಲವು ಕಡೆಗಳಲ್ಲಿ ಪೊಲೀಸರು ಮತ್ತು ರಾಜಕೀಯ ಮುಖಂಡರ ಮೇಲೆ ಭಯೋತ್ಪಾದಕ ದಾಳಿ ನಡೆಸುವ ಜವಾಬ್ದಾರಿಯನ್ನು ಹೊತ್ತುಕೊಂಡಿವೆ ಎಂಬ ಅಂಶ ಬಹಿರಂಗವಾಗಿದೆ.
ಮಸೂದ್ ಅಜರ್ ಮತ್ತು ಹಫೀಸ್ ಸಯೀದ್(ಸಂಗ್ರಹ ಚಿತ್ರ)
ಮಸೂದ್ ಅಜರ್ ಮತ್ತು ಹಫೀಸ್ ಸಯೀದ್(ಸಂಗ್ರಹ ಚಿತ್ರ)

ನವದೆಹಲಿ: ಪಾಕಿಸ್ತಾನ ಸೇನೆ ಮತ್ತು ಆಂತರಿಕ ಗುಪ್ತಚರ ಸೇವೆ(ಐಎಸ್ಐ) ನೆರವಿನೊಂದಿಗೆ ಅಲ್ಲಿನ ಪ್ರಮುಖ ಮೂರು ಭಯೋತ್ಪಾದನೆ ಸಂಘಟನೆಗಳಾದ ಲಷ್ಕರ್ ಇ ತೊಯ್ಬಾ, ಹಿಜ್ ಬುಲ್ ಮುಜಾಹಿದ್ದೀನ್ ಮತ್ತು ಜೈಶ್ ಇ ಮೊಹಮ್ಮದ್ ಸಂಘಟನೆಗಳಿಗಳು ಜಮ್ಮು-ಕಾಶ್ಮೀರ ಮತ್ತು ಭಾರತದ ಹಲವು ಕಡೆಗಳಲ್ಲಿ ಪೊಲೀಸರು ಮತ್ತು ರಾಜಕೀಯ ಮುಖಂಡರ ಮೇಲೆ ಭಯೋತ್ಪಾದಕ ದಾಳಿ ನಡೆಸುವ ಜವಾಬ್ದಾರಿಯನ್ನು ಹೊತ್ತುಕೊಂಡಿವೆ ಎಂಬ ಅಂಶ ಬಹಿರಂಗವಾಗಿದೆ.


ಎಎನ್ಐ ಸುದ್ದಿಸಂಸ್ಥೆಗೆ ಸಿಕ್ಕಿರುವ ದಾಖಲೆಗಳ ಪ್ರಕಾರ, ಕಳೆದ ವಾರ ಪುಲ್ವಾಮಾದಲ್ಲಿ ಸಭೆಯೊಂದು ನಡೆಸಲಾಗಿದ್ದು ಅಲ್ಲಿ ಮೂರು ಭಯೋತ್ಪಾದಕ ಸಂಘಟನೆಗಳ ಸದಸ್ಯರಿಗೆ ಅವುಗಳ ಮುಖ್ಯಸ್ಥರು ಜವಾಬ್ದಾರಿಯನ್ನು ಹಂಚಿಕೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಪುಲ್ವಾಮಾದಲ್ಲಿ ಇತ್ತೀಚೆಗೆ ನಿಖರವಾಗಿ ತಿಳಿದು ಬರದಿರುವ ಸ್ಥಳದಲ್ಲಿ ಜಂಟಿಯಾಗಿ ಈ ಭಯೋತ್ಪಾದಕರು ಸಭೆ ನಡೆಸಿ ಮುಂದಿನ ಕಾರ್ಯತಂತ್ರಗಳು ಮತ್ತು ವಿವಿಧ ಕಾರ್ಯಗಳನ್ನು ಹೊತ್ತುಕೊಳ್ಳುವ ಜವಾಬ್ದಾರಿಗಳನ್ನು ವಹಿಸಲಾಗಿದೆ ಎಂದು ದಾಖಲೆಗಳಿಂದ ತಿಳಿದುಬಂದಿದೆ.


ಪಾಕಿಸ್ತಾನ ಸರ್ಕಾರದ ಬೆಂಬಲಿತ ಈ ಭಯೋತ್ಪಾದಕ ಸಂಘಟನೆಗಳಿಗೆ ಕಾಶ್ಮೀರ ಕಣಿವೆಯಲ್ಲಿ ಮತ್ತು ಭಾರತದ ವಿವಿಧ ಭಾಗಗಳಲ್ಲಿ ಪೊಲೀಸರು ಮತ್ತು ರಾಜಕೀಯ ನಾಯಕರನ್ನು ಹತ್ಯೆ ಮಾಡುವ ಹೊಣೆಯನ್ನು ವಹಿಸಲಾಗಿದೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ದಾಳಿ ನಡೆಸುವ ಹೊಣೆಯನ್ನು ಜೈಶ್ ಇ ಮೊಹಮ್ಮದ್ ಸಂಘಟನೆಗೆ, ಆಂತರಿಕ ಭದ್ರತಾ ಕೇಂದ್ರಗಳ ಮೇಲೆ ದಾಳಿ ನಡೆಸಲು ಲಷ್ಕರ್ ಇ ತೊಯ್ಬಾಗೆ ಮತ್ತು ಹಿಜ್ ಬುಲ್ ಮುಜಾಹಿದ್ದೀನ್ ಸಂಘಟನೆಗೆ ಪೊಲೀಸರು ಮತ್ತು ರಾಜಕೀಯ ನಾಯಕರ ಹತ್ಯೆ ಮಾಡುವ ಕೆಲಸವನ್ನು ವಹಿಸಲಾಗಿದೆ ಎಂದು ಸಿಕ್ಕಿರುವ ದಾಖಲೆಯಿಂದ ತಿಳಿದುಬಂದಿದೆ.


ಕಾಶ್ಮೀರ ಸ್ಥಳೀಯರನ್ನು ಗುರಿಯಾಗಿಟ್ಟುಕೊಂಡು ಅಲ್ಲಿ ಶಾಂತಿ ಕದಡುವ ಕೆಲಸವನ್ನು ಸಹ ಹಿಜ್ ಬುಲ್ ಮುಜಾಹಿದ್ದೀನ್ ಗೆ ನೀಡಲಾಗಿದೆ. ಈ ನಿಟ್ಟಿನಲ್ಲಿ ಭಾರತೀಯ ಭದ್ರತಾ ಪಡೆಗಳಿಗೆ ಪ್ರಮಾಣಿತ ಕಾರ್ಯಾಚರಣಾ ವಿಧಾನಗಳನ್ನು ಅನುಸರಿಸಲು ಮತ್ತು ಗುಪ್ತಚರ ಸಂಸ್ಥೆಗಳು, ಸ್ಥಳೀಯ ಪೊಲೀಸ್ ಮತ್ತು ಭಾರತೀಯ ಸೇನೆಯೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರುವಂತೆ ಗುಪ್ತಚರ ಇಲಾಖೆ ತಿಳಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com