ಮಹಾರಾಷ್ಟ್ರ: ಮತ್ತೆ ಏಳು ನಕ್ಸಲರ ಶರಣಾಗತಿ, ಹೊಸ ಬದುಕು ಕಟ್ಟಿಕೊಳ್ಳಲು ಪೊಲೀಸರ ನೆರವು 

ಮಹಾರಾಷ್ಟ್ರದಲ್ಲಿ ಮತ್ತೆ ಏಳು ಮಂದಿ ನಕ್ಸಲರು ಪೊಲೀಸರ ಬಳಿ ಶರಣಾಗಿದ್ದು, ಹೊಸ ಬದುಕು ಕಟ್ಟಿಕೊಳ್ಳಲು ಅವಕಾಶ ನೀಡುವಂತೆ ಕೋರಿದ್ದಾರೆ.
ಪೊಲೀಸರಿಗೆ ಶರಣಾದ ನಕ್ಸಲರು
ಪೊಲೀಸರಿಗೆ ಶರಣಾದ ನಕ್ಸಲರು

ಮುಂಬೈ: ಮಹಾರಾಷ್ಟ್ರದಲ್ಲಿ ಮತ್ತೆ ಏಳು ಮಂದಿ ನಕ್ಸಲರು ಪೊಲೀಸರ ಬಳಿ ಶರಣಾಗಿದ್ದು, ಹೊಸ ಬದುಕು ಕಟ್ಟಿಕೊಳ್ಳಲು ಅವಕಾಶ ನೀಡುವಂತೆ ಕೋರಿದ್ದಾರೆ.

ಮಹಾರಾಷ್ಟ್ರದ ನಕ್ಸಲ್ ಪೀಡಿತ ಗಡ್ ಚಿರೋಲಿಯಲ್ಲಿ ಇಂದು ಒಟ್ಟು ಏಳು ನಕ್ಸಲರು ಪೊಲೀಸರಿಗೆ ಶರಣಾಗಿದ್ದಾರೆ. ಶರಣಾದ ನಕ್ಸಲರ ಪೈಕಿ ಮೂವರು ಮಹಿಳೆಯರು ಕೂಡ ಇದ್ದು ಇವರನ್ನು ರಾಕೇಶ್ ಅಲಿಯಾಸ್ ಗಣೇಶ್ ಶಂಕು ಅಚಾಲಾ (ವಯಸ್ಸು -34), ದೇವಿದಾಸ್ ಅಲಿಯಾಸ್ ಮಣಿರಾಮ್ ಸೋನು ಆಚಾಲಾ (ವಯಸ್ಸು -25), ರೇಷ್ಮಾ ಅಲಿಯಾಸ್ ಜೈ ದುಲ್ಸು ಕೋವಾಚಿ (ವಯಸ್ಸು -19), ಅಖಿಲಾ ಅಲಿಯಾಸ್ ರಾಧೆ ಜುರೆ (ವಯಸ್ಸು -27), ಶಿವ ವಿಜಯ್ ಪೊಟವಿ (ವಯಸ್ಸು -22). ), ಕರುಣಾ ಅಲಿಯಾಸ್ ಕುಮ್ಮೆ ರಾಮ್‌ಸಿಂಗ್ ಮಡವಿ (ವಯಸ್ಸು -22) ಮತ್ತು ರಾಹುಲ್ ಅಲಿಯಾಸ್ ದಮ್ಜಿ ಸೊಮ್ಜಿ ಪಲ್ಲೆ (ವಯಸ್ಸು -25) ಎಂದು ಗುರುತಿಸಲಾಗಿದೆ.

ಇನ್ನು ಇಂದು ಶರಣಾದ ನಕ್ಸಲರ ಮೇಲೆ ಒಟ್ಟು 33 ಲಕ್ಷ ಬಹುಮಾನ ನಿಗದಿ ಪಡಿಸಲಾಗಿತ್ತು. ಈ ಹಿಂದೆ ಹಲವು ಕುಕೃತ್ಯಗಳಲ್ಲಿ ಪಾಲ್ಗೊಂಡಿದ್ದ ಇವರು, ಇದೀಗ ಮಹಾರಾಷ್ಟ್ರ ನಕ್ಸಲ್ ನಿಗ್ರಹ ಪಡೆಯ ಅಧಿಕಾರಿಗಳ ಮನವಿಗೆ ಸ್ಪಂದಿಸಿ ನಕ್ಸಲ್ ವಾದ ತೊರೆದು ಸಮಾಜದ ಮುಖ್ಯವಾಹಿನಿಗೆ ಬರಲು ನಿರ್ಧರಿಸಿದ್ದಾರೆ.

ಕಳೆದ ಜುಲೈನಲ್ಲೂ ಕೂಡ ನಾಲ್ಕು ಮಹಿಳೆಯರು ಸೇರಿದಂತೆ ಒಟ್ಟು 6 ಮಂದಿ ನಕ್ಸಲರು ಪೊಲೀಸರಿಗೆ ಶರಣಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com