ಸುಬ್ರಮಣಿಯನ್ ಸ್ವಾಮಿ
ಸುಬ್ರಮಣಿಯನ್ ಸ್ವಾಮಿ

ಚಕ್ರವರ್ತಿಯ 'ನಗ್ನ'ತೆಯ ಅರಿವಿಲ್ಲದವರು: ಮೋದಿ ಸರ್ಕಾರದ ಆರ್ಥಿಕ ನೀತಿಗಳ ವಿರುದ್ಧ ಸುಬ್ರಹ್ಮಣ್ಯನ್‌ ಸ್ವಾಮಿ ವಾಗ್ದಾಳಿ

ನರೇಂದ್ರ ಮೋದಿ ನೇತೃತ್ವದ ಆರ್ಥಿಕ ನೀತಿಗಳ ನಿರಂತವಾಗಿ ವಾಗ್ದಾಳಿ ಮಾಡುತ್ತಿರುವ ಸ್ವಪಕ್ಷಿಯರೇ ಆದ ಬಿಜೆಪಿ ಹಿರಿಯ ಮುಖಂಡ ಡಾ. ಸುಬ್ರಹ್ಮಣ್ಯನ್‌ ಸ್ವಾಮಿ ಆರ್ಥಿಕ ಕುಸಿತ ಇಲ್ಲ ಎಂದು ನಿರಾಕರಿಸುತ್ತಿರುವ ಸಚಿವರಿಗೆ ವಿವೇಚನೆಯೂ ಇಲ್ಲ ದೂರದೃಷ್ಟಿಯೂ ಇಲ್ಲ ಎಂದು ಬಲವಾಗಿ ಟೀಕಿಸಿದ್ದಾರೆ.
Published on

ನವದೆಹಲಿ : ನರೇಂದ್ರ ಮೋದಿ ನೇತೃತ್ವದ ಆರ್ಥಿಕ ನೀತಿಗಳ ನಿರಂತವಾಗಿ ವಾಗ್ದಾಳಿ ಮಾಡುತ್ತಿರುವ ಸ್ವಪಕ್ಷಿಯರೇ ಆದ ಬಿಜೆಪಿ ಹಿರಿಯ ಮುಖಂಡ ಡಾ. ಸುಬ್ರಹ್ಮಣ್ಯನ್‌ ಸ್ವಾಮಿ ಆರ್ಥಿಕ ಕುಸಿತ ಇಲ್ಲ ಎಂದು ನಿರಾಕರಿಸುತ್ತಿರುವ ಸಚಿವರಿಗೆ ವಿವೇಚನೆಯೂ ಇಲ್ಲ ದೂರದೃಷ್ಟಿಯೂ ಇಲ್ಲ ಎಂದು ಬಲವಾಗಿ ಟೀಕಿಸಿದ್ದಾರೆ.

" ಬಟ್ಟೆ ಧರಿಸದಿರುವುದು [ನಗ್ನತೆ] ಯಾರಿಗೆ ಕಾಣಿಸುತ್ತಿಲ್ಲವೋ ಅಂತಹವರ ಹೇಳಿಕೆ ಕೂಡಾ ಅನಗತ್ಯ ಮತ್ತು ಅಪ್ರಸ್ತುತವಾಗುತ್ತದೆ " ಎಂದು ಅವರು ಟ್ವೀಟರ್ ನಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.

ದೇಶದ ಆರ್ಥಿಕ ಸಂಕಷ್ಟ ಹೆಚ್ಚಾಗುತ್ತಿದ್ದು ಗ್ರಾಹಕ ಬೇಡಿಕೆ ಗಣನೀಯವಾಗಿ ಕುಸಿದಿದೆ ಎಂದು ಅರ್‌ಬಿಐ ಅಂಕಿ ಅಂಶಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ವರದಿ ಮಾಡಿದ ಬೆನ್ನಲ್ಲೆ ಸ್ವಾಮಿ ಅವರು ಹೇಳಿಕೆ ಹೊರಬಿದ್ದಿದೆ . ದೇಶದಲ್ಲಿ ಆರ್ಥಿಕ ಹಿಂಜರಿತ ಇಲ್ಲ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅಲ್ಲಗಳೆದ ಕೆಲವೇ ಗಂಟೆಗಳ ಅವಧಿಯಲ್ಲಿ ಸ್ವಾಮಿ ಅವರು ಮೋದಿ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ಮಾಡಿದ್ದಾರೆ.

ಇದಕ್ಕೆ ಹಿಂದೆ ಸೆ. ೨೭ಕ್ಕೆ ಹೊರಬಂದ ಪಾಕ್ಷಿಕದಲ್ಲಿ ಸಹ ಬ್ಯಾಂಕ್ ಸಾಲದ ಪ್ರಗತಿ ಶೇ. ೮.೮ಕ್ಕೆ ಕುಸಿದಿದೆ ಎಂದು ಹೇಳುವ ವರದಿಯಲ್ಲಿ ಸಹ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟೀಕೆ ಮಾಡಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com