ಸಾಮಾಜಿಕ ತಾಣ ಖಾತೆಗೆ ಆಧಾರ್ ಲಿಂಕ್: ಸುಪ್ರೀಂ ಕೋರ್ಟ್ ನಲ್ಲಿ ಪಿಐಎಲ್ ವಜಾ

ಸೋಷಿಯಲ್ ಮೀಡಿಯಾ  ಅಕೌಂಟ್ ಗಳನ್ನು  ಆಧಾರ್‌ನೊಂದಿಗೆ ಜೋಡಿಸಲು ಆದೇಶಿಸಬೇಕೆಂದು  ಕೋರಿ   ಸಲ್ಲಿಸಲಾಗಿದ್ದ  ಸಾರ್ವಜನಿಕ ಹಿತಾಸಕ್ತಿ  ಆರ್ಜಿಯೊಂದನ್ನು    ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿದೆ. 
 ಸುಪ್ರೀಂ ಕೋರ್ಟ್
 ಸುಪ್ರೀಂ ಕೋರ್ಟ್

ನವದೆಹಲಿ: ಸೋಷಿಯಲ್ ಮೀಡಿಯಾ  ಅಕೌಂಟ್ ಗಳನ್ನು  ಆಧಾರ್‌ನೊಂದಿಗೆ ಜೋಡಿಸಲು ಆದೇಶಿಸಬೇಕೆಂದು  ಕೋರಿ   ಸಲ್ಲಿಸಲಾಗಿದ್ದ  ಸಾರ್ವಜನಿಕ ಹಿತಾಸಕ್ತಿ  ಆರ್ಜಿಯೊಂದನ್ನು    ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ನಕಲಿ ಖಾತೆಗಳನ್ನು ನಿರ್ಬಂಧಿಸುವ ಉದ್ದೇಶದಿಂದ  ಈ ಸಾರ್ವಜನಿಕ ಹಿತಾಸಕ್ತಿ ಆರ್ಜಿಯನ್ನು  ಸುಪ್ರೀಂ ಕೋರ್ಟ್‌ನಲ್ಲಿ  ಸಲ್ಲಿಸಲಾಗಿತ್ತು.  ಎಲ್ಲಾ ವಿಷಯಗಳಿಗೂ ಸರ್ವೋಚ್ಛ ನ್ಯಾಯಾಲಯ ಬಾಗಿಲು ತಟ್ಟುವ ಅವಶ್ಯಕತೆಯಿಲ್ಲ ಎಂದು  ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
 
ಸಾರ್ವಜನಿಕ ಹಿತಾಸಕ್ತಿ ಆರ್ಜಿ ಸಂಬಂಧ ವಾದ ಹಾಗೂ ಪ್ರತಿವಾದ  ಆಲಿಸಿದ  ಸುಪ್ರೀಂ ಕೋರ್ಟ್ ನ್ಯಾಯಪೀಠ..    ಈ ವಿಷಯ ಈಗಾಗಲೇ  ಮದ್ರಾಸ್ ಹೈಕೋರ್ಟ್ ಮುಂದೆ ಪರಿಶೀಲನೆಗೆ ಬಂದಿದೆ. ಪ್ರತಿಯೊಂದು ವಿಷಯವನ್ನೂ  ಸುಪ್ರೀಂ ಕೋರ್ಟ್  ಮುಂದೆ ತರಬಾರದು  ಎಂದು ಅಭಿಪ್ರಾಯಪಟ್ಟಿತು.  

ನಕಲಿ ಖಾತೆಗಳು,  ಪಾವತಿ ಸುದ್ದಿಗಳ ಪ್ರಸಾರ   ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚುತ್ತಿವೆ.  ಇದನ್ನು ತಡೆಗಟ್ಟಲು ಪ್ರತಿ ಖಾತೆಗೆ ಆಧಾರ್ ಸಂಖ್ಯೆಯನ್ನು ಜೋಡಿಸಲು ಆದೇಶಿಸಬೇಕು  ಎಂದು ವಕೀಲ ಹಾಗೂ ಬಿಜೆಪಿ ನಾಯಕ  ಅಶ್ವಿನಿ ಉಪಾದ್ಯಾಯ   ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ  ಆರ್ಜಿ ಸಲ್ಲಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com