ದೇಗುಲದ ಕಂಬಗಳ ಮೇಲೆ ಟಿಆರ್ ಎಸ್ ಚಿನ್ಹೆ, ಕೆಸಿಆರ್ ಮುಖ; ಹಿಂದೂಪರ ಸಂಘಟನೆಗಳ ತೀವ್ರ ಆಕ್ರೋಶ

ದೇಗುಲದ ಕಂಬಗಳ ಮೇಲೆ ಟಿಆರ್ ಎಸ್ ಪಕ್ಷದ ಚಿನ್ಹೆ ಮತ್ತು ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್ ಅವರ ಮುಖ ಕೆತ್ತನೆ ಮಾಡಿದ್ದರಿಂದ ಹಿಂದೂಪರ ಸಂಘಟನೆಗಳು ಸರ್ಕಾರದ ಕ್ರಮದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.
ದೇಗುಲದ ಕಂಬಗಳ ಮೇಲೆ ಸಿಎಂ ಕೆಸಿಆರ್ ಚಿನ್ಹೆ
ದೇಗುಲದ ಕಂಬಗಳ ಮೇಲೆ ಸಿಎಂ ಕೆಸಿಆರ್ ಚಿನ್ಹೆ
Updated on

ತೆಲಂಗಾಣದ ಯಾದಗಿರಿ ಜಿಲ್ಲೆಯ ಲಕ್ಷ್ಮೀ ನರಸಿಂಹ ಸ್ವಾಮಿ ದೇಗುಲದಲ್ಲಿ ಘಟನೆ

ಹೈದರಾಬಾದ್: ದೇಗುಲದ ಕಂಬಗಳ ಮೇಲೆ ಟಿಆರ್ ಎಸ್ ಪಕ್ಷದ ಚಿನ್ಹೆ ಮತ್ತು ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್ ಅವರ ಮುಖ ಕೆತ್ತನೆ ಮಾಡಿದ್ದರಿಂದ ಹಿಂದೂಪರ ಸಂಘಟನೆಗಳು ಸರ್ಕಾರದ ಕ್ರಮದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.

ತೆಲಂಗಾಣದ ಯಾದಗಿರಿ ಜಿಲ್ಲೆಯಲ್ಲಿ ಹಳೆಯ ಲಕ್ಷ್ಮೀ ನರಸಿಂಹ ಸ್ವಾಮಿ ದೇಗುಲದ ಜೀರ್ಣೋದ್ದಾರ ಮಾಡಲಾಗುತ್ತಿದ್ದು, ಈ ದೇವಾಲದಲ್ಲಿ ನಿರ್ಮಿಸಲಾಗುತ್ತಿರುವ ಕಂಬಗಳಲ್ಲಿ ತೆಲಂಗಾಣದ ಆಡಳಿತಾರೂಢ ಪಕ್ಷ ಟಿಆರ್ ಎಸ್ ನ ಕಾರಿನ ಚಿನ್ಹೆ ಮತ್ತು ಸಿಎಂ ಚಂದ್ರಶೇಖರ್ ರಾವ್ ಅವರ ಮುಖವನ್ನು ಕೆತ್ತನೆ ಮಾಡಲಾಗಿದೆ. ದೇವಾಲಯದ ಸುಮಾರು ಐದು ಸಾವಿರಕ್ಕೂ ಅಧಿಕ ಜಾಗಗಳಲ್ಲಿ ಇಂತಹ ಕೆತ್ತನೆಗಳನ್ನು ಕೆತ್ತಲಾಗಿದೆ ಎಂದು ತಿಳಿದುಬಂದಿದೆ.

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರ ಮತ್ತು ಸ್ಥಳೀಯ ಅಧಿಕಾರಿಗಳ ವಿರುದ್ಧ ಇದೀಗ ಭಜರಂಗದಳದ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದು, ಕೆಸಿಆರ್ ಏನೂ ದೇವರಲ್ಲ. ಅವರ ರಾಜಕೀಯ ಉದ್ದೇಶಕ್ಕಾಗಿ ದೇವಾಲಯವನ್ನೂ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದೆ.

ಈ ಕುರಿತು ಮಾತನಾಡಿದ ಭಜರಂಗದಳದ ರಾಜ್ಯ ಘಟಕದ ವಕ್ತಾರ, ಸುಭಾಷ್, 'ಸರ್ಕಾರದ ಇಂತಹ ಕೃತ್ಯವನ್ನು ನಾವು ಬಲವಾಗಿ ಖಂಡಿಸುತ್ತೇವೆ. ಇತಿಹಾಸ ಪ್ರಸಿದ್ಧ ದೇಗುಲದಲ್ಲಿ ಇಂತಹ ಕೃತ್ಯ ಅಸಹನೀಯ. ಅಭಿವೃದ್ದಿ ಅಥವಾ ಜೀರ್ಣೋದ್ಧಾರದ ಹೆಸರಲ್ಲಿ ಸ್ವಾರ್ಥ ರಾಜಕೀಯಕ್ಕೆ ನಾವು ಅವಕಾಶ ನೀಡುವುದಿಲ್ಲ. ಇದು ಹಿಂದೂಗಳ ಧಾರ್ಮಿಕ ಭಾವನಕ್ಕೆ ಧಕ್ಕೆ ತರುವ ಸಂಗತಿಯಾಗಿದ್ದು, ಸಿಎಂ ಕೆಸಿಆರ್ ಕೂಡಲೇ ಕ್ಷಮೆ ಕೇಳಿ ಸ್ಥಂಬಗಳನ್ನು ಬದಲಿಸಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ತೀವ್ರ ಹೋರಾಟ ನಡೆಸುತ್ತೇವೆ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com