74ರ ವಯಸ್ಸಿನಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದ ದಂಪತಿಗೆ ಐಸಿಯುನಲ್ಲಿ ಚಿಕಿತ್ಸೆ!
74ರ ವಯಸ್ಸಿನಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದ ದಂಪತಿಗೆ ಐಸಿಯುನಲ್ಲಿ ಚಿಕಿತ್ಸೆ!

74ರ ವಯಸ್ಸಿನಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದ ದಂಪತಿಗೆ ಐಸಿಯುನಲ್ಲಿ ಚಿಕಿತ್ಸೆ!  

74 ನೇ ವಯಸ್ಸಿನಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ ವೃದ್ಧ ದಂಪತಿಗಳ ಬಗ್ಗೆ ನೀವು ಕಳೆದ ವಾರವಷ್ಟೇ ಓದಿದ್ದಿರಿ. ಈಗ ಈ ದಂಪತಿ ಆಸ್ಪತ್ರೆಗೆ ದಾಖಲಾಗಿದ್ದು ಐಸಿಯುವಿನಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ. 

ಹೈದರಾಬಾದ್: 74 ನೇ ವಯಸ್ಸಿನಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ ವೃದ್ಧ ದಂಪತಿಗಳ ಬಗ್ಗೆ ನೀವು ಕಳೆದ ವಾರವಷ್ಟೇ ಓದಿದ್ದಿರಿ. ಈಗ ಈ ದಂಪತಿ ಆಸ್ಪತ್ರೆಗೆ ದಾಖಲಾಗಿದ್ದು ಐಸಿಯುವಿನಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ. 

ಅವಳಿ ಮಕ್ಕಳ ತಂದೆ ರಾಜಾ ರಾವ್ (80) ಗೆ ಹೃದಯಾಘಾತ ಉಂಟಾಗಿದೆ ಎಂಬ ವರದಿಗಳು ಪ್ರಕಟವಾಗಿತ್ತು. ಆದರೆ ಎನ್ ಡಿಟಿವಿಯ ವರದಿಯ ಪ್ರಕಾರ ರಾಜಾ ರಾವ್ ಅವರಿಗೆ ಹೃದಯಾಘಾತ ಆಗಿಲ್ಲ, ಶ್ವಾಸಕೋಶದ ಸೋಂಕು ತಗುಲಿತ್ತು, ಈ ಕಾರಣದಿಂದಾಗಿ ಅವರನ್ನು ಐಸಿಯು ವಿಭಾಗದ ಕೋಠಡಿಯಲ್ಲಿ ಚಿಕಿತ್ಸೆ ನೀಡಲಾಗಿತ್ತು ಎಂದು ವೈದ್ಯರು ಹೇಳಿದ್ದಾರೆ. 

ಇನ್ನು ಮಕ್ಕಳ ತಾಯಿ  ಮಂಗ್ಯಮ್ಮ ಅವರನ್ನು ಪ್ರಸವದ ನಂತರ ಉಂಟಾಗಬಹುದಾದ ಸೋಂಕಿನಿಂದ ತಪ್ಪಿಸಲು ಐಸಿಯುನಲ್ಲಿರಿಸಲಾಗಿತ್ತು ಎಂದು ವೈದ್ಯರು ಸ್ಪಷ್ಟನೆ ನೀಡಿದ್ದಾರೆ.
 
ಅವಳಿ ಮಕ್ಕಳನ್ನು ಅನಗತ್ಯ ಬಾಹ್ಯ ವಾತಾವರಣಕ್ಕೆ ಒಡ್ಡುವುದನ್ನು ತಪ್ಪಿಸುವುದಕ್ಕಾಗಿ ನವಜಾತ ಶಿಶುಗಳನ್ನಿರಿಸುವ ನಿಗಾ ಘಟಕದಲ್ಲಿರಿಸಲಾಗಿತ್ತು. ಭಾನುವಾರ ವೃದ್ಧ ದಂಪತಿ ಅವಳಿ ಮಕ್ಕಳೊಂದಿಗೆ ಮನೆಗೆ ತೆರಳಿದ್ದಾರೆ. ಅಲ್ಲಿ ವೃದ್ಧ ದಂಪತಿಯ ಸಂಬಂಧಿಕರು ಮಕ್ಕಳ ಪೋಷಣೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.

Related Stories

No stories found.

Advertisement

X
Kannada Prabha
www.kannadaprabha.com