ಫೇಸ್ ಬುಕ್ ಪೇಜ್, ಖಾತೆ ಡಿಲೀಟ್ ಆಗಿದ್ದರ ಬಗ್ಗೆ ಕಾಂಗ್ರೆಸ್ ಪಕ್ಷ ಹೇಳಿದ್ದಿಷ್ಟು!

ಲೋಕಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದ 687 ಪೇಜ್ ಗಳನ್ನು ಫೇಸ್ ಬುಕ್ ಸಂಸ್ಥೆ ತೆಗೆದುಹಾಕಿದೆ.
ಫೇಸ್ ಬುಕ್ ಪೇಜ್, ಖಾತೆ ಡಿಲೀಟ್ ಆಗಿದ್ದರ ಬಗ್ಗೆ ಕಾಂಗ್ರೆಸ್ ಪಕ್ಷ ಹೇಳಿದ್ದಿಷ್ಟು!
ಫೇಸ್ ಬುಕ್ ಪೇಜ್, ಖಾತೆ ಡಿಲೀಟ್ ಆಗಿದ್ದರ ಬಗ್ಗೆ ಕಾಂಗ್ರೆಸ್ ಪಕ್ಷ ಹೇಳಿದ್ದಿಷ್ಟು!
ನವದೆಹಲಿ: ಲೋಕಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದ 687 ಪೇಜ್ ಗಳನ್ನು ಫೇಸ್ ಬುಕ್ ಸಂಸ್ಥೆ ತೆಗೆದುಹಾಕಿದೆ. 
ಅನಧಿಕೃತ ಖಾತೆ, ಪೇಜ್ ಗಳನ್ನು ತೆಗೆದುಹಾಕಿರುವ ಸಾಮಾಜಿಕ ಜಾಲತಾಣ ಸಂಸ್ಥೆಯ ಈ ಕ್ರಮದ ಬಗ್ಗೆ ಕಾಂಗ್ರೆಸ್ ಪ್ರತಿಕ್ರಿಯೆ ನೀಡಿದ್ದು, ಯಾವುದೇ ಅಧಿಕೃತ ಪೇಜ್ ಗಳನ್ನೂ ಫೇಸ್ ಬುಕ್ ತೆಗೆದುಹಾಕಿಲ್ಲ ಎಂದಷ್ಟೇ ಹೇಳಿದೆ. 
ಡಿಲೀಟ್ ಆಗಿರುವ ಖಾತೆಗಳು ಕಾಂಗ್ರೆಸ್ ಐಟಿ ಸೆಲ್ ನೊಂದಿಗೆ ಗುರುತಿಸಿಕೊಂಡಿದ್ದ ವ್ಯಕ್ತಿಗಳಿಗೆ ಸಂಬಂಧಪಟ್ಟದ್ದು, ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಗುತ್ತಿತ್ತು ಅಥವಾ ಅನುಮಾನಾಸ್ಪದವಾಗಿದ್ದವು ಎಂದು ಫೇಸ್ ಬುಕ್ ಹೇಳಿದೆ. 
ಈ ಬಗ್ಗೆ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ನಮ್ಮ ಅಧಿಕೃತ ಸ್ವಯಂ ಸೇವಕರು ನಿರ್ವಹಿಸುತ್ತಿರುವ ಎಲ್ಲಾ ಪೇಜ್ ಗಳೂ ಸಕ್ರಿಯವಾಗಿವೆ, ಈಗಾಗಲೇ ತೆಗೆದುಹಾಕಲಾಗಿರುವ ಪೇಜ್ ಹಾಗೂ ಖಾತೆಗಳ ವಿವರ/ ಪಟ್ಟಿಯ ನಿರೀಕ್ಷೆಯಲ್ಲಿದ್ದೇವೆ ಎಂದು ಕಾಂಗ್ರೆಸ್ ಹೇಳಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com