ಸಿಜೆಐ ವಿರುದ್ಧ ಲೈಂಗಿಕ ಕಿರುಕುಳ ಆರೋಪ: ಸಾಕ್ಷ್ಯಾಧಾರಗಳ ಪರಿಶೀಲಿಸುವಂತೆ ಸಿಬಿಐ, ಐಬಿ, ಪೊಲೀಸ್ ಗೆ 'ಸುಪ್ರೀಂ' ಆದೇಶ

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗಗೋಯ್ ವಿರುದ್ಧದ ಲೈಂಗಿಕ ಕಿರುಕುಳ ಆರೋಪ ಪ್ರಕರಣದ ವಿಚಾರಣೆ ನಡೆಸುತ್ತಿರುವ...

Published: 24th April 2019 12:00 PM  |   Last Updated: 24th April 2019 07:32 AM   |  A+A-


Sexual harassment charge against CJI: SC asks probe agencies to look into evidence by lawyer Utsav Bains

ಸಂಗ್ರಹ ಚಿತ್ರ

Posted By : SVN SVN
Source : The New Indian Express
ನವದೆಹಲಿ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗಗೋಯ್ ವಿರುದ್ಧದ ಲೈಂಗಿಕ ಕಿರುಕುಳ ಆರೋಪ ಪ್ರಕರಣದ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್ ವಿಶೇಷ ತ್ರಿ ಸದಸ್ಯ ಪೀಠ ಪ್ರಕರಣದ ಸಾಕ್ಷ್ಯಾಧಾರಗಳನ್ನು ಪರಿಶೀಲಿಸುವಂತೆ ತನಿಖಾ ಸಂಸ್ಥೆಗಳಿಗೆ ನಿರ್ದೇಶನ ನೀಡಿದೆ.

ಈ ಸಂಬಂಧ ಪ್ರಮುಖ ತನಿಖಾ ಸಂಸ್ಥೆಗಳಾದ ಸಿಬಿಐ, ಐಟಿ, ದೆಹಲಿ ಪೊಲೀಸ್​ ಮುಖ್ಯಸ್ಥರಿಗೆ ತ್ರಿಸದಸ್ಯ ಪೀಠ ಸಮನ್ಸ್ ಜಾರಿ ಮಾಡಿದ್ದು, ಇದು ವಿಚಾರಣೆ ಅಲ್ಲ. ಸಿಬಿಐ, ಐಬಿ  ಮತ್ತು ದೆಹಲಿ ಪೊಲೀಸ್​ ಮುಖ್ಯಸ್ಥರು ನಾವು ಸಭೆ ನಡೆಸಬೇಕಿದೆ. ಹೀಗಾಗಿ ಇಂದು ನ್ಯಾಯಮೂರ್ತಿಗಳ ಚೆಂಬರ್​ನಲ್ಲಿ ಮಧ್ಯಾಹ್ನ 12.30ಕ್ಕೆ ಬಂದು ಭೇಟಿಯಾಗಬೇಕು. ಮತ್ತು ಕೋರ್ಟ್​ ವಿಚಾರಣೆ ಮಧ್ಯಾಹ್ನ 3 ಗಂಟೆಯಿಂದ ಮತ್ತೆ ಆರಂಭವಾಗಲಿದೆ ಎಂದು ಕೋರ್ಟ್​ ಹೇಳಿದೆ.

ಇದು ಪಿತೂರಿ ಎಂದ ಸಿಜೆಐ ಪರ ವಕೀಲ ಉತ್ಸವ್​ ಬೈನ್ಸ್
ಇದೇ ವೇಳೆ ಸುಪ್ರೀಂಕೋರ್ಟ್​ ಮುಖ್ಯನ್ಯಾಯಮೂರ್ತಿ ರಂಜನ್​ ಗೋಗೊಯ್ ಅವರ ಮೇಲಿನ ಲೈಂಗಿಕ ದೌರ್ಜನ್ಯ ಆರೋಪ ಪಿತೂರಿ ಎಂದು ಸಿಜೆಐ ಪರ ವಕೀಲ ಉತ್ಸವ್​ ಬೈನ್ಸ್​ ಅವರು ಇಂದು ಮುಚ್ಚಿದ ಲಕೋಟೆಯಲ್ಲಿ ತ್ರಿಸದಸ್ಯ ಪೀಠದ ಮುಂದೆ ಸಾಕ್ಷ್ಯವನ್ನು ಸಲ್ಲಿಕೆ ಮಾಡಿದ್ದರು. ನ್ಯಾ.ಅರುಣ್ ಮಿಶ್ರಾ, ಆರ್.ಎಫ್​.ನಾರಿಮನ್ ಮತ್ತು ದೀಪಕ್​ ಗುಪ್ತಾ ಅವರಿದ್ದ ನ್ಯಾಯಪೀಠ ಇಂದು ಈ ಸಂಬಂಧ ಸಿಬಿಐ ಮುಖ್ಯಸ್ಥ, ಇಂಟಲಿಜೆನ್ಸ್​ ಬ್ಯುರೋ ಹಾಗೂ ದೆಹಲಿ ಪೊಲೀಸ್​ ಮುಖ್ಯಸ್ಥರಿಗೆ ​ ಸಮನ್ಸ್​ ನೀಡಿದೆ. ಅಂತೆಯೇ ಸಿಜೆಐ ಪರ ವಕಲೀರು ಸಲ್ಲಿಕೆ ಮಾಡಿರುವ ಈ ಸಾಕ್ಷ್ಯಾಧಾರಗಳನ್ನು ಪರಿಶೀಲಿಸುವಂತೆ ಆದೇಶ ನೀಡಿದ್ದಾರೆ.
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp