ಸಿಜೆಐ ವಿರುದ್ಧ ಷಡ್ಯಂತ್ರ ಆರೋಪ ನಿಜವೇ ಆದರೆ ನ್ಯಾಯಾಂಗ ವ್ಯವಸ್ಥೆಯೇ ಬುಡಮೇಲು: ಸುಪ್ರೀಂ ಕೋರ್ಟ್ ಆತಂಕ

ಸುಪ್ರೀಂ ಕೋರ್ಟ್ ನಲ್ಲಿ ನಡೆಯುತ್ತಿರುವ ವಿಚಾರಣೆ ನಿರ್ಣಾಯಕ ಹಂತ ತಲುಪಿದ್ದು, ಸಿಜೆಐ ವಿರುದ್ಧದ 'ಷಡ್ಯಂತ್ರ ಆರೋಪ' ನಿಜವೇ ಆದರೆ...

Published: 24th April 2019 12:00 PM  |   Last Updated: 25th April 2019 12:58 PM   |  A+A-


Will go to the root of lawyer's claims of larger conspiracy to frame CJI Ranjan Gogoi: Supreme Court

ಸಂಗ್ರಹ ಚಿತ್ರ

Posted By : SVN
Source : PTI
ನವದೆಹಲಿ: ತೀವ್ರ ಕುತೂಹಲ ಕೆರಳಿಸಿದ್ದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗಗೋಯ್ ಅವರ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನಲ್ಲಿ ನಡೆಯುತ್ತಿರುವ ವಿಚಾರಣೆ ನಿರ್ಣಾಯಕ ಹಂತ ತಲುಪಿದ್ದು, ಸಿಜೆಐ ವಿರುದ್ಧದ 'ಷಡ್ಯಂತ್ರ ಆರೋಪ' ನಿಜವೇ ಆದರೆ ನ್ಯಾಯಾಂಗ ವ್ಯವಸ್ಥೆಯೇ ಬುಡಮೇಲಾಗುತ್ತದೆ ಎಂದು ಕೋರ್ಟ್ ಆತಂಕ ವ್ಯಕ್ತಪಡಿಸಿದೆ.

ನ್ಯಾಯಮೂರ್ತಿ ರಂಜನ್ ಗಗೋಯ್ ಅವರ ಪರ ವಾದ ಮಂಡಿಸುತ್ತಿರುವ ಹಿರಿಯ ವಕೀಲ ಉತ್ಸವ್ ಬೈನ್ಸ್ ಅವರ ವಾದಕ್ಕೆ ಸಂಬಂಧಿಸಿದಂತೆ ತನ್ನ ಅಭಿಪ್ರಾಯ ವ್ಯಕ್ತಪಡಿಸಿರುವ ತ್ರಿಸದಸ್ಯ ಪೀಠ, ಒಂದು ವೇಳೆ ಉತ್ಸವ್ ಬೈನ್ಸ್ ಅವರ ವಾದದಂತೆ ಸಿಜೆಐ ವಿರುದ್ಧದ 'ಷಡ್ಯಂತ್ರ ಆರೋಪ' ನಿಜವೇ ಆದರೆ ಆಗ ನ್ಯಾಯಾಂಗ ವ್ಯವಸ್ಥೆಯೇ ಬುಡಮೇಲಾಗುತ್ತದೆ. ಅಲ್ಲದೆ ಭವಿಷ್ಯದ ದಿನಗಳಲ್ಲಿ ಇದು ಹೀಗೆಯೇ ಮುಂದುವರೆದರೆ ನ್ಯಾಯಾಧೀಶರಿಗಾಗಲೀ, ನ್ಯಾಯಾಂಗ ವ್ಯವಸ್ಥೆಗಾಗಲಿ ಉಳಿಗಾಲವಿರುವುದಿಲ್ಲ ಎಂದು ಪೀಠ ಆತಂಕ ವ್ಯಕ್ತಪಡಿಸಿದೆ.

ಅಂತೆಯೇ ನ್ಯಾಯಮೂರ್ತಿ ರಂಜನ್ ಗಗೋಯ್ ಅವರ ವಿರುದ್ಧ ಷಡ್ಯಂತ್ರಕ್ಕೆ ಸಂಬಂಧಿಸಿದಂತೆ ತಮ್ಮ ಬಳಿ ಪ್ರಬಲ ಪುರಾವೆ ಇದೆ ಎಂದು ಅವರ ಪರ ವಕೀಲ ಉತ್ಸವ್ ಸಿಂಗ್ ಬೈನ್ಸ್ ವಾದ ಮಂಡಿಸಿದ್ದು, ಈ ವಾದಕ್ಕೆ ಸಂಬಂಧಿಸಿದಂತೆ ಗುರುವಾರ ಬೆಳಗ್ಗೆ ಅಫಿಡವಿಟ್ ಸಲ್ಲಿಸುವಂತೆಯೂ ಪೀಠ ಸೂಚನೆ ನೀಡಿದೆ. ಆ ಮೂಲಕ ಈ ಸಾಕ್ಷ್ಯಾಧಾರಕ್ಕೆ ಸಂಬಂಧಿಸಿದಂತೆ ತಾನು ಗುರುವಾರ ವಿಚಾರಣೆ ನಡೆಸುವುದಾಗಿಯೂ ಕೋರ್ಟ್ ಹೇಳಿದೆ.

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮುಖ್ಯನ್ಯಾಯಮೂರ್ತಿ ರಂಜನ್ ಗೋಗೊಯ್ ಅವರನ್ನು ಸಿಲುಕಿಸಲು ಪಿತೂರಿ ನಡೆಸಲಾಗಿದೆ ಎಂಬ ತಮ್ಮ ಹೇಳಿಕೆ ಸಂಬಂಧ ನಾಳೆ ಮತ್ತೊಂದು ಪ್ರಮಾಣ ಪತ್ರ ಸಲ್ಲಿಸಲು  ವಕೀಲ  ಉತ್ಸವ್ ಬೈನ್ಸ್ ಅವರಿಗೆ ಸುಪ್ರೀಂ ಕೋರ್ಟ್ ಬುಧವಾರ ಕಾಲಾವಕಾಶ ನೀಡಿದೆ. ತಮ್ಮ ಹೇಳಿಕೆ  ರುಜುವಾತು ಪಡಿಸಲು  ನಾಳೆ ಮತ್ತೊಂದು ಪ್ರಮಾಣಪತ್ರ ಸಲ್ಲಿಸುವಂತೆ ವಕೀಲ ಬೈನ್ಸ್ ಅವರಿಗೆ   ಆದೇಶಿಸಿದ   ನ್ಯಾಯಮೂರ್ತಿ ಅರುಣ್ ಮಿಶ್ರಾ ಅವರನ್ನೊಳಗೊಂಡ ನ್ಯಾಯಪೀಠ, ಪ್ರಕರಣವನ್ನು ಮತ್ತೆ ನಾಳೆ ಬೆಳಗ್ಗೆ  10.30ಕ್ಕೆ ವಿಚಾರಣೆ ನಡೆಸುವುದಾಗಿ ತಿಳಿಸಿತು. 

'ರಂಜನ್ ಗಗೋಯ್ ಅವರ ವಿರುದ್ಧ ಷಡ್ಯಂತ್ರಕ್ಕೆ ಸಂಬಂಧಿಸಿದಂತೆ ತಮ್ಮ ಬಳಿ ಪ್ರಬಲ ಪುರಾವೆ ಇದೆ ಎಂದು ಹೇಳಿರುವ ವಕೀಲ ಉತ್ಸವ್ ಸಿಂಗ್ ಬೈನ್ಸ್ ವಾದಕ್ಕೆ ಸಂಬಂಧಿಸಿದಂತೆ ಕೋರ್ಟ್ ವಿಚಾರಣೆ ನಡೆಸಲಿದ್ದು, ನಾಳೆ ಅವರು ಸಲ್ಲಿಕೆ ಮಾಡಲಿರುವ ದಾಖಲೆಗೆ ಅನುಗುಣವಾಗಿಯೇ ವಿಚಾರಣೆ ನಡೆಸಬಹುದು. ನ್ಯಾಯಾಂಗದ ಮೇಲೆ ಪ್ರಭಾವ ಬೀರುವ ಮತ್ತು ನ್ಯಾಯದಾನವನ್ನು ತಿರುಚುವ ಪ್ರಯತ್ನಗಳನ್ನು ನ್ಯಾಯಾಲಯ ಎಂದಿಗೂ ಸಹಿಸುವುದಿಲ್ಲ. ಒಂದು ವೇಳೆ ಇದು ಸಾಧ್ಯವಾಗಿದ್ದೇ ಆದರೆ ಆಗ ಭವಿಷ್ಯದ ದಿನಗಳಲ್ಲಿ ನ್ಯಾಯಾಧೀಶರಿಗಾಗಲೀ, ನ್ಯಾಯಾಂಗ ವ್ಯವಸ್ಥೆಗಾಗಲಿ ಉಳಿಗಾಲ ಇರುವುದಿಲ್ಲ ಎಂದು ಪೀಠ ಹೇಳಿದೆ. ಅಂತೆಯೇ ಪೀಠ ನಿರ್ಣಯಕ್ಕೂ ವಕೀಲ ಉತ್ಸವ್ ಸಿಂಗ್ ಬೈನ್ಸ್  ಅವರ ಷಡ್ಯಂತ್ರ ಆರೋಪಕ್ಕೂ ಯಾವುದೇ ನೇರ-ಪರೋಕ್ಷ ಸಂಬಂಧವಿಲ್ಲ ಮತ್ತು ನ್ಯಾಯಪೀಠ  ಚಲಾಯಿಸುತ್ತಿರುವ ತನ್ನ ನ್ಯಾಯಾಂಗ ಅಧಿಕಾರಗಳಿಂದ ಬಾಕಿ ಉಳಿದ ಯಾವುದೇ ಪ್ರಕರಣಗಳ ಮೇಲೆ ಪರಿಣಾಮ ಉಂಟಾಗುವುದಿಲ್ಲ ಎಂದೂ ಪೀಠ ಸ್ಪಷ್ಟಪಡಿಸಿದೆ.

ಇದಕ್ಕೂ ಮುನ್ನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ  ಮುಖ್ಯನ್ಯಾಯಮೂರ್ತಿ ರಂಜನ್  ಗೋಗೊಯ್ ಅವರನ್ನು ಸಿಲುಕಿಸಲು ಸಂಚು ರೂಪಿಸಲಾಗಿದೆ ಎಂಬ ಹೇಳಿಕೆ ನೀಡಿರುವ  ಹಿರಿಯ ವಕೀಲ  ಉತ್ಸವ್ ಬೈನ್ಸ್ ಅವರನ್ನು   ನ್ಯಾಯಪೀಠ  ವಿಚಾರಣೆ ನಡೆಸಿತು. ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯ್ ಅವರನ್ನು ಸಿಲುಕಿಸಲು  ದೊಡ್ಡ ಸಂಚು ನಡೆಸಲಾಗಿ ಎಂಬ ವಕೀಲ  ಉತ್ಸವ್ ಬೈನ್ಸ್ ಹೇಳಿಕೆಗೆ ಸಂಬಂಧಿಸಿದಂತೆ  ದೆಹಲಿ ಪೊಲೀಸ್ ಆಯುಕ್ತರು, ಸಿಬಿಐ ನಿರ್ದೇಶಕ ಹಾಗೂ ಐಬಿ ಮುಖ್ಯಸ್ಥರು ನ್ಯಾಯಮೂರ್ತಿಗಳ ಕೊಠಡಿಗೆ  ಹಾಜರಾಗಲು ಸುಪ್ರೀಂ ಕೋರ್ಟ್ ಸಮೆನ್ಸ್ ಜಾರಿ ಮಾಡಿತ್ತು. ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗೊಯ್ ಅವರನ್ನು ಸಿಲುಕಿಸಲು  ಪಿತೂರಿ ನಡೆಸಲಾಗಿದೆ ಎಂದು ವಕೀಲ ಬೈನ್ಸ್ ಮಾಡಿರುವ  ಆರೋಪ ಕುರಿತು ಚರ್ಚಿಸಲು  ಈ ಸಮೆನ್ಸ್ ನೀಡಲಾಗಿದೆ ಎಂದು  ಸುಪ್ರೀಂ ಕೋರ್ಟ್ ನ್ಯಾಯಪೀಠ ಹೇಳಿತ್ತು.

ಮಧ್ಯಾಹ್ನ  ವಿಷಯ ಕುರಿತು ಚರ್ಚಿಸಲು ನ್ಯಾಯಾಧೀಶರ ಕೊಠಡಿಗೆ  ಬರುವಂತೆ,  ದೆಹಲಿ ಪೊಲೀಸ್ ಆಯುಕ್ತರು, ಸಿಬಿಐ ನಿರ್ದೇಶಕರು, ಬೇಹುಗಾರಿಕೆ ಮುಖ್ಯಸ್ಥಗೆ ಸಮೆನ್ಸ್ ನೀಡಲಾಗಿದೆ ಎಂದು ಅರುಣ್ ಮಿಶ್ರಾ ನೇತೃತ್ವದ ನ್ಯಾಯಪೀಠ ತಿಳಿಸಿತು. ಇದಕ್ಕೂ ಮುನ್ನ, ವಿಚಾರಣೆಯ ವೇಳೆ,  ವಕೀಲ  ಬೈನ್ಸ್  ಹಾಗೂ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹಾಗೂ ಆರ್ಟಾನಿ ಜನರಲ್ ಕೆ.ಕೆ. ವೇಣುಗೋಪಾಲ್  ಪ್ರಕರಣ ಕುರಿತು ತಮ್ಮ ವಾದ ಮಂಡಿಸಿದರು.
ಸಿಬಿಐ ನಿರ್ದೇಶಕರು ದೆಹಲಿಯಲ್ಲಿ ಇಲ್ಲ,  ಹಾಗಾಗಿ ಅವರ ಬದಲು ಜಂಟಿ ನಿರ್ದೇಶಕರು ಸಭೆಗೆ ಹಾಜರಾಗಲಿದ್ದಮುಖ್ಯ ನ್ಯಾಯಮೂರ್ತಿ ಅವರ ಹೆಸರಿಗೆ ಕಳಂಕ ತರುವ ಸಂಚಿನ ಕುರಿತು ಸುಪ್ರೀಂ ಕೋರ್ಟ್  ಎಸ್ ಐಟಿ ರಚಿಸಲು ಆದೇಶಿಸಬೇಕು ಎಂದು  ತುಷಾರ್ ಮೆಹ್ತಾ ಮನವಿ ಮಾಡಿದರು.

ವಕೀಲ  ಉತ್ಸವ್  ಬೈನ್ಸ್ ,   ತಮ್ಮ ಹೇಳಿಕೆಯನ್ನು ರುಜುವಾತುಪಡಿಸುವ ವಿಶ್ವಸಾರ್ಹ ಪುರಾವೆಗಳನ್ನು ಹೊಂದಿದ್ದು ಅವುಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುತ್ತೇನೆ ಎಂದರು. ನ್ಯಾಯಮೂರ್ತಿ ಅರುಣ್ ಮಿಶ್ರಾ,  ಇಡೀ ವ್ಯವಸ್ಥೆಯನ್ನು  ಸ್ವಚ್ಚಗೊಳಿಸಲು ಮುಖ್ಯನ್ಯಾಯಮೂರ್ತಿ ಬಯಸಿದ್ದಾರೆ. ಸ್ವತಂತ್ರ ನ್ಯಾಯಾಂಗ ವ್ಯವಸ್ಥೆ ಕುರಿತು  ಗಂಭೀರ ಆರೋಪಗಳಿದ್ದು,. ಈ ಎಲ್ಲ  ಆರೋಪಗಳ ಬಗ್ಗೆ ಖಂಡಿತ ಪರಿಶೀಲಿಸಲಾಗುವುದು ಎಂದರು.
Stay up to date on all the latest ರಾಷ್ಟ್ರೀಯ news
Poll
farmers-Protest

ದೆಹಲಿಯಲ್ಲಿ ಟ್ರಾಕ್ಟರ್ ಪೆರೇಡ್ ಸಮಯದಲ್ಲಿನ ಹಿಂಸಾಚಾರವು ರೈತರ ಆಂದೋಲನದ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
flipboard facebook twitter whatsapp