ಸ್ಟ್ಯಾಚ್ಯೂ ಆಫ್ ಯೂನಿಟಿ ಹಿರಿಮೆಗೆ ಮತ್ತೊಂದು ಗರಿ, ಲಂಡನ್ ಮೂಲದ ಪ್ರಶಸ್ತಿ ಪಟ್ಟಿಗೆ ಆಯ್ಕೆ

ವಿಶ್ವದ ಅತೀ ಎತ್ತರದ ಪ್ರತಿಮೆ ಎಂಬ ಕೀರ್ತಿಗೆ ಭಾಜನವಾಗಿರುವ ಸರ್ದಾರ್ ವಲ್ಲಭಬಾಯಿ ಪಟೇಲರ ಏಕತಾ ಪ್ರತಿಮೆ ಮತ್ತೊಂದು ಹಿರಿಮೆಗೆ ಪಾತ್ರವಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ವಿಶ್ವದ ಅತೀ ಎತ್ತರದ ಪ್ರತಿಮೆ ಎಂಬ ಕೀರ್ತಿಗೆ ಭಾಜನವಾಗಿರುವ ಸರ್ದಾರ್ ವಲ್ಲಭಬಾಯಿ ಪಟೇಲರ ಏಕತಾ ಪ್ರತಿಮೆ ಮತ್ತೊಂದು ಹಿರಿಮೆಗೆ ಪಾತ್ರವಾಗಿದೆ.
ಬರೊಬ್ಬರಿ 182 ಮೀಟರ್ ಎತ್ತರದ 'ಏಕತಾ ಪ್ರತಿಮೆ', ಬ್ರಿಟನ್ ಮೂಲದ ಇನ್ ಸ್ಟಿಟ್ಯೂಷನ್ ಆಫ್ ಸ್ಟ್ರಕ್ಚರಲ್ ಎಂಜಿನಿಯರ್ಸ್‌ ಸಂಸ್ಥೆಯ ಪ್ರಶಸ್ತಿ ಪಟ್ಟಿಯ ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದು, ಈ ಸಂಸ್ಥೆ 2019ನೇ ಸಾಲಿಗೆ ನೀಡುವ 'ದಿ ಸ್ಟ್ರಕ್ಚರಲ್ ಅವಾರ್ಡ್ಸ್‌'ಗೆ ಈ ಪ್ರತಿಮೆ ಕೂಡ ನಾಮನಿರ್ದೇಶನವಾಗಿದೆ. ಏಕತಾ ಪ್ರತಿಮೆಯೊಂದಿಗೇ ವಿಶ್ವದ ವಿವಿಧ ಮೂಲೆಯಲ್ಲಿ ನಿರ್ಮಾಣ ಮಾಡಲ್ಪಟ್ಟಿರುವ ಇತರೆ 49 ರಚನೆಗಳೂಕೂಡ ಪ್ರಶಸ್ತಿ ಪೈಪೋಟಿ ಪಟ್ಟಿಯಲ್ಲಿವೆ. 
ಏಕತಾ ಪ್ರತಿಮೆಯ ಗಾತ್ರ ಹಾಗೂ ಅದು ಇರುವ ಸ್ಥಳ ಪ್ರಭಾವಶಾಲಿಯಾಗಿದೆ ಎಂದು ಆಯ್ಕೆ ಸಮಿತಿ ಅಭಿಪ್ರಾಯಪಟ್ಟಿದೆ. ಈ ಏಕತಾ ಪ್ರತಿಮೆಯನ್ನು ಖ್ಯಾತ ಹಿರಿಯ ಶಿಲ್ಪಿ ರಾಮ ವನಜಿ ಸುತಾರ್ ಅವರು ಈ ಪ್ರತಿಮೆ ವಿನ್ಯಾಸಗೊಳಿಸಿದ್ದು, ಲಾರ್ಸನ್ ಆ್ಯಂಡ್ ಟರ್ಬೋ (ಎಲ್‌ ಆ್ಯಂಡ್ ಟಿ) ಸಂಸ್ಥೆ ನಿರ್ಮಿಸಿದೆ.
ಇನ್‌ ಸ್ಟಿಟ್ಯೂಷನ್ ಆಫ್ ಸ್ಟ್ರಕ್ಚರಲ್ ಎಂಜಿನಿಯರ್ಸ್‌ ಸಂಸ್ಥೆಯು ವಿಶ್ವದ ಅತ್ಯುತ್ತಮ ರಚನೆಗಳಿಗೆ ಕಳೆದ 52 ವರ್ಷಗಳಿಂದ ಈ ಸಂಸ್ಥೆ ಪ್ರಶಸ್ತಿ ನೀಡುತ್ತಿದೆ. ಮುಂಬರುವ ನವೆಂಬರ್ 15ಕ್ಕೆ ಲಂಡನ್ ನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಘೋಷಣೆಯಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com