ಸಾವಿಗೂ 1 ಗಂಟೆ ಮುನ್ನ ಹರೀಶ್ ಸಾಳ್ವೆ ಜೊತೆ ಸುಷ್ಮಾ '1 ರೂ. ಶುಲ್ಕ'ದ ಭಾವುಕ ಮಾತು!

ಸುಷ್ಮಾ ಸ್ವರಾಜ್ ವಿದೇಶಾಂಗ ಸಚಿವರಾಗಿದ್ದಾಗ ಕುಲಭೂಷಣ್ ಜಾಧವ್ ಪ್ರಕರಣ ನಿರ್ವಹಿಸಿದ್ದನ್ನು ಯಾರು ತಾನೆ ಮರೆಯುವುದಕ್ಕೆ ಸಾಧ್ಯ?

ನವದೆಹಲಿ: ಸುಷ್ಮಾ ಸ್ವರಾಜ್ ವಿದೇಶಾಂಗ ಸಚಿವರಾಗಿದ್ದಾಗ ಕುಲಭೂಷಣ್ ಜಾಧವ್ ಪ್ರಕರಣ ನಿರ್ವಹಿಸಿದ್ದನ್ನು ಯಾರು ತಾನೆ ಮರೆಯುವುದಕ್ಕೆ ಸಾಧ್ಯ? ವಕೀಲ ಹರೀಶ್ ಸಾಳ್ವೆಯ ಕಾರ್ಯನಿರ್ವಹಣೆಯಂತೂ ಮತ್ತಷ್ಟು ರೋಚಕ. ಈ ಪ್ರಕರಣದ ಜವಾಬ್ದಾರಿಯನ್ನು ಸುಷ್ಮಾ ಸ್ವರಾಜ್ ಅವರು ಕೊನೆಯ ಕ್ಷಣದವರೆಗೂ ಮರೆತಿರಲಿಲ್ಲ.   
ಕೊನೆಯುಸಿರೆಳೆಯುವುದಕ್ಕೂ ಒಂದು ಗಂಟೆ ಮುನ್ನ ಸುಷ್ಮಾ ಸ್ವರಾಜ್ ಹರೀಶ್ ಸಾಳ್ವೆ ಅವರಿಗೆ ಕರೆ ಮಾಡಿ, ಆ.07 ರಂದು ಸಂಜೆ 6 ಕ್ಕೆ ಬಂದು ಒಂದು ರೂಪಾಯಿ ಶುಲ್ಕ ಸ್ವೀಕರಿಸುವಂತೆ ತಿಳಿಸಿದ್ದರು. 
ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ಭಾರತ ಸರ್ಕಾರದ ಪರ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ವಾದ ಮಂಡಿಸುವುದಕ್ಕೆ ಹರೀಶ್ ಸಾಳ್ವೆ ಕೇವಲ ಒಂದು ರೂಪಾಯಿ ಶುಲ್ಕ ಪಡೆಯಲು ನಿರ್ಧರಿಸಿದ್ದರು.
ನಾನು 8:50 ರ ವೇಳೆಗೆ ಅವರೊಂದಿಗೆ ಮಾತನಾಡಿದ್ದೆ, ಅದು ತೀರಾ ಭಾವುಕ ಸಂಭಾಷಣೆಯಾಗಿತ್ತು. ನೀವು ಬಂದು ನನ್ನನ್ನು ಭೇಟಿ ಮಾಡಬೇಕು, ನೀವು ಗೆದ್ದ ಕೇಸ್ ಗೆ ನಾನು ನಿಮಗೆ ಒಂದು ರೂಪಾಯಿ ಶುಲ್ಕ ನೀಡಬೇಕು ಎಂದರು, ಆ ಅಮೂಲ್ಯ ಶುಲ್ಕವನ್ನು ಪಡೆಯಲು ಖಂಡಿತವಾಗಿಯೂ ಬರುತ್ತೇನೆ ಎಂದಿದ್ದೆ. ಅದಕ್ಕೆ ಸಂಜೆ 6 ಗಂಟೆಗೆ ಬನ್ನಿ ಎಂದಿದ್ದನ್ನು ಸಾಳ್ವೆ ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com