ಕೇರಳ ಪ್ರವಾಹ: ಸಾವಿನ ಸಂಖ್ಯೆ 76ಕ್ಕೆ ಏರಿಕೆ, ಇನ್ನೂ 58 ಮಂದಿ ನಾಪತ್ತೆ

ಕೇರಳದಲ್ಲಿ ಸಂಭವಿಸಿರುವ ಭಾರಿ ಮಳೆ ಮತ್ತು ಭೀಕರ ಪ್ರವಾಹದಲ್ಲಿ ಸಾವನ್ನಪ್ಪಿದವರ ಸಂಖ್ಯೆ 76ಕ್ಕೆ ಏರಿಕೆಯಾಗಿದೆ. ಅಂತೆಯೇ ಈ ವರೆಗೂ ನಾಪತ್ತೆಯಾದವರ ಸಂಖ್ಯೆಯೂ 58ಕ್ಕೆ ಏರಿಕೆಯಾಗಿದೆ ಎಂದು ತಿಳಿದುಬಂದಿದೆ.

Published: 12th August 2019 09:32 PM  |   Last Updated: 12th August 2019 09:32 PM   |  A+A-


KeralaFloods02

ಸಂಗ್ರಹ ಚಿತ್ರ

Posted By : Srinivasamurthy VN
Source : ANI

ಕೊಚ್ಚಿ: ಕೇರಳದಲ್ಲಿ ಸಂಭವಿಸಿರುವ ಭಾರಿ ಮಳೆ ಮತ್ತು ಭೀಕರ ಪ್ರವಾಹದಲ್ಲಿ ಸಾವನ್ನಪ್ಪಿದವರ ಸಂಖ್ಯೆ 76ಕ್ಕೆ ಏರಿಕೆಯಾಗಿದೆ. ಅಂತೆಯೇ ಈ ವರೆಗೂ ನಾಪತ್ತೆಯಾದವರ ಸಂಖ್ಯೆಯೂ 58ಕ್ಕೆ ಏರಿಕೆಯಾಗಿದೆ ಎಂದು ತಿಳಿದುಬಂದಿದೆ.

ಹಾಲಿ ವರ್ಷದ ಪ್ರವಾಹದಲ್ಲಿ ಕೇರಳದ ಮಲಪ್ಪುರಂ ಹೆಚ್ಚು ಹಾನಿಗೀಡಾಗಿದ್ದು, ಈ ಜಿಲ್ಲೆಯೊಂದರಲ್ಲೇ 23 ಮಂದಿ ಸಾವನ್ನಪ್ಪಿದ್ದಾರೆ. ಅಂತೆಯೇ 50 ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಲ್ಲಿನ ಕವಲಪ್ಪರ ಗ್ರಾಮದಲ್ಲಿ ಸಂಭವಿಸಿದ ಭೂಕುಸಿತದಲ್ಲೇ 50ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. 

ಉಳಿದಂತೆ ಕಲ್ಲಿಕೋಟೆಯಲ್ಲಿ ಈ ವರೆಗೂ ಮಳೆಯಿಂದಾಗಿ 17 ಮಂದಿ ಸಾವನ್ನಪ್ಪಿದ್ದು, ವಯನಾಡಿನಲ್ಲಿ 12 ಮತ್ತು ಕಣ್ಣೂರಿನಲ್ಲಿ 8 ಮಂದಿ ಸಾವನ್ನಪ್ಪಿದ್ದಾರೆ. ಆ ಮೂಲಕ ಕೇರಳದಲ್ಲಿ ಒಟ್ಟಾರೆ ಸಾವಿನ ಸಂಖ್ಯೆ 76ಕ್ಕೆ ಏರಿಕೆಯಾಗಿದೆ.

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp