ಮಾಜಿ ಐಎಎಸ್ ಅಧಿಕಾರಿ, ಕಾಶ್ಮೀರಿ ರಾಜಕಾರಣಿ ಶಾ ಫೈಸಲ್ ದೆಹಲಿಯಲ್ಲಿ ಬಂಧನ

2009ನೇ ಸಾಲಿನ ಐಎಎಸ್ ಟಾಪರ್ ಹಾಗೂ ಜಮ್ಮು ಮತ್ತು ಕಾಶ್ಮೀರದ ರಾಜಕಾರಣಿ  ಶಾ ಫೈಸಲ್ ಅವರನ್ನು ಬುಧವಾರ ದೆಹಲಿ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.
ಶಾ ಫೈಸಲ್
ಶಾ ಫೈಸಲ್

ನವದೆಹಲಿ: 2009ನೇ ಸಾಲಿನ ಐಎಎಸ್ ಟಾಪರ್ ಹಾಗೂ ಜಮ್ಮು ಮತ್ತು ಕಾಶ್ಮೀರದ ರಾಜಕಾರಣಿ  ಶಾ ಫೈಸಲ್ ಅವರನ್ನು ಬುಧವಾರ ದೆಹಲಿ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.

ವಿದೇಶಕ್ಕೆ ತೆರಳುತ್ತಿದ್ದ ಜಮ್ಮು ಮತ್ತು ಕಾಶ್ಮೀರ ಪೀಪಲ್ಸ್ ಮೂವ್ಮೆಂಟ್ ಪಕ್ಷದ ಅಧ್ಯಕ್ಷ ಶಾ ಫೈಸಲ್ ಅವರನ್ನ ಇಂದು ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಅವರನ್ನುವಾಪಸ್ ಕಾಶ್ಮೀರಕ್ಕೆ ವಾಪಸ್ ಕಳುಹಿಸಲಾಗಿದೆ.

ದೆಹಲಿಯಲ್ಲಿ ಬಂಧನಕ್ಕೊಳಗಾಗಿದ್ದ ಶಾ ಫೈಸಲ್ ಅವರನ್ನು ಸಾರ್ವಜನಿಕ ರಕ್ಷಣಾ ಕಾಯ್ದೆ ಅಡಿ ಶ್ರೀನಗರದಲ್ಲಿ ಮತ್ತೆ ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಾಜಿ ಐಎಎಸ್ ಅಧಿಕಾರಿಯಾದ ಶಾ ಫೈಸಲ್ ಅವರು 370ನೇ ವಿಧಿಯನ್ನು ರದ್ದು ಮಾಡಿದ ಕೇಂದ್ರದ ಕ್ರಮದ ಬಗ್ಗೆ ನಿನ್ನೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದರು.

370ನೇ ವಿಧಿ ರದ್ದಾಗುವ ಮೂಲಕ ಕಾಶ್ಮೀರದ ಮುಖ್ಯವಾಹಿನಿಯೇ ಮುಕ್ತಾಯವಾದಂತಾಗಿದೆ. ಇಲ್ಲಿ ನೀವು ಗುಮಾಸ್ತರಾಗಿರಬೇಕು ಅಥವಾ ಪ್ರತ್ಯೇಕತಾವಾದಿ ಈ ಎರಡೇ ಆಯ್ಕೆ ಇರುವುದು ಎಂದು ಟ್ವೀಟ್ ಮಾಡಿದ್ದರು.

ಶಾ ಫೈಸಲ್ ಅವರು ಟರ್ಕಿ ದೇಶದ ಇಸ್ತಾನ್​ಬುಲ್​ಗೆ ಹೋಗಲು ಇಂದು ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿದ್ದರೆನ್ನಲಾಗಿದೆ. ಮತ್ತೊಂದು ವರದಿ ಪ್ರಕಾರ ಅವರು ಅಮೆರಿಕದ ಬೋಸ್ಟನ್​ಗೆ ಹೊರಟಿದ್ದರೆನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com