ಹೆತ್ತವರಿಂದ ಮಕ್ಕಳ ಸಮಾನ ಪೋಷಣೆಗಾಗಿ ಸುಪ್ರೀಂಗೆ ಅರ್ಜಿ

ಮಕ್ಕಳ ಹಕ್ಕು ಉಲ್ಲಂಘನೆಯಾಗುತ್ತಿರುವ ಹಿನ್ನೆಲೆ ಪೋಷಕರಿಗೆ ಸಮಾನ ಪಾಲನೆ, ಜಂಟಿ ಹೊಣೆಗಾರಿಕೆಯನ್ನು ಅನುಷ್ಠಾನಗೊಳಿಸಬೇಕೆಂದು ಹಾಗೂ ಪೋಷಕರ ವಿಚ್ಛೇದನ ಪ್ರಕರಣಗಳಲ್ಲಿ ಸಿಲುಕಿರುವ ಮಕ್ಕಳ ಬಗ್ಗೆ ನ್ಯಾಯಾಲಯಗಳು ತಮ್ಮ ದೃಷ್ಟಿಕೋನ ಬದಲಿಸುವಂತೆ ‘ಸೇವ್ ಚೈಲ್ಡ್ ಇಂಡಿಯಾ ಫೌಂಡೇಷನ್’ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿ ಮನವಿ ಮಾಡಿದೆ
 

Published: 24th August 2019 06:13 PM  |   Last Updated: 24th August 2019 06:13 PM   |  A+A-


ಸುಪ್ರೀಂ ಕೋರ್ಟ್‌

Posted By : raghavendra
Source : UNI

ಬೆಂಗಳೂರು: ಮಕ್ಕಳ ಹಕ್ಕು ಉಲ್ಲಂಘನೆಯಾಗುತ್ತಿರುವ ಹಿನ್ನೆಲೆ ಪೋಷಕರಿಗೆ ಸಮಾನ ಪಾಲನೆ, ಜಂಟಿ ಹೊಣೆಗಾರಿಕೆಯನ್ನು ಅನುಷ್ಠಾನಗೊಳಿಸಬೇಕೆಂದು ಹಾಗೂ ಪೋಷಕರ ವಿಚ್ಛೇದನ ಪ್ರಕರಣಗಳಲ್ಲಿ ಸಿಲುಕಿರುವ ಮಕ್ಕಳ ಬಗ್ಗೆ ನ್ಯಾಯಾಲಯಗಳು ತಮ್ಮ ದೃಷ್ಟಿಕೋನ ಬದಲಿಸುವಂತೆ ‘ಸೇವ್ ಚೈಲ್ಡ್ ಇಂಡಿಯಾ ಫೌಂಡೇಷನ್’ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿ ಮನವಿ ಮಾಡಿದೆ

ಶನಿವಾರ ಸುದ್ದಿಗೋಷ್ಠಿಯಲ್ಲಿ ಪೌಂಡೇಷನ್ ಸದಸ್ಯ ಹಾಗೂ ನ್ಯಾಯವಾದಿ ಪ್ರದೀಪ್‌ಕುಮಾರ್ ಕೌಶಿಕ್ ಮಾತನಾಡಿ, ಅರ್ಜಿ ಪುರಸ್ಕರಿಸಿದ ಸುಪ್ರೀಂ ಕೋರ್ಟ್ ಮೆಚ್ಚುಗೆ ವ್ಯಕ್ತಪಡಿಸಿದ್ದು, ಕಳೆದ ಜುಲೈ 19ರಂದು ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ ಈ ರಿಟ್ ಅರ್ಜಿಯು ಒಂದು ‘ನೋಬಲ್ ಕಾಸ್ ಎಂದು ಹೇಳಿದ್ದು, ಜತೆಗೆ ಪ್ರತಿವಾದಿಗಳಿಗೆ ನೋಟಿಸ್ ನೀಡುವಂತೆ ತಿಳಿಸಿದೆ ಎಂದರು.

ದೇಶದಲ್ಲಿ ಶೇ, 16 ವಿಚ್ಚೇದನ ಪ್ರಕರಣಗಳಿದ್ದು ಅದರಲ್ಲಿ ಸಿಲುಕಿರುವ ಮಕ್ಕಳ ಅಳಲು ಸಮಾಜ ಹಾಗೂ ನ್ಯಾಯಾಲಯಗಳ ಗಮನಕ್ಕೆ ಬಂದಿಲ್ಲ.ಕೌಟುಂಬಿಕ ವಿವಾದದಿಂದ ತಂದೆ ಇಲ್ಲದೆ ತಾಯಿಯ ಜತೆಗಷ್ಟೇ ಮಕ್ಕಳು ಬೆಳೆಯುವುದರಿಂದ ಮಕ್ಕಳ ಬಾಲ್ಯ, ವಾತ್ಸಲ್ಯ, ಪಾಲನೆ ಕಸಿದುಕೊಂಡಂತಾಗುತ್ತದೆ.ಅದಕ್ಕಾಗಿ ಮಕ್ಕಳ ಬೆಳವಣಿಗೆ, ಪೋಷಣೆಯಲ್ಲಿ ಪೋಷಕರು ಸಮಾನ ಪಾತ್ರವಹಿಸುವಂತೆ ಸೂಚಿಸಬೇಕು ಎಂದು ಅರ್ಜಿಯಲ್ಲಿ ಸೂಚಿಸಲಾಗಿದೆ.

ವಿವಾಹದ ವಿವಾದದಲ್ಲಿ ಮಗುವನ್ನು ಒಬ್ಬರಿಗೆ ಸೀಮಿತವಾಗಿಸಬಾರದು ಇದಕ್ಕಾಗಿಪೋಷಕರ ನಡುವೆ ಪಾಲನೆ ಬಗೆಗೆ ಒಪ್ಪಂದವಾಗಬೇಕು.ಇದಕ್ಕೆ ಸುಪ್ರೀಂ ನಿಂದ ಸಕಾರಾತ್ಮಕ ಸ್ಪಂದನೆ ಇದೆ ಎಂದು ಹೇಳಿದ ಅವರು ಸಮಾಜದಲ್ಲಿ ಈ ಸಂಬಂಧ ಜಾಗೃತಿ ಮೂಡುವ ಅಗತ್ಯವನ್ನು ಹೇಳಿದ್ದಾರೆ.

Stay up to date on all the latest ರಾಷ್ಟ್ರೀಯ news
Poll
Farmers_ride_tractors1

ರೈತರು ದೆಹಲಿಯಲ್ಲಿ ತಮ್ಮ ಗಣರಾಜ್ಯೋತ್ಸವ ದಿನದ ಟ್ರಾಕ್ಟರ್ ರ್ಯಾಲಿಯನ್ನು ನಿಲ್ಲಿಸಬೇಕೇ?


Result
ಹೌದು
ಬೇಡ
flipboard facebook twitter whatsapp