ಕೇಂದ್ರದ ಮಾಜಿ ಸಚಿವೆ ರೇಣುಕಾ ಚೌಧುರಿ ವಿರುದ್ಧ ಜಾಮೀನು ರಹಿತ ವಾರಂಟ್!

ಕಾಂಗ್ರೆಸ್  ಹಿರಿಯ ನಾಯಕಿ ರೇಣುಕಾ ಚೌಧರಿ ಅವರಿಗೆ ತೆಲಂಗಾಣದ ಪ್ರಥಮದರ್ಜೆ ಮ್ಯಾಜಿಸ್ಟ್ರೇಟ್ ಕೋರ್ಟ್ ಜಾಮೀನುರಹಿತ ಬಂಧನ ವಾರಂಟ್ ನೀಡಿದೆ.
ರೇಣುಕಾ ಚೌಧುರಿ
ರೇಣುಕಾ ಚೌಧುರಿ

ನವದೆಹಲಿ: ಕಾಂಗ್ರೆಸ್ ಹಿರಿಯ ನಾಯಕಿ ರೇಣುಕಾ ಚೌಧರಿ ಅವರಿಗೆ ತೆಲಂಗಾಣದ ಪ್ರಥಮದರ್ಜೆ ಮ್ಯಾಜಿಸ್ಟ್ರೇಟ್ ಕೋರ್ಟ್ ಜಾಮೀನುರಹಿತ ಬಂಧನ ವಾರಂಟ್ ನೀಡಿದೆ.

ನಾಲ್ಕು ವರ್ಷಗಳ ಹಿಂದೆ ನಡೆದ ವಂಚನೆ ಆರೋಪಕ್ಕೆ ಸಂಬಂಧಿಸಿದಂತೆ ವಾರಂಟ್ ನೀಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ವಿಚಾರಣೆಗೆ ಹಾಜರಾಗದೆ, ನೊಟಿಸ್ ಗೆ ಉತ್ತರವನ್ನೂ ನೀಡದ ಕಾರಣಕ್ಕೆ ಇದೀಗ ಅವರ ವಿರುದ್ಧ ಜಾಮೀನುರಹಿತ ಬಂಧನದ ವಾರೆಂಟ್ ಹೊರಡಿಸಲಾಗಿದೆ.

2014 ರ ತೆಲಂಗಾಣ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಇಲ್ಲಿನ ವ್ಯಾರಾ ವಿಧಾನಸಭಾ ಕ್ಷೇತ್ರದ ಟಿಕೆಟ್ ನೀಡುವುದಾಗಿ ರಾಮ್ಜಿ ನಾಯ್ಕ್ ಎಂಬುವವರ ಬಳಿ 1.20 ಕೋಟಿ ರೂ.ಗಳನ್ನು ರೇಣುಕಾ ಚೌಧರಿ ತೆಗೆದುಕೊಂಡಿದ್ದರು ಎಂದು ರಾಮ್ಜೀ ಪತ್ನಿ ಭುಕ್ಯಾ ಚಂದ್ರಕಲಾ ಆರೋಪಿಸಿದ್ದರು.

ಆದರೆ ಚುನಾವಣೆಯಲ್ಲಿ ಅವರಿಗೆ ಟಿಕೆಟ್ ದೊರೆಯದೆ ಇದ್ದರೂ, ಹಣವನ್ನು ರೇಣುಕಾ ಚೌಧರಿ ವಾಪಸ್ ನೀಡಿರಲಿಲ್ಲ ಎಂಬುದು ಆರೋಪ. ಟಿಕೆಟ್ ವಂಚಿತರಾದ ನಂತರ ಖಿನ್ನತೆ ಅನುಭವಿಸುತ್ತಿದ್ದ ರಾಮ್ಜೀ ನಾಯ್ಕ್ 2014ರ ಅಕ್ಟೋಬರ್ 14 ರಂದು ನಿಧನರಾಗಿದ್ದರು. 2015ರ ಡಿಸೆಂಬರ್  ರಂದು ರೇಣುಕಾ ಚೌಧುರಿ ಅವರ ವಿರುದ್ಧ ಭುಕ್ಯಾ ಕಲಾವತಿ ದೂರು ದಾಖಲಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com