ಹೈದರಾಬಾದ್, ಉ.ಪ್ರದೇಶ ಅತ್ಯಾಚಾರ, ಕೊಲೆ ಸಾಕಷ್ಟು ಬೇಸರ ತಂದಿದೆ: ಪ್ರಿಯಾಂಕಾ

ಹೈದರಾಬಾದ್ ಹಾಗೂ ಉತ್ತರಪ್ರದೇಶ ಅತ್ಯಾಚಾರ, ಕೊಲೆ ಪ್ರಕರಣಗಳು ಸಾಕಷ್ಟು ಬೇಸರವನ್ನು ತಂದಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿಯವರು ಹೇಳಿದ್ದಾರೆ. 

Published: 01st December 2019 01:15 PM  |   Last Updated: 01st December 2019 01:15 PM   |  A+A-


Priyanka

ಪ್ರಿಯಾಂಕಾ ಗಾಂಧಿ

Posted By : Manjula VN
Source : The New Indian Express

ನವದೆಹಲಿ: ಹೈದರಾಬಾದ್ ಹಾಗೂ ಉತ್ತರಪ್ರದೇಶ ಅತ್ಯಾಚಾರ, ಕೊಲೆ ಪ್ರಕರಣಗಳು ಸಾಕಷ್ಟು ಬೇಸರವನ್ನು ತಂದಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿಯವರು ಹೇಳಿದ್ದಾರೆ. 

ಸಾಮಾಜಿಕ ಜಾಲತಾಣ ಟ್ವಿಟರ್'ನಲ್ಲಿ ಟ್ವೀಟ್ ಮಾಡಿರುವ ಅವರು, ಅತ್ಯಾಚಾರ, ಕೊಲೆಯಂತಹ ಘಟನೆಗಳು ನಡೆದಾಗ ಸಮಾಜ ಮಾತನಾಡುವುದಕ್ಕಿಂತಲೂ ಹೆಚ್ಚು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದ್ದಾರೆ. 

ಹೈದರಬಾದ್ ನ ಪಶುವೈದ್ಯ ಮೇಲಿನ ಅತ್ಯಾಚಾರ, ಕೊಲೆ ಹಾಗೂ ಉತ್ತರಪ್ರದೇಶದ ಸಂಭಾಲ್ ನಲ್ಲಿರುವ ಅಪ್ರಾಪ್ತೆ ಮೇಲಿನ ಅತ್ಯಾಚಾರ ಸಾಕಷ್ಟು ಬೇಸರವನ್ನು ತರಿಸಿದೆ. ಅತ್ಯಾಚಾರ ಪ್ರಕರಣ ಕುರಿತು ನನ್ನಲ್ಲಿರುವ ಆಕ್ರೋಶವನ್ನು ಪದಗಳಲ್ಲಿ ಹೇಳಲು ಸಾಧ್ಯವಾಗುತ್ತಿಲ್ಲ. ಸಮಾಜದಲ್ಲಿರುವ ನಾವು ಮಾತನಾಡುವುದಕ್ಕಿಂತಲೂ ಇಂತಹ ಘಟನೆಗಳು ನಡೆದಾಗ ಹೆಚ್ಚೆಚ್ಚು ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಿಲಿಸಿ್ದದಾರೆ. 

ಕೆಲ ದಿನಗಳ ಹಿಂದಷ್ಟೇ ಕಾಮುಕರು ಹೈದರಾಬಾದ್ ನಲ್ಲಿ ಅಟ್ಟಹಾಸ ಮರೆದಿದ್ದರು. ವೈದ್ಯಕೀಯ ಪರೀಕ್ಷೆ ಬಳಿಕ ಗಚಿಬೌಲಿಗೆ ಬಂದಿದ್ದ ಪಶುವೈದ್ಯೆ ಮೇಲೆ ಕಾಮುಕರು ಮುಗಿಬಿದ್ದಿದ್ದರು. ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಬಳಿಕ ಆಕೆಯನ್ನು ಹತ್ಯೆಗೈದು ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದರು. ಇದರಂತೆ ಉತ್ತರಪ್ರದೇಶದಲ್ಲಿಯೂ ಇಂತಹದ್ದೇ ಘಟನೆ ನಡೆದಿತ್ತು. 16 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ವೆಸಗಿ ಬೆಂಕಿ ಹಚ್ಚಿ ಸುಟ್ಟಿದ್ದರು.

Stay up to date on all the latest ರಾಷ್ಟ್ರೀಯ news
Poll
Parliament

ಸಂಸತ್ತಿನ ಈ ಮುಂಗಾರು ಅಧಿವೇಶನವು ಪ್ರಜಾಪ್ರಭುತ್ವದ ಕಗ್ಗೊಲೆಗೆ ಸಾಕ್ಷಿಯಾಯಿತೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp