ಪ್ರಧಾನಿ ಮೋದಿ ಆಫರ್ ಬೆನ್ನಲ್ಲೇ ಮತ್ತೊಂದು ಮಹತ್ವದ ಮಾಹಿತಿ ಸ್ಪೋಟಿಸಿದ ಪವಾರ್!

ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಸಂಬಂಧ  ಪ್ರಧಾನಿ ನರೇಂದ್ರ ಮೋದಿ  ತಮ್ಮಗೆ ಯಾವ ರೀತಿ ಆಫರ್  ನೀಡಿದ್ದರು ಎಂಬುದನ್ನು ಮೊನ್ನೆಯಷ್ಟೇ ಬಹಿರಂಗಪಡಿಸಿದ್ದ ಮಹಾರಾಷ್ಟ್ರದ ಎನ್ ಸಿ ಮುಖ್ಯಸ್ಥ ಶರದ್ ಪವಾರ್ ಇದೀಗ ಮತ್ತೊಂದು ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. 
ಶರದ್ ಪವಾರ್
ಶರದ್ ಪವಾರ್

ಮುಂಬೈ:  ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಸಂಬಂಧ  ಪ್ರಧಾನಿ ನರೇಂದ್ರ ಮೋದಿ  ತಮ್ಮಗೆ ಯಾವ ರೀತಿ ಆಫರ್  ನೀಡಿದ್ದರು ಎಂಬುದನ್ನು ಮೊನ್ನೆಯಷ್ಟೇ ಬಹಿರಂಗಪಡಿಸಿದ್ದ ಮಹಾರಾಷ್ಟ್ರದ ಎನ್ ಸಿ ಮುಖ್ಯಸ್ಥ ಶರದ್ ಪವಾರ್ ಇದೀಗ ಮತ್ತೊಂದು ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. 

ನವೆಂಬರ್ 23 ರಂದು ಇದ್ದಕ್ಕಿದ್ದಂತೆ ಬಿಜೆಪಿ ಜೊತೆಗೆ ಕೈ ಜೋಡಿಸಿದ ಎನ್ ಸಿಪಿ ಮುಖಂಡ  ಅಜಿತ್ ಪವಾರ್ ,  ಸರ್ಕಾರ ರಚನೆ ಸಂಬಂಧ ದೇವೇಂದ್ರ ಫಡ್ನವೀಸ್ ಜೊತೆಗಿನ ಸಂಪರ್ಕ ಹಾಗೂ ಅವರ ಮಾತುಕತೆಗಳ ಬಗ್ಗೆ ತಮ್ಮಗೆ ಗೊತಿತ್ತು ಎಂದಿದ್ದಾರೆ.

ಫಡ್ನವೀಸ್ ಹಾಗೂ ಅಜಿತ್ ಪವಾರ್ ನಡುವಿನ ಮಾತುಕತೆ ಬಗ್ಗೆ ತಿಳಿದಿತ್ತು. ಆದರೆ, ಅಜಿತ್ ರಾಜಕೀಯ ನಡೆ ತಪ್ಪಿನಿಂದ ಕೂಡಿದೆ ಎಂಬುದು ನನ್ನಗೆ ಮನವರಿಕೆಯಾಗಿತ್ತು ಎಂದು ಖಾಸಗಿ ಚಾನೆಲ್ ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. 

ಆದಾಗ್ಯೂ, ಅಜಿತ್  ಅವರ ನಿಲುವನ್ನು ಮೃದುಗೊಳಿಸುವಂತೆ ಕಾಣಿಸಿಕೊಂಡ ಪವಾರ್,  ಸರ್ಕಾರ ರಚನೆ ಹಾಗೂ ಅಧಿಕಾರ ಹಂಚಿಕೆ ಸಂಬಂಧ ಕಾಂಗ್ರೆಸ್ ನಾಯಕರ ಜೊತೆಗಿನ ಚರ್ಚೆಯ ಸಂದರ್ಭದಲ್ಲಿ ಉಂಟಾದ ಭಿನ್ನಾಭಿಪ್ರಾಯಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹಿಂದುತ್ವ ಪ್ರತಿಪಾದಕರಾದ ಶಿವಸೇನೆ ಜೊತೆಗೆ ಮೈತ್ರಿಗೆ ಮನಸ್ಸಿರಲಿಲ್ಲ.ಚುನಾವಣೆ ನಂತರ ಬಿಜೆಪಿ ಹಾಗೂ ಶಿವಸೇನೆ ನಡುವಿನ ಭಿನ್ನಾಭಿಪ್ರಾಯ ತಿಳಿದಿತ್ತು. ಈ ಬೆಳವಣಿಗೆಯನ್ನು ಗಮನಿಸುತ್ತಿದ್ದೇವು. ಆದರೆ, ಅಜಿತ್ ಆ ರೀತಿ ಮಾಡುತ್ತಾರೆ ಎಂದು ನಿರೀಕ್ಷಿರಲಿಲ್ಲ ಎಂದರು. 

ಈ ಬೆಳವಣಿಗೆ ಬೆನ್ನಲ್ಲೇ ದೆಹಲಿಯಲ್ಲಿ ನಡೆದ  ಮಾತುಕತೆ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ತಮ್ಮ ನಡುವೆ ವಾಗ್ವಾದ ನಡೆದಿದೆ. ಆ ಸಭೆಯಲ್ಲಿ ಭಾಗವಹಿಸಬಾರುದು, ಮಾತುಕತೆಯಲ್ಲಿ ತೊಡಗಿಸಿಕೊಳ್ಳಬಾರದು ಎಂದು ಅನ್ನಿಸಿತು. ಅಜಿತ್ ಅಸಮಾಧಾನಗೊಂಡಿದ್ದಾನೆ. ಹೇಗೆ ಕಾಂಗ್ರೆಸ್ ಜೊತೆಗೆ ಕೆಲಸ ಮಾಡುವುದು ಎಂದು ಇತರ ಪಕ್ಷದ ಮುಖಂಡರೊಂದಿಗೆ ಚರ್ಚಿಸಿದ್ದಾನೆ. ಅಧಿಕಾರ ಹಂಚಿಕೆಗೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯವಿದೆ ಎಂದು ತಿಳಿಸಿದರು. 

ಉದ್ಧವ್ ಠಾಕ್ರೆ ಸಂಪುಟಕ್ಕೆ ಅಜಿತ್ ಸೇರ್ಪಡೆಯಾಗುವ ಸಾಧ್ಯತೆ ಇದೆ. ಮುಂಬರುವ ರಾಜ್ಯ ಚಳಿಗಾಲದ ಅಧಿವೇಶನದ ಬಳಿಕ ಈ ಬಗ್ಗೆ ಮಾತುಕತೆ ನಡೆಸಲಾಗುವುದು, ಮಹಾ ಅಘಾಡಿ ಸರ್ಕಾರ ಐದು ವರ್ಷ ಪೂರ್ಣಗೊಳಿಸಲಿದೆ. ಖಾತೆ ಹಂಚಿಕೆಗೆ ಸಂಬಂಧಿಸಿದಂತೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಅವರು ತಿಳಿಸಿದರು. ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಆಧಾರದ ಮೇಲೆ ಸರ್ಕಾರ ರಚನೆಯಾಗಿರುವುದಾಗಿ ಶರದ್ ಪವಾರ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com