
ಸಂಗ್ರಹ ಚಿತ್ರ
ಕೊಚ್ಚಿನ್: ಅಯ್ಯಪ್ಪ ಸ್ವಾಮಿಯ ಪವಿತ್ರ ಯಾತ್ರಾ ಸ್ಥಳ ಶಬರಿಮಲೆಯಲ್ಲಿ ಇನ್ನು ಮುಂದೆ ಮೊಬೈಲ್ ಬಳಕೆ ಮೇಲೆ ಕಠಿಣ ನಿಷೇಧ ಹೇರಲಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಘೋಷಣೆ ಮಾಡಿದೆ.
ಈ ಹಿಂದೆಯೇ ಶಬರಿಮಲೆ ಆವರಣದಲ್ಲಿ ಮೊಬೈಲ್ ಬಳಕೆ ಮೇಲೆ ನಿಷೇಧ ಹೇರಲಾಗಿತ್ತಾದರೂ ಅದರ ಪರಿಣಾಮಕಾರಿ ಜಾರಿ ಸಾಧ್ಯವಾಗಿರಲಿಲ್ಲ. ಇದೀಗ ಈ ಬಗ್ಗೆ ನಿರ್ಧಾರ ಕೈಗೊಂಡಿರುವ ತಿರುವಾಂಕೂರು ದೇವಸ್ವಂ ಮಂಡಳಿ ಶಬರಿಮಲೆ ದೇಗುಲದ ಅವರಣದಲ್ಲಿ ಮೊಬೈಲ್ ಬಳಕೆ ಮೇಲೆ ನಿಷೇಧ ಹೇರಿದೆ.
ಇತ್ತೀಚಿನ ದಿನಗಳಲ್ಲಿ ದೇಗುಲದ ಆವರಣದಲ್ಲಿ ಮೊಬೈಲ್ ಬಳಕೆ ಹೆಚ್ಚಾಗಿದ್ದು, ಎಷ್ಟೇ ನಿಯಂತ್ರಿಸಿದರೂ ಭಕ್ತರು ಅಯ್ಯಪ್ಪ ಸ್ವಾಮಿ ವಿಗ್ರಹದ ಮುಂದೆ ನಿಂತು ಫೋಟೋ ಮತ್ತು ಸೆಲ್ಫಿಕ್ಲಿಕ್ಕಿಸಿಕೊಳ್ಳುತ್ತಿರುತ್ತಾರೆ. ಇದರಿಂದ ಇತರೆ ಭಕ್ತರಿಗೆ ತೊಂದರೆಯಾಗುತ್ತಿದ್ದು, ಇದೇ ಕಾರಣಕ್ಕೆ ದೇವಾಲಯದ ಆವರಣದಲ್ಲಿ ಮೊಬೈಲ್ ಬಳಕೆ ಬೇಡ ಎಂದು ಈ ಹಿಂದೆ ದೇವಸ್ವ ಮಂಡಳಿ ಭಕ್ತರಿಗೆ ಮನವಿ ಮಾಡಿತ್ತು.
ಇದರ ಹೊರತಾಗಿಯೂ ಮೊಬೈಲ್ ಬಳಕೆ ನಿಷೇಧಕ್ಕಾಗಿ ದೇವಸ್ವಂ ಮಂಡಳಿ ಓಂಬುಡ್ಸ್ ಮನ್ ಕೂಡ ಜಾರಿಗೆ ತರಲಾಗಿತ್ತು. ನ್ಯಾಯಮೂರ್ತಿ ಪಿಆರ್ ರಾಮನ್ ನೇತೃತ್ವದ ಓಂಬುಡ್ಸ್ ಮನ್ ತಂಡ ಮೊಬೈಲ್ ಬಳಕೆಯನ್ನು ನಿಯಂತ್ರಿಸುವುದರ ಕುರಿತು ತನ್ನ ವರದಿ ನೀಡಿತ್ತು. ಅಲ್ಲದೆ ಈ ಬಗ್ಗೆ ಕೇರಳ ಹೈಕೋರ್ಟ್ ದೇಗುಲದ ಆಡಳಿತ ಮಾಹಿತಿ ನೀಡಿದ್ದು, ದೇವಾಲಯದ ಆವರಣದಲ್ಲಿ ಯಾವುದೇ ಕಾರಣಕ್ಕೂ ಮೊಬೈಲ್ ಬಳಕೆ, ಫೋಟೋ ತೆಗೆಯುವುದನ್ನು ನಿಷೇಧಿಸಲಾಗಿದೆ ಎಂದು ಹೇಳಿದೆ.
Kerala: Travancore Devaswam Board has banned use of mobile phones around the area near the sanctum sanctorum at Sabarimala Temple. pic.twitter.com/a2T3gvlIF6
— ANI (@ANI) December 4, 2019