ಪೂರ್ವಯೋಜಿತವಲ್ಲ, ಪೊಲೀಸರ ಆತ್ಮರಕ್ಷಣೆಗಾಗಿ ಎನ್ಕೌಂಟರ್: ಡಿಸಿಪಿ ಪ್ರಕಾಶ್ ರೆಡ್ಡಿ!

ಹೈದರಾಬಾದ್ ಪಶುವೈದ್ಯೆ ಹತ್ಯಾಚಾರ ಪ್ರಕರಣದ ಆರೋಪಿಗಳ ಮೇಲಿನ ಎನ್ಕೌಂಟರ್ ಪೂರ್ವಯೋಜಿತವಲ್ಲ. ಪೊಲೀಸರು ಆತ್ಮರಕ್ಷಣೆಗಾಗಿ ಆರೋಪಿಗಳ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಶಂಷಾಬಾದ್ ಡಿಸಿಪಿ ಪ್ರಕಾಶ್ ರೆಡ್ಡಿ ಹೇಳಿದ್ದಾರೆ.
ಎನ್ಕೌಂಟರ್ ನಡೆದ ಸ್ಥಳ
ಎನ್ಕೌಂಟರ್ ನಡೆದ ಸ್ಥಳ

ಹೈದರಾಬಾದ್: ಹೈದರಾಬಾದ್ ಪಶುವೈದ್ಯೆ ಹತ್ಯಾಚಾರ ಪ್ರಕರಣದ ಆರೋಪಿಗಳ ಮೇಲಿನ ಎನ್ಕೌಂಟರ್ ಪೂರ್ವಯೋಜಿತವಲ್ಲ. ಪೊಲೀಸರು ಆತ್ಮರಕ್ಷಣೆಗಾಗಿ ಆರೋಪಿಗಳ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಶಂಷಾಬಾದ್ ಡಿಸಿಪಿ ಪ್ರಕಾಶ್ ರೆಡ್ಡಿ ಹೇಳಿದ್ದಾರೆ.

ಪ್ರಿಯಾಂಕಾರೆಡ್ಡಿ ಅತ್ಯಾಚಾರ ಆರೋಪಿಗಳ ಎನ್ ಕೌಂಟರ್ ಕುರಿತಂತೆ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪ್ರಕಾಶ್ ರೆಡ್ಡಿ ಅವರು, ಎನ್ಕೌಂಟರ್ ಪೂರ್ವಯೊಜಿತವೆಂಬ ಆರೋಪದಲ್ಲಿ ಹುರುಳಿಲ್ಲ. ಆರೋಪಿಗಳನ್ನು ಅಪರಾಧ ನಡೆದ ಸ್ಥಳಕ್ಕೆ ಬೆಳಗ್ಗೆ 3 ಗಂಟೆಗೆ ಕರೆದುಕೊಂಡು ಬಂದು ಕ್ರೈಮ್ ಸೀನ್ ರೀ ಕನ್ಸ್ ಸ್ಟ್ರಕ್ಷನ್ ಗಾಗಿ ಕರೆದುಕೊಂಡು ಬರಲಾಗಿತ್ತು. ಈ ವೇಳೆ ಅವರು ಪೊಲೀಸರ ಶಸ್ತ್ರಾಸ್ತ್ರ ಕಸಿಯಲು ಯತ್ನಿಸಿದರು. ಈ ವೇಳೆ ಪೊಲೀಸರ ಮೇಲೆ ಕಲ್ಲು ತೂರಿ ಪರಾರಿಯಾಗಿಲು ಯತ್ನಿಸಿದರು. ಹೀಗಾಗಿ ಪೊಲೀಸರು ಆತ್ಮ ರಕ್ಷಣೆಗಾಗಿ ಗುಂಡು ಹಾರಿಸಿದ್ದಾರೆ ಎಂದು ಹೇಳಿದ್ದಾರೆ.

ಅಂತೆಯೇ ಘಟನೆಯಲ್ಲಿ ಪ್ರಿಯಾಂಕಾ ರೆಡ್ಡಿ ಪ್ರಕರಣದ ಆರೋಪಿಗಳಾದ ಮಹಮದ್ ಆರಿಫ್, ಜೊಲ್ಲು ನವೀನ್, ಜೊಲ್ಲು ಶಿವ ಮತ್ತು ಚನ್ನಕೇಶವುಲು ಸಾವನ್ನಪ್ಪಿದ್ದಾರೆ. ನಾನು ಕೂಡ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುತ್ತೇನೆ ಎಂದು ಪ್ರಕಾಶ್ ರೆಡ್ಡಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com