2 ಲಕ್ಷ ನಕಲಿ ಬಂದೂಕು ಪರವಾನಿಗೆ: ಜಮ್ಮು-ಕಾಶ್ಮೀರದ 14 ಕಡೆ ಸಿಬಿಐ ದಾಳಿ

ಸುಮಾರು 2 ಲಕ್ಷ ನಕಲಿ ಬಂದೂಕು ಪರವಾನಿಗೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಸೋಮವಾರ ಕೇಂದ್ರಾಡಳಿತ ಪ್ರದೇಶವಾದ ಜಮ್ಮು-ಕಾಶ್ಮೀರದ 14 ಕಡೆ ದಾಳಿ ನಡೆಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಜಮ್ಮು: ಸುಮಾರು 2 ಲಕ್ಷ ನಕಲಿ ಬಂದೂಕು ಪರವಾನಿಗೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಸೋಮವಾರ ಕೇಂದ್ರಾಡಳಿತ ಪ್ರದೇಶವಾದ ಜಮ್ಮು-ಕಾಶ್ಮೀರದ 14 ಕಡೆ ದಾಳಿ ನಡೆಸಿದ್ದಾರೆ.

ಜಮ್ಮು-ಕಾಶ್ಮೀರದ 10 ಜಿಲ್ಲೆಗಳ 14 ಕಡೆ ಸೋಮವಾರ ಬೆಳಿಗ್ಗೆ ಸಿಬಿಐ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ ಎಂದು ವಿಶ್ವಾಸಾರ್ಹ ಮೂಲಗಳು ತಿಳಿಸಿವೆ.

‘ಶ್ರೀನಗರದ ಒಂಭತ್ತು ಕಡೆ, ಜಮ್ಮು-ಕಾಶ್ಮೀರದ ಐದು ಕಡೆ ದಾಳಿಗಳನ್ನು ನಡೆಸಲಾಗಿದೆ.’ ಎಂದು ಮೂಲಗಳು ತಿಳಿಸಿವೆ.

ಜಮ್ಮು, ಕುಪ್ವಾರ, ಬಾರಾಮುಲ್ಲಾ, ಉಧಮ್‍ಪುರ, ಕಿಶ್ತ್‍ವಾರ್, ಶೋಪಿಯಾನ್, ರಜೌರಿ, ದೋಡಾ ಮತ್ತು ಪುಲ್ವಾಮಗಳಲ್ಲಿ ವ್ಯಾಪಿಸಿರುವ ಜಾಗಗಳಲ್ಲಿ ದಾಳಿಗಳನ್ನು ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.

‘ರಾಜ್ಯದ ವಿವಿಧ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಸುಮಾರು 2 ಲಕ್ಷ ಶಸ್ತ್ರಾಸ್ತ್ರ ಪರವಾನಿಗೆಗಳನ್ನು ನೀಡಿದ್ದಾರೆ ಎಂಬ ಆರೋಪಗಳ ಹಿನ್ನೆಯಲ್ಲಿ ದಾಖಲಾಗಿದ್ದ ಎರಡು ಪ್ರಕರಣಗಳ ತನಿಖೆಯ ಭಾಗವಾಗಿ ಈ ದಾಳಿಗಳು ನಡೆದಿವೆ.’ 

ನಿಯಮಗಳನ್ನು ಉಲ್ಲಂಘಿಸಿ, ಜಮ್ಮು-ಕಾಶ್ಮೀರದ ನಿವಾಸಿಗಳಲ್ಲದವರಿಗೂ ಪರವಾನಿಗೆಗಳನ್ನು ಸರ್ಕಾರಿ ಸಿಬ್ಬಂದಿ ಲಂಚ ಪಡೆದು ನೀಡಿದ್ದಾರೆ ಎಂದು ಆರೋಪಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com