ಯಾವುದೇ ಪ್ರತಿಭಟನೆ ನಡೆಸುವ 24 ಗಂಟೆ ಮುನ್ನ ಮಾಹಿತಿ ನೀಡಿ: ವಿದ್ಯಾರ್ಥಗಳಿಗೆ ದೆಹಲಿ ವಿ.ವಿ ಆದೇಶ 

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಹಲವು ವಿಶ್ವವಿದ್ಯಾಲಯಗಳಲ್ಲಿ ಪ್ರತಿಭಟನೆ ಮುಂದುವರಿದಿರುವ ಸಂದರ್ಭದಲ್ಲಿ ದೆಹಲಿ ವಿಶ್ವವಿದ್ಯಾಲಯ ನೊಟೀಸ್ ಜಾರಿ ಮಾಡಿದ್ದು ಯಾವುದೇ ಪ್ರತಿಭಟನೆ ನಡೆಸುವ 24 ಗಂಟೆ ಮೊದಲು ಮಾಹಿತಿ ನೀಡಬೇಕು ಎಂದು ವಿದ್ಯಾರ್ಥಿಗಳಿಗೆ ಹೇಳಿದೆ.

Published: 30th December 2019 10:25 AM  |   Last Updated: 30th December 2019 10:25 AM   |  A+A-


Banner pasted on a wall during a protest against Citizenship Act outside the Jamia Millia Islamia university in New Delhi

ಜಾಮಿಯಾ ವಿ.ವಿ ಹೊರಗೆ ಪೌರತ್ವ ಕಾಯ್ದೆ ವಿರುದ್ಧ ಪ್ರತಿಭಟನೆ

Posted By : Sumana Upadhyaya
Source : The New Indian Express

ನವದೆಹಲಿ; ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಹಲವು ವಿಶ್ವವಿದ್ಯಾಲಯಗಳಲ್ಲಿ ಪ್ರತಿಭಟನೆ ಮುಂದುವರಿದಿರುವ ಸಂದರ್ಭದಲ್ಲಿ ದೆಹಲಿ ವಿಶ್ವವಿದ್ಯಾಲಯ ನೊಟೀಸ್ ಜಾರಿ ಮಾಡಿದ್ದು ಯಾವುದೇ ಪ್ರತಿಭಟನೆ ನಡೆಸುವ 24 ಗಂಟೆ ಮೊದಲು ಮಾಹಿತಿ ನೀಡಬೇಕು ಎಂದು ವಿದ್ಯಾರ್ಥಿಗಳಿಗೆ ಹೇಳಿದೆ.


ಕಳೆದ ಡಿಸೆಂಬರ್ 27ಕ್ಕೆ ದೆಹಲಿ ವಿಶ್ವವಿದ್ಯಾಲಯದ ಪ್ರೊಕ್ಟರ್ ನೀತಾ ಸೆಹಗಲ್ ನೊಟೀಸ್ ನೀಡಿದ್ದು ಅದರಲ್ಲಿ ಪ್ರತಿಭಟನೆಯ ಸಂಘಟಕರು ಕಾರ್ಯಕ್ರಮದ ವಿವರ, ಭಾಷಣಗಾರರ ಪಟ್ಟಿ, ಭಾಗವಹಿಸುವವರ ಸಂಖ್ಯೆಯನ್ನು ಸಹ ನೀಡಬೇಕೆಂದು ಸೂಚಿಸಿದ್ದಾರೆ. ಸಭೆ/ಪ್ರತಿಭಟನೆ ಸೇರುವ ಬಗ್ಗೆ ಪೂರ್ವಾನ್ವಯ ಮಾಹಿತಿ, ಕಲಾ ವಿಭಾಗದ ಹೊರಗೆ ಪ್ರತಿಭಟನೆ ಮತ್ತು ಪಕ್ಕದ ಪ್ರದೇಶದಲ್ಲಿ ಪ್ರತಿಭಟನೆ ನಡೆಸುವ ಬಗ್ಗೆ ಮಾಹಿತಿಯನ್ನು ಕಡ್ಡಾಯವಾಗಿ ನೀಡಬೇಕೆಂದು ಹೇಳಿದೆ.


ಎಡಪಂಥೀಯ ಅಖಿಲ ಭಾರತ ವಿದ್ಯಾರ್ಥಿಗಳ ಒಕ್ಕೂಟ ದೆಹಲಿ ವಿಶ್ವವಿದ್ಯಾಲಯದ ಈ ನಡೆಯನ್ನು ಖಂಡಿಸಿದ್ದು ಇದು ಪ್ರಜಾಪ್ರಭುತ್ವ ವಿರೋಧಿ ಕ್ರಮ, ಪ್ರತಿಭಟನೆ ಮಾಡುವುದು ನಾಗರಿಕರ ಸಾಂವಿಧಾನಿಕ ಹಕ್ಕು. ಅದನ್ನು ಮುಕ್ತವಾಗಿ, ಸ್ವತಂತ್ರವಾಗಿ ನಡೆಸಲು ಬಿಡಬೇಕು ಎಂದು ಹೇಳಿದೆ. 

Stay up to date on all the latest ರಾಷ್ಟ್ರೀಯ news with The Kannadaprabha App. Download now
Poll
'Nationalism', 'citizenship', 'demonetisation' among chapters dropped from CBSE syllabus

ಹಿರಿಯ ತರಗತಿಗಳ ಪಠ್ಯಕ್ರಮವನ್ನು 30% ರಷ್ಟು ಕಡಿಮೆ ಮಾಡುವ ಸಿಬಿಎಸ್‌ಇ ನಡೆ ಸರಿಯೇ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp