ಪಬ್‏ಜಿ ನಿಷೇಧ ಕುರಿತ ಚರ್ಚೆ ನಡುವೆಯೇ ಮುಂಬೈಜೊಡಿಯ ಮದುವೆಯ ಫೋಟೋಶೂಟ್ ವೈರಲ್!

ಸಾಫ್ಟ್ ವೇರ್ ಇಂಜಿನಿಯರ್ ಆಕಾಶ್ ಬಿ. ಜೈನ್, ಸಿಪ್ಲಾ ಉದ್ಯೋಗಿಯಾಗಿರುವ ಸೀಮಾ ಬಾಲಚಂದ್ರ ಅವರ ವಿವಾಹ ಪೂರ್ವ ವೀಡಿಯೋಶೂಟ್ ಒಂದು ಸಾಮಾಜಿಕ ತಾಣಗಳಲ್ಲಿ.....
ಪಿಯುಬಿಜಿ ನಿಷೇಧ ಕುರಿತ ಚರ್ಚೆ ನಡುವೆಯೇ ಮುಂಬೈಜೊಡಿಯ ಮದುವೆಯ ಫೋಟೋಶೂಟ್ ವೈರಲ್!
ಪಿಯುಬಿಜಿ ನಿಷೇಧ ಕುರಿತ ಚರ್ಚೆ ನಡುವೆಯೇ ಮುಂಬೈಜೊಡಿಯ ಮದುವೆಯ ಫೋಟೋಶೂಟ್ ವೈರಲ್!
ಮುಂಬೈ: ಸಾಫ್ಟ್ ವೇರ್ ಇಂಜಿನಿಯರ್ ಆಕಾಶ್ ಬಿ. ಜೈನ್, ಸಿಪ್ಲಾ ಉದ್ಯೋಗಿಯಾಗಿರುವ ಸೀಮಾ ಬಾಲಚಂದ್ರ ಅವರ ವಿವಾಹ ಪೂರ್ವ ಫೋಟೋಶೂಟ್ ಒಂದು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.  ಜನಪ್ರಿಯ ಆನ್ ಲೈನ್ ಆಟ ಪಿಯುಬಿಜಿ ನಿಷೇಧಕ್ಕೆ ಅವರು ನೀಡಿದ ಅಭೂತಪೂರ್ವ ಕರೆಯೇ ಇದಕ್ಕೆ ಕಾರಣವೆನ್ನುವುದು ವಿಶೇಷ.
ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳ ಮಾನಸಿಕ ಸ್ಥಿತಿ ಮೇಲೆ ಪ್ರಭಾವ ಬೀರುವ ಆನ್ ಲೈನ್ ಆಟ ಪಿಯುಬಿಜಿ ನಿಷೇಧಕ್ಕೆ ದೇಶದಾದ್ಯಂತ ಶೈಕ್ಷಣಿಕ ಸಂಸ್ಥೆಗಳು ಮತ್ತು ಇತರ ಸಂಸ್ಥೆಗಳು ಒತ್ತಾಯಿಸುತ್ತಿವೆ.
ಯುವಕ, ಯುವತಿಯರು ಈ ಶೂಟರ್ ಆಟದ "ವ್ಯಸನಿ"ಗಳಾಗಿದ್ದಾರೆ.ವಿಶ್ವಾದ್ಯಂತ ತಮ್ಮ ಸ್ನೇಹಿತರು, ತನ್ನ ಇತರೆ ಸ್ಪರ್ಧಿಗಳೊಡನೆ ಈ ಆಟವಾಡುವುದರಲ್ಲಿ ಹಲವು ಗಂಟೆಗಳ ಕಾಲ ಕಳೆಯಬಯಸುತ್ತಾರೆ. 
ಇದೀಗ ದಕ್ಷಿಣ ಕೊರಿಯಾದ ಸಂಸ್ಥೆ ರಚಿಸಿರುವ ಈ ಆನ್ ಲೈನ್ ಆಟದ ಉಳಿವಿಗಾಗಿ ಆಟದ ಮೇಲಿನ ಪ್ರೀತಿಯುಳ್ಲ ಯುವಕರು ಈ ಆಟದ ರಕ್ಷಣೆಗಾಗಿ ಸೃಜನಾತ್ಮಕ  ಮಾರ್ಗಗಳನ್ನು ಹುಡುಕುತ್ತಿದ್ದಾರೆ.ಇದೇ ರೀತಿ ಆಕಾಶ್ ಸಹ ಈ ಆಟವನ್ನು "ಚಟ"ವಾಗಿಸಿಕೊಂಡಿದ್ದು ಅವರು ಛಾಯಾಗ್ರಾಹಕ ಹರ್ಷ್ ಸಾಳ್ವೆ ಅವರಲ್ಲಿ ತಮ್ಮ ಫೋಟೋಶೂಟ್ ಗಾಗಿ ಪಿಯುಬಿಜಿ ಆಧಾರಿತ ಚಿತ್ರಣ ತೆಗೆಯಲು ಕೇಳಿಕೊಂಡಿದ್ದರು. ಆದರೆ ಇದಕ್ಕೆ ಸಾಮಾಜಿಕ ತಾಣದಲ್ಲಿ ಉತ್ತಮ ಪ್ರತಿಕ್ರಿಯೆ ಸಿಗಲಿದೆ ಎನ್ನುವುದು ತಿಳಿದಿದ್ದರೂ ಈ ಫೋಟೋ ಆಲ್ಬಮ್ ಇಷ್ತರ ಮಟ್ಟಿಗೆ ವೈರಲ್ ಆಗಲಿದೆ ಎಂದು ಭಾವಿಸಿರಲಿಲ್ಲ.
"ಇದೀಗ ನಮ್ಮ ಆಲ್ಬಂ ವೈರಲ್ ಆಗಿದ್ದು ಇದೇ ಬಗೆಯ ಇನ್ನಷ್ಟು ಫೊಟೋಶೂಟ್ ಮಾಡುವಂತೆ ನನಗೆ ಸಾವಿರಾರು ಕರೆಗಳು ಬರುತ್ತಿದೆ."ಮುಂಬೈ ಮೂಲದ ಛಾಯಾಗ್ರಾಹಕ ಹರ್ಷ್ ಹೇಳಿದ್ದಾರೆ.
ಎಲ್ಲಾ ಫೋಟೋಗಳನ್ನು ಪಿಯುಬಿಜಿ ಗೆ ಸಂಬಂಧಿಸಿ ಚಿತ್ರಿಸಲಾಗಿದೆ.ಒಂದು ಚಿತ್ರದಲ್ಲಿ ಜೋಡಿಯು ಎನರ್ಜಿ ಡ್ರಿಂಕ್ಸ್ ಕುಡಿಯುತ್ತಿದ್ದರು. ಇದೇ ವ್ಬೇಳೆ ಆಕಾಶ್ ಫ್ರೈಯಿಂಗ್ ಪ್ಯಾನ್ ಹಿಡಿದಂತೆ ಕಾಣುತ್ತಿದ್ದರು.ವರು ಸ್ನಿಪರ್ ರೈಫಲ್ ಅನ್ನು ಹಿಡಿಯಲು ಪ್ರಯತ್ನಿಸುತ್ತಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಪಿಯುಬಿಜಿ ಆನ್ ಲೈನ್ ಆಟ ಬಹಳ ವಿವಾದಕ್ಕೆ ಕಾರಣವಾಗಿದೆ.ಮುಖ್ಯವಾಗಿ ಇದು ಬಳಕೆದಾರರ ಮಾನಸಿಕ, ದೈಹಿಕ ಆರೋಗ್ಯ ಹಾಳುಗೆಡವಲಾಗುತ್ತಿದೆ ಎಂದು ಆರೋಪಿಸಲಾಗಿದೆ.
ಜನವರಿಯಲ್ಲಿ ಮೊದಲಿಗೆ ಜಮ್ಮು ಮತ್ತು ಕಾಶ್ಮೀರದಫಿಟ್ನೆಸ್ ತರಬೇತುದಾರನೊಬ್ಬ ತನಗೆ ತಾನೇ ಹೊಡೆದುಕೊಂಡು ಮಾನಸಿಕ ಖಿನ್ನತೆಯಿಂದ ಆಸ್ಪ್ತ್ರೆಗೆ ದಾಖಲಾಗಿದ್ದರು.ನವರಿ 20 ರಂದು ಜಮ್ಮು ಮತ್ತು ಕಾಶ್ಮೀರ ವಿದ್ಯಾರ್ಥಿ ಸಂಘದವರು ಹತ್ತು ಹಾಗೂ ಹನ್ನೆರಡನೇ ತರಗರ್ತ್ತಿಯ ವಿದ್ಯಾರ್ಥಿಗಳು ಇತ್ತೀಚೆಗೆ ನಡೆಸಿದ ತರಗತಿಯ ಪರೀಕ್ಷೆಗಳಲ್ಲಿ ಕಳಪೆ ಪ್ರದರ್ಶನ  ಣೀಡಿದ್ದಾರೆ, ಇದಕ್ಕೆ ಪಿಯುಬಿಜಿ ಆಟದ ವ್ಯಸನವೇ ಕಾರಣ ಎಂದು ಆರೋಪಿಸಿ ಆಟದ ನಿಷೇಧಕ್ಕೆ ಆಗ್ರಹಿಸಿದ್ದರು.
ಈ ಸಂಬಂಧ ಗುಜರಾತ್ ಸರ್ಕಾರ ತಮ್ಮ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಪಿಯುಬಿಜಿ ನಿಷೇಧ ಕೋರಿ ಸುತ್ತೋಲೆ ಝಾರಿ ಮಾಡಿದೆ.ಮಹಾರಾಷ್ಟ್ರದ 11 ವರ್ಷದ ಬಾಲಕಿ ಸಹ ಈ ಆಟ ನಿಷೇಧಿಸಬೇಕೆಂದು ಸರ್ಕಾರಕ್ಕೆ ಪತ್ರ ಬರೆದದ್ದು ಮಾದ್ಯಮಗಳಲ್ಲಿ ಸುದ್ದಿಯಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com