ದಿನಕರನ್ ಪಕ್ಷಕ್ಕೆ ಪ್ರೆಷರ್ ಕುಕ್ಕರ್ ಚಿಹ್ನೆ ನೀಡಲು ಸುಪ್ರೀಂ ಕೋರ್ಟ್ ನಕಾರ

ಎಐಎಡಿಎಂಕೆ ಪಕ್ಷದ ಬಂಡಾಯ ನಾಯಕ ಟಿಟಿವಿ ದಿನಕರನ್ ಅವರ ಎಎಂಎಂಕೆ ಪಕ್ಷಕ್ಕೆ ಪ್ರೆಷರ್ ಕುಕ್ಕರ್ ಚಿಹ್ನೆ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿದೆ.
ದಿನಕರನ್
ದಿನಕರನ್

ನವದೆಹಲಿ: ಎಐಎಡಿಎಂಕೆ ಪಕ್ಷದ ಬಂಡಾಯ ನಾಯಕ ಟಿಟಿವಿ ದಿನಕರನ್ ಅವರ ಎಎಂಎಂಕೆ ಪಕ್ಷಕ್ಕೆ ಪ್ರೆಷರ್ ಕುಕ್ಕರ್ ಚಿಹ್ನೆ ನೀಡಲು  ಸುಪ್ರೀಂಕೋರ್ಟ್ ನಿರಾಕರಿಸಿದೆ.

ಇದು ಸಾಮಾನ್ಯ ಚಿಹ್ನೆಯಾಗಿರುವುದರಿಂದ ಎಎಂಎಂಕೆ ಪಕ್ಷಕ್ಕೆ ಪ್ರೆಷರ್ ಕುಕ್ಕರ್ ಚಿಹ್ನೆ  ನೀಡುವುದಿಲ್ಲ ಎಂದು ಚುನಾವಣಾ ಆಯೋಗ ಹೇಳಿತ್ತು. ಅದೇ ರೀತಿಯಲ್ಲಿ  ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಎ.ಎಂ. ಖನ್ವೀಲ್ ಕರ್ ಅವರನ್ನೊಳಗೊಂಡ ಪೀಠ ಈಗ  ತೀರ್ಪು ನೀಡಿದೆ.

ದಿನಕರನ್ ಅರ್ಜಿ ಅಸಾಮಾನ್ಯವಾದದ್ದು, ಅವರ  ಗುಂಪಿನ ನಾಯಕರೊಬ್ಬರು ಜೈಲಿನಲ್ಲಿದ್ದು, ಇದು ಎಎಂಎಂಕೆ ನಾಯಕರು ಆರ್ಹತೆ ಮೇಲೆ ದಾಳಿ ಮಾಡಿದೆ  ತಮಿಳುನಾಡು ಮುಖ್ಯಮಂತ್ರಿ ಇ. ಪಳನಿಸ್ವಾಮಿ ನೇತೃತ್ವದ ಎಐಎಡಿಎಂಕೆ ಬಣ ಹೇಳಿದೆ.

ಕಳೆದ ವರ್ಷ ಡಿಎಂಕೆ ನಾಯಕ ಎಂ. ಕರುಣಾನಿಧಿ ನಿಧನದ ನಂತರ ನಡೆದ ತಿರುವರೂರು ಉಪ ಚುನಾವಣೆ ಸಂದರ್ಭದಲ್ಲಿ ಪ್ರೆಷರ್ ಕುಕ್ಕರ್ ಚಿಹ್ನೆ ವಿವಾದ ಏರ್ಪಟ್ಟಿತ್ತು. ಆದಾಗ್ಯೂ, ಚುನಾವಣಾ ಆಯೋಗ ಉಪ ಚುನಾವಣೆಯನ್ನು ರದ್ದುಪಡಿಸಿ ಜನವರಿ 28 ರಂದು ಉಪಚುನಾವಣೆ ನಡೆಸಲಾಗಿತ್ತು.

ದಿನಕರನ್  ಗುಂಪಿನ ಪಕ್ಷದ ಚಿಹ್ನೆಯಾಗಿ ಪ್ರೆಷರ್ ಕುಕ್ಕರ್ ನೀಡುವಂತೆ ದೆಹಲಿ ಹೈಕೋರ್ಟ್ ಮಾರ್ಚ್ 9 ರಂದು ಚುನಾವಣಾ ಆಯೋಗಕ್ಕೆ ನೀಡಿದ ಮಧ್ಯಂತರ ಆದೇಶವನ್ನು  ಕಳೆದ ವರ್ಷ ಮಾರ್ಚ್ 28 ರಂದು ಸುಪ್ರೀಂಕೋರ್ಟ್ ಅಮಾನತು ಮಾಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com