ಆಂಧ್ರ ಪ್ರದೇಶದೊಂದಿಗೆ ನಾವಿದ್ದೇವೆ, ಜನರ ಕಷ್ಟ ನೋಡದ ಇವರು ಎಂತಹ ಪ್ರಧಾನಿ?: ರಾಹುಲ್ ಗಾಂಧಿ

ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಬೇಕು ಎಂಬ ಹೋರಾಟಕ್ಕೆ ತಮ್ಮ ಬೆಂಬಲವಿದ್ದು, ಆಂಧ್ರ ಪ್ರದೇಶ ಜನರೊಂದಿಗೆ ನಾವಿದ್ದೇವೆ. ಜನರ ಕಷ್ಟ ನೋಡದ ಇವರು ಎಂತಹ ಪ್ರಧಾನಿ ಎಂದು...

Published: 11th February 2019 12:00 PM  |   Last Updated: 11th February 2019 12:29 PM   |  A+A-


I stand with the people of Andhra Pradesh. What kind of a PM is he?: Rahul Gandhi

ಸತ್ಯಾಗ್ರಹದಲ್ಲಿ ರಾಹುಲ್ ಭಾಗಿ

Posted By : SVN SVN
Source : Online Desk
ನವದೆಹಲಿ: ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಬೇಕು ಎಂಬ ಹೋರಾಟಕ್ಕೆ ತಮ್ಮ ಬೆಂಬಲವಿದ್ದು, ಆಂಧ್ರ ಪ್ರದೇಶ ಜನಮರೊಂದಿಗೆ ನಾವಿದ್ದೇವೆ. ಜನರ ಕಷ್ಟ ನೋಡದ ಇವರು ಎಂತಹ ಪ್ರಧಾನಿ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

ರಾಜಧಾನಿ ದೆಹಲಿಯಲ್ಲಿ ಆಂಧ್ರ ಪ್ರದೇಶ ಸಿಎಂ ಎನ್ ಚಂದ್ರಬಾಬು ನಾಯ್ಡು ಅವರು ನಡೆಯುಸುತ್ತಿರುವ ಧರ್ಮ ಹೋರಾಟ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಮಾತನಾಡಿದ ರಾಹುಲ್ ಗಾಂಧಿ, ವಿಭಜಿತ ಆಂಧ್ರ ಪ್ರದೇಶಕ್ಕೆ ಕಾಂಗ್ರೆಸ್ ಮತ್ತು ಯುಪಿಎ ಮೈತ್ರಿಕೂಟ ಸಂಪೂರ್ಣ ಬೆಂಬಲ ನೀಡುತ್ತದೆ. ಆಂಧ್ರ ಪ್ರದೇಶ ಜನರೊಂದಿಗೆ ನಾವಿದ್ದು, ಅವರ ಹೋರಾಟಕ್ಕೆ ನಾವೂ ಬೆಂಬಲ ನೀಡುತ್ತೇವೆ ಎಂದು ಹೇಳಿದರು.

ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ, ಜನರ ಕಷ್ಟಗಳಿಗೆ ಸ್ಪಂಧಿಸಿದ ಇವರು ಎಂತಹ ಪ್ರಧಾನಿ.. ಚುನಾವಣೆಗೂ ಮೊದಲು ತಾವೇ ನೀಡಿದ್ದ ಭರವಸೆಗಳನ್ನು ಚುನಾವಣೆ ಬಳಿಕ ಮರೆತಿದ್ದಾರೆ. ಸುಳ್ಳು ಆಮಿಷಗಳನ್ನು ನೀಡಿ ಮೋಸ ಮಾಡಿದ್ದಾರೆ. ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಪ್ರಧಾನಿ ಮೋದಿ ಮತ್ತು ಎನ್ ಡಿಎ ಸರ್ಕಾರದ ಮೇಲೆ ಜನತೆ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp