ಪುಲ್ವಾಮಾ ದಾಳಿಗೆ ಪ್ರತೀಕಾರಕ್ಕೆ ಚಹಾ ರಫ್ತುದಾರರ ಪಣ: ಪಾಕಿಸ್ತಾನದೊಂದಿಗಿನ ವ್ಯಾಪಾರ ಬಂದ್!

ಕಾಶ್ಮೀರದ ಪುಲ್ವಾಮದಲ್ಲಿ ಯೋಧರ ಮೇಲೆ ಪಾಕ್ ಉಗ್ರ ಸಂಘಟನೆ ನಡೆಸಿರುವ ಪೈಶಾಚಿಕ ಕೃತ್ಯಕ್ಕೆ ಇಡೀ ದೇಶ ಪ್ರತೀಕಾರ ಕೇಳುತ್ತಿದೆ. ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಬೇಕೆಂಬ ಆಗ್ರಹ ಹೆಚ್ಚಾಗುತ್ತಿದ್ದಂತೆಯೇ....
ಪುಲ್ವಾಮಾ ದಾಳಿಗೆ ಪ್ರತೀಕಾರಕ್ಕೆ ಚಹಾ ರಫ್ತುದಾರರ ಪಣ: ಪಾಕಿಸ್ತಾನದೊಂದಿಗಿನ ವ್ಯಾಪಾರ ಬಂದ್!
ಪುಲ್ವಾಮಾ ದಾಳಿಗೆ ಪ್ರತೀಕಾರಕ್ಕೆ ಚಹಾ ರಫ್ತುದಾರರ ಪಣ: ಪಾಕಿಸ್ತಾನದೊಂದಿಗಿನ ವ್ಯಾಪಾರ ಬಂದ್!
ಕಾಶ್ಮೀರದ ಪುಲ್ವಾಮದಲ್ಲಿ ಯೋಧರ ಮೇಲೆ ಪಾಕ್ ಉಗ್ರ ಸಂಘಟನೆ ನಡೆಸಿರುವ ಪೈಶಾಚಿಕ ಕೃತ್ಯಕ್ಕೆ ಇಡೀ ದೇಶ ಪ್ರತೀಕಾರ ಕೇಳುತ್ತಿದೆ. ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಬೇಕೆಂಬ ಆಗ್ರಹ ಹೆಚ್ಚಾಗುತ್ತಿದ್ದಂತೆಯೇ ಭಾರತದ ಚಹಾ ರಫ್ತುದಾರರು ಪಾಕ್ ಗೆ ತಕ್ಕ ಪಾಠ ಕಲಿಸಲು ನಿರ್ಧರಿಸಿದ್ದಾರೆ. 
ಯೋಧರ ಮೇಲೆ ದಾಳಿ ನಡೆಸಲು ಕುಮ್ಮಕ್ಕು ನೀಡಿದ ಪಾಕಿಸ್ತಾನಕ್ಕೆ ಬಿಸಿ ಮುಟ್ಟಿಸಲು ನಿರ್ಧರಿಸಿರುವ ಭಾರತದ ಚಹಾ ರಫ್ತುದಾರರು ಪಾಕಿಸ್ತಾನಕ್ಕೆ ಚಹಾ ಸಾಗಣೆಯನ್ನು ಸಂಪೂರ್ಣ ಬಂದ್ ಮಾಡಲು ನಿರ್ಧರಿಸಿದ್ದಾರೆ. 
ಕೇಂದ್ರ ಸರ್ಕಾರ ಕೈಗೊಳ್ಳುವ ಕ್ರಮಕ್ಕೆ ಸಂಪೂರ್ಣ ಬೆಂಬಲ ನೀಡಲು ಸಿದ್ಧವಿರುವುದಾಗಿ ಹೇಳಿರುವ ಭಾರತದ ರಫ್ತುದಾರರ ಸಂಸ್ಥೆ, ಭಾರತೀಯ ಚಹಾ ಮಾರಾಟಗಾರರ ಸಂಘಟನೆ (ಐಟಿಇಎ) ಪಾಕಿಸ್ತಾನಕ್ಕೆ ಚಹಾ ಕಳಿಸುವುದನ್ನು ಬಂದ್ ಮಾಡಲಿದೆ ಎಂದು ಹೇಳಿದೆ. ಭಾರತ ಸರ್ಕಾರ ದ್ವಿಪಕ್ಷೀಯ ವಾಣಿಜ್ಯ ವ್ಯವಹಾರವನ್ನು ಬಂದ್ ಮಾಡಿದರೆ ಐಟಿಇಎ ಅದಕ್ಕೆ ಸಂಪೂರ್ಣ ಬೆಂಬಲ ನೀಡಲು ಸಿದ್ಧವಿದೆ ಎಂದು ಅಧ್ಯಕ್ಷ ಅಂಶುಮಾನ್ ಕನೋರಿಯಾ ಹೇಳಿದ್ದಾರೆ. 
ದೇಶದ ಭದ್ರತೆ, ನಮ್ಮ ಯೋಧರು ನಮಗೆ ಮುಖ್ಯ, ವಾಣಿಜ್ಯ ವ್ಯಾಪಾರದ ಸ್ಥಾನ ನಂತರದ್ದು ಎಂದು ಅಂಶುಮಾನ್ ತಿಳಿಸಿದ್ದಾರೆ. ಟೀ ಮಂಡಳಿ ಅಂಕಿ-ಅಂಶದ ಪ್ರಕಾರ 2018 ರಲ್ಲಿ ಪಾಕಿಸ್ತಾನಕ್ಕೆ ಒಟ್ಟು 15.83 ಮಿಲಿಯನ್ ಕೆ.ಜಿ ಚಹಾ ರಫ್ತಾಗಿದ್ದು 154.71 ಕೋಟಿ ರೂಪಾಯಿ ಮೌಲ್ಯದ ರಫ್ತಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com