ಪುಲ್ವಾಮ ಭಯೋತ್ಪಾದಕ ದಾಳಿ: 10 ಕಿ.ಮೀ ವರೆಗೂ ಕೇಳಿದ್ದ ಸ್ಪೋಟದ ಶಬ್ದ!

ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆ ಯೋಧರನ್ನು ಟಾರ್ಗೆಟ್ ಮಾಡಿಕೊಂಡು ನಡೆಸಿದ ದಾಳಿಯ ತೀವ್ರತೆಗೆ ಪುಲ್ವಾಮ ಜಿಲ್ಲೆಯ ಸ್ಥಳೀಯರು ಅಕ್ಷರಸಹ ಬೆಚ್ಚಿಬಿದ್ದಿದ್ದಾರೆ.
ಪುಲ್ವಾಮ ಭಯೋತ್ಪಾದಕ ದಾಳಿ: 10 ಕಿ.ಮೀ ವರೆಗೂ ಕೇಳಿದ್ದ ಸ್ಪೋಟದ ಶಬ್ದ!
ಪುಲ್ವಾಮ ಭಯೋತ್ಪಾದಕ ದಾಳಿ: 10 ಕಿ.ಮೀ ವರೆಗೂ ಕೇಳಿದ್ದ ಸ್ಪೋಟದ ಶಬ್ದ!
ಶ್ರೀನಗರ: ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆ ಯೋಧರನ್ನು ಟಾರ್ಗೆಟ್ ಮಾಡಿಕೊಂಡು ನಡೆಸಿದ ದಾಳಿಯ ತೀವ್ರತೆಗೆ ಪುಲ್ವಾಮ ಜಿಲ್ಲೆಯ ಸ್ಥಳೀಯರು ಅಕ್ಷರಸಹ ಬೆಚ್ಚಿಬಿದ್ದಿದ್ದಾರೆ. 
ಸಿಆರ್ ಪಿಎಫ್ ಸಿಬ್ಬಂದಿ ಸಂಚರಿಸುತ್ತಿದ್ದ ವಾಹನದ ಮೇಲೆ ಸ್ಫೋಟಕಗಳನ್ನು ತುಂಬಿದ್ದ ಸ್ಕಾರ್ಪಿಯೋ ಕಾರನ್ನು ನುಗ್ಗಿಸಿದಾಗ ಉಂಟಾದ ಸ್ಫೋಟದ ಶಬ್ದ ಸುಮಾರು 10-12 ಕಿ.ಮೀ ವರೆಗೂ ಕೇಳಿದೆ. ಅಷ್ಟೇ ಅಲ್ಲದೇ ಪುಲ್ವಾಮ ಜಿಲ್ಲೆಗೆ ಹತ್ತಿರವಿರುವ ಶ್ರೀನಗರದ ಕೆಲವು ಪ್ರದೇಶಗಳಿಗೂ ಸಹ ಸ್ಫೋಟದ ಸದ್ದು ಕೇಳಿದೆ ಎಂದು ಸ್ಥಳಿಯರು ಹೇಳಿದ್ದಾರೆ. 
2001 ರಲ್ಲಿ ಕಾಶ್ಮೀರದಲ್ಲಿ ವಿಧಾನಸಭೆ ಮೇಲೆ ನಡೆದಿದ್ದ ಭಯೋತ್ಪಾದಕ ದಾಳಿಯಲ್ಲಿ 41 ಜನರು ಮೃತಪಟ್ಟಿದ್ದರು. ಈ ದಾಳಿಯ ನಂತರ ಕಾಶ್ಮೀರದಲ್ಲಿ ನಡೆದಿರುವ ಅತಿ ಭೀಕರವಾದ ದಾಳಿ ಇದಾಗಿದ್ದು, 
ಸ್ಫೋಟ ಸಂಭವಿಸುತ್ತಿದ್ದಂತೆಯೇ ಘಟನಾ ಸ್ಥಳದ 300 ಮೀಟರ್ ಆಸುಪಾಸಿನಲ್ಲಿದ್ದ ಅಂಗಡಿ ಮಾಲಿಕರು ಭಯಗೊಂಡು ಬಾಗಿಲು ಕೆಳಗೆಳೆದಿದ್ದರೆ ಇನ್ನೂ ಕೆಲವರು ರಕ್ಷಣೆಗಾಗಿ ದಿಕ್ಕಾಪಾಲಾಗಿ ಓಡಲು ಪ್ರಾರಂಭಿಸಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. 
ಈ ಘಟನೆ ಜಮ್ಮು-ಶ್ರೀನಗರ ಹೆದ್ದಾರಿಯಲ್ಲಿ ನಡೆದಿದ್ದು, ಈ ಹಿಂದೆಯೂ ಇದೇ ಹೆದ್ದಾರಿಯಲ್ಲಿ ಹಲವು ಭಯೋತ್ಪಾದಕ ದಾಳಿಗಳು ನಡೆದಿವೆ. ಡಿ.31, 2017 ರಲ್ಲಿ ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆ ನಡೆಸಿದ ದಾಳಿಗೆ ಸಿಆರ್ ಪಿಎಫ್ ನ 5 ಸಿಬ್ಬಂದಿಗಳು ಹುತಾತ್ಮರಾಗಿದ್ದರು. 
ಪಾಂಪೋರ್ ನಲ್ಲಿ 2016 ರಲ್ಲಿ ಸಿಆರ್ ಪಿಎಫ್ ಮೇಲೆ ನಡೆದ ದಾಳಿಯಲ್ಲಿ 8 ಯೋಧರು ಹುತಾತ್ಮರಾಗಿದ್ದರೆ 22 ಯೋಧರಿಗೆ ಗಾಯಗಳಾಗಿ ಬದುಕುಳಿದಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com