ಸ್ಟೆರ್ಲೈಟ್ ಜತೆ ಪೊಲೀಸರು ಶಾಮಿಲು ಎಂದು ಆರೋಪಿಸಿದ್ದ ತಮಿಳುನಾಡು ಪರಿಸರವಾದಿ ನಾಪತ್ತೆ

ಸ್ಟೆರ್ಲೈಟ್ ತಾಮ್ರ ಘಟಕದ ವಿರುದ್ಧದ ಪ್ರತಿಭಟನೆ ವೇಳೆ 13 ಮಂದಿಯನ್ನು ಬಲಿ ಪಡೆದ ಗೋಲಿ ಬಾರ್ ನಲ್ಲಿ ಐಜಿ ಮತ್ತು ಡಿಐಜಿ ರ್ಯಾಂಕ್ ನ ಪೊಲೀಸ್ ಅಧಿಕಾರಿಗಳು...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಚೆನ್ನೈ: ಸ್ಟೆರ್ಲೈಟ್ ತಾಮ್ರ ಘಟಕದ ವಿರುದ್ಧದ ಪ್ರತಿಭಟನೆ ವೇಳೆ 13 ಮಂದಿಯನ್ನು ಬಲಿ ಪಡೆದ ಗೋಲಿ ಬಾರ್ ನಲ್ಲಿ ಐಜಿ ಮತ್ತು ಡಿಐಜಿ ರ್ಯಾಂಕ್ ನ ಪೊಲೀಸ್ ಅಧಿಕಾರಿಗಳು ಶಾಮಿಲಾಗಿದ್ದಾರೆ ಎಂದು ಆರೋಪಿಸಿದ್ದ ತಮಿಳುನಾಡು ಪರಿಸರವಾದಿ ಟಿ ಮುಗಿಲನ್, ಅವರ ಸಹೋದ್ಯೋಗಿಗಳು ಹಾಗೂ ಸ್ನೇಹಿತರು ಕಳೆದ ಶುಕ್ರವಾರದಿಂದ ನಾಪತ್ತೆಯಾಗಿದ್ದಾರೆ.
ಈ ಸಂಬಂಧ ತಮಿಳುನಾಡು ವಿದ್ಯಾರ್ಥಿಗಳು ಮತ್ತು ಯುವ ಒಕ್ಕೂಟದ ಸಂಚಾಲಕ ಮಣಿ ಅವರು ಚೆನ್ನೈ ಪೊಲೀಸರಿಗೆ ದೂರು ನೀಡಿದ್ದು, ಮುಗಿಲನ್ ಅವರು ಫೆಬ್ರವರಿ 15ರಿಂದ ನಾಪತ್ತೆಯಾಗಿದ್ದು, ಅವರನ್ನು ಕೊನೆ ಬಾರಿ ಎಗ್ಮೊರೆ ರೈಲ್ವೆ ನಿಲ್ದಾಣದಲ್ಲಿ ಪರಿಸರವಾದಿ ವಿಪಿ ಪೊನ್ನರಸನ್ ಹಾಗೂ ಇತರರು ನೋಡಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಮುಗಿಲನ್ ಅವರು ಮಹಲ್ ಎಕ್ಸ್ ಪ್ರೆಸ್ ನ ಸಾಮಾನ್ಯ ಬೋಗಿಯಲ್ಲಿ ಹತ್ತಿದರು. ಮಾರನೇ ದಿನ ನಾನು ಅವರಿಗೆ ಕರೆ ಮಾಡಿದರೆ ಅವರ ಫೋನ್ ಸ್ವಿಚ್ ಆಫ್ ಆಗಿತ್ತು. ನಾನು ಕೂಡಲೇ ಸ್ಥಳೀಯ ಕಾರ್ಯಕರ್ತರಿಗೆ ತಿಳಿಸಿದೆ ಎಂದು ಪೊನ್ನರಸನ್ ಅವರು ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.
ನಾಪತ್ತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಪ್ರಕರಣವನ್ನು ರೈಲ್ವೆ ಪೊಲೀಸರಿಗೆ ವರ್ಗಾಯಿಸಿದ್ದಾರೆ.
ಕಳೆದ ವರ್ಷ ಮೇ ತಿಂಗಳಲ್ಲಿ ತೂತುಕುಡಿಯಲ್ಲಿ ಐಜಿ ಮತ್ತು ಡಿಐಜಿ ಮಟ್ಟದ ಅಧಿಕಾರಿಗಳೇ ಗೋಲಿಬಾರ್ ಆಯೋಜಿಸಿದ್ದರು ಎಂದು ಮುಗಿಲನ್ ಅವರು ಆರೋಪಿಸಿರುವ ವಿಡಿಯೋ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಅವರು ನಾಪತ್ತೆಯಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com