ಬುಲಂದ್ ಶಹರ್ ಪೋಲೀಸ್ ಹತ್ಯೆ: 'ಎ ಒನ್' ಆರೋಪಿ ಯೋಗೇಶ್ ರಾಜ್ ಬಂಧನ

ಉತ್ತರ ಪ್ರದೇಶದ ಬುಲಂದ್ ಶಹರ್ ನಲ್ಲಿ ಸಂಭವಿಸಿದ್ದ ಹಿಂಸಾಚಾರದಲ್ಲಿ ಪೋಲೀಸ್ ಅಧಿಕಾರಿ ಹತ್ಯೆ ಪ್ರಕರಣ ಸಂಬಂಧ ಎ ಒನ್ ಆರೋಪಿಯನ್ನು ಬಂಧಿಸಲಾಗಿದೆ.
ಯೋಗೇಶ್ ರಾಜ್
ಯೋಗೇಶ್ ರಾಜ್
ಲಖನೌ: ಉತ್ತರ ಪ್ರದೇಶದ ಬುಲಂದ್ ಶಹರ್ ನಲ್ಲಿ ಸಂಭವಿಸಿದ್ದ ಹಿಂಸಾಚಾರದಲ್ಲಿ ಪೋಲೀಸ್ ಅಧಿಕಾರಿ ಹತ್ಯೆ ಪ್ರಕರಣ ಸಂಬಂಧ 'ಎ ಒನ್' ಆರೋಪಿಯನ್ನು ಬಂಧಿಸಲಾಗಿದೆ.
ಬಜರಂಗದಳ ನಾಯಕರೇ ತಲೆಮರೆಸಿಕೊಂಡಿದ್ದ ಆರೋ ಯೋಗೇಶ್ ರಾಜ್ ನನ್ನು ಹಿಡಿದು ಪೋಲೀಸರಿಗೆ ಒಪ್ಪಿಸಿದ್ದಾರೆ.
ಡಿಸೆಂಬರ್ ನಲ್ಲಿ ನಡೆದಿದ್ದ ಬುಲಂದ್ ಶಹರ್ ಗುಂಪು ಘರ್ಷಣೆಯಲ್ಲಿ ಹಾಡಹಗಲೇ ಪೋಲೀಸ್ ಅಧಿಕಾರಿ ಹತ್ಯೆ ನಡೆದಿದ್ದು ದೇಶಕ್ಕೆ ದೇಶವೇ ಬೆಚ್ಚಿ ಬೀಳುವಂತಾಗಿತ್ತು. ಈ ಹತ್ಯೆ ಬಳಿಕ ಯೋಗೇಶ್ ರಾಜ್ ರಹಸ್ಯ ಸ್ಥಳದಲ್ಲಿದ್ದುಕೊಂಡು ವೀಡಿಯೋ ಹರಿಯಬಿಟ್ಟಿದ್ದನು. ಕಾಡಿನ ನಡುವೆ ಹಸುವಿನ ಕಳೇಬರ ಪತ್ತೆಯಾದ ಬಳಿಕ ಸ್ಥಳೀಯ ಗುಂಪಿಗೆ ಹಿಂಸಾಚಾರಕ್ಕೆ ಪ್ರಚೋದನೆ ನೀಡಿರುವ ಆರೋಪ ಯೋಗೇಶ್ ಮೇಲಿದೆ. ಘರ್ಷಣೆಗೆ ಮುನ್ನವೇ ಈತ ಪೋಲೀಸರಿಗೆ ಗೋಹತ್ಯೆ ಕುರಿತು ದೂರು ಸಲ್ಲಿಸಿದ್ದು ಆ ವೇಳೆ ಹತ್ತು ಮಂದಿ ಆರೋಪಿಗಳ ಹೆಸರು ಸೂಚಿಸಿದ್ದನೆನ್ನಲಾಗಿದೆ.
ಡಿಸೆಂಬರ್ 3ರಂದು ನಡೆದ ಘಟನೆಯಲ್ಲಿ ಪೋಲೀಸ್ ಅಧಿಕಾರಿ ಸುಬೋಧ್ ಕುಮಾರ್ ಸಿಂಗ್ ಅವರನ್ನು ಗುರಿಯಾಗಿಸಿಕೊಂಡು ಸುಮಾರು ನಾಲ್ಕು ನೂರಕ್ಕೆ ಹೆಚ್ಚಿನ ಜನರ ಗುಂಪು ದಾಳಿ ಮಾಡಿತ್ತು. ಕೈಗೆ ಸಿಕ್ಕ ವಸ್ತುಗಳಿಂದ ಹಲ್ಲೆ ನಡೆಸಿದ ಗುಂಪು ಪೋಲೀಸ್ ಅಧಿಕಾರಿ ಪ್ರಯಾಣಿಸುತ್ತಿದ್ದ ಕಾರನ್ನು ಹಿಂಬಾಲಿಸಿ ಹತ್ಯೆಗೈಯ್ದಿತ್ತು. ಈ ವೇಳೆ ಸಂಭವಿಸಿದ್ದ ಹಿಂಸಾಚಾರದಲ್ಲಿ ಓರ್ವ ಯುವಕ ಸಹ ಸಾವನ್ನಪಿದ್ದನು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com