ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಪಶ್ಚಿಮ ಬಂಗಾಳ: ಹಬ್ರಾ ರೈಲ್ವೇ ಹಳಿ ಮೇಲೆ ಕಚ್ಚಾ ಬಾಂಬ್ ಪತ್ತೆ, ರೈಲ್ವೇ ಸಂಚಾರ ಸ್ಥಗಿತ

ಪಶ್ಚಿಮ ಬಂಗಾಳ ರಾಜ್ಯದ ಉತ್ತರ 24 ಪಾರಗನಾಸ್'ನ ಹಬ್ರಾ ರೈಲ್ವೇ ಹಳಿ ಮೇಲೆ 5 ಸಜೀವ ಕಚ್ಚಾ ಬಾಂಬ್ ಗಳು ಪತ್ತೆಯಾಗಿದ್ದು, ಪರಿಣಾಮ ರೈಲ್ವೇ ಸಂಚಾರ ಸ್ಥಗಿತಗೊಂಡಿದೆ ಎಂದು ಬುಧವಾರ ತಿಳಿದುಬಂದಿದೆ...
ಕೋಲ್ಕತಾ: ಪಶ್ಚಿಮ ಬಂಗಾಳ ರಾಜ್ಯದ ಉತ್ತರ 24 ಪಾರಗನಾಸ್'ನ ಹಬ್ರಾ ರೈಲ್ವೇ ಹಳಿ ಮೇಲೆ 5 ಸಜೀವ ಕಚ್ಚಾ ಬಾಂಬ್ ಗಳು ಪತ್ತೆಯಾಗಿದ್ದು, ಪರಿಣಾಮ ರೈಲ್ವೇ ಸಂಚಾರ ಸ್ಥಗಿತಗೊಂಡಿದೆ ಎಂದು ಬುಧವಾರ ತಿಳಿದುಬಂದಿದೆ. 
ಹಳಿ ಮೇಲೆ ಕಚ್ಚಾ ಬಾಂಬ್ ಗಳು ಪತ್ತೆಯಾಗಿರುವ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಅಧಿಕಾರಿಗಳು ಸೀಲ್ದಾಹ್-ಬಾಂಗಾಂವ್'ನ ರೈಲು ಸಂಚಾರಗಳನ್ನು ಸ್ಥಗಿತಗೊಳಿಸಿದ್ದಾರೆ. ಈ ನಡುವೆ ಸ್ಥಳಕ್ಕಾಗಮಿಸಿರುವ ಭದ್ರತಾ ಸಿಬ್ಬಂದಿಗಳು ಬಾಂಬ್ ನಿಷ್ಕ್ರಿಯಗೊಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ. 
ಈ ನಡುವೆ ಭಾರತ್ ಹಿನ್ನಲೆಯಲ್ಲಿ ಕೆಲ ಶಾಲಾ ವಾಹನಗಳ ಮೇಲೆ ಕಲ್ಲು ತೂರಾಟ ನಡೆದಿದ್ದು, ಇಬ್ಬರು ಮಕ್ಕಳು ಗಾಯಗೊಂಡಿದ್ದಾರೆ. 
ಮತ್ತೊಂದೆಡೆ ದಕ್ಷಿಣ ಕೋಲ್ಕತಾದಲ್ಲಿ ಪ್ರತಿಭಟನೆ ನಡೆಸಿದ ಪರಿಣಾಮ ತೀವ್ರ ಸಂಚಾರ ದಟ್ಟಣೆ ಉಂಟಾದ ಹಿನ್ನಲೆಯಲ್ಲಿ  ಸಿಪಿಐ(ಎಂ) ನಾಯಕ ಸುಜಾನ್ ಚಕ್ರಬೋರ್ತಿಯವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. 

Related Stories

No stories found.

Advertisement

X
Kannada Prabha
www.kannadaprabha.com