2018-19ರಲ್ಲಿ ಭಾರತದ ಜಿಡಿಪಿ ಶೇ.7.3ಕ್ಕೆ ಏರಿಕೆ: ವಿಶ್ವಬ್ಯಾಂಕ್

2018-19ನೇ ಸಾಲಿನಲ್ಲಿ ಭಾರತದ ಜಿಡಿಪಿ ಶೇ.7.3ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ವಿಶ್ವಬ್ಯಾಂಕ್ ಅಭಿಪ್ರಾಯಪಟ್ಟಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: 2018-19ನೇ ಸಾಲಿನಲ್ಲಿ ಭಾರತದ ಜಿಡಿಪಿ ಶೇ.7.3ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ವಿಶ್ವಬ್ಯಾಂಕ್ ಅಭಿಪ್ರಾಯಪಟ್ಟಿದೆ.

ಮಂಗಳವಾರ ವಿಶ್ವಬ್ಯಾಂಕ್ ಬಿಡುಗಡೆ ಮಾಡಿರುವ ಆರ್ಥಿಕ ಮುನ್ಸೂಚನಾ ವರದಯಲ್ಲಿ ವಿಶ್ವಬ್ಯಾಂಕ್ ಈ ಬಗ್ಗೆ ಮಾಹಿತಿ ನೀಡಿದ್ದು, ವಿಶ್ವ ಆರ್ಥಿಕತೆಯಲ್ಲಿ ಭಾರತೀಯ ಆರ್ಥಿಕತೆಯ ಓಟ ಮುಂದುವರೆದಿದ್ದು, 2018-19ನೇ ಸಾಲಿನಲ್ಲಿ ಭಾರತದ ಜಿಡಿಪಿ ಶೇ.7.3ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ. ಅಂತೆಯೇ ಮುಂದಿನ 2 ವರ್ಷಗಳಲ್ಲಿ ಈ ಪ್ರಮಾಣ 7.5ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟಿದೆ.
ವಿಶ್ವದ ಇತರೆ ದೇಶಗಳ ಆರ್ಥಿಕತೆಗೆ ಹೋಲಿಕೆ ಮಾಡಿದರೆ ಭಾರತ ದೇಶದ ಆರ್ಥಿಕತೆ ಬಲಿಷ್ಠವಾಗಿದ್ದು, ಆರ್ಥಿಕವಾಗಿ ವೇಗವಾಗಿ ಬೆಳೆಯುತ್ತಿರುವ ದೇಶಗಳ ಪಟ್ಟಿಯಲ್ಲಿ ಭಾರತವೂ ಕೂಡ ಇದೆ. ಭಾರತೀಯ ಆರ್ಥಿಕತೆ ವೇಗವಾಗಿ ಬೆಳೆಯುತ್ತಿದೆ ಎಂದು ವಿಶ್ವ ಬ್ಯಾಂಕ್ ನ ಆರ್ಥಿಕ ನಿರಿಕ್ಷೀಣಾ ವರದಿ ವಿಭಾಗದ ನಿರ್ದೇಶಕ ಅಹಹಾನ್ ಕೋಸ್ ಟಿ ಹೇಳಿದ್ದಾರೆ.
ಕುಂಠಿತವಾದ ಚೀನಾ ಆರ್ಥಿಕತೆ ಅಭಿವೃದ್ಧಿ ವೇಗ
ಇನ್ನು ಭಾರತಕ್ಕೆ ಹೋಲಿಕೆ ಮಾಡಿದರೆ ಚೀನಾದ ಆರ್ಥಿಕತೆ ಅಬಿವೃದ್ಧಿ ವೇಗ ಕುಂಠಿತವಾಗಿದ್ದು, 2019ನೇ ಸಾಲಿನಲ್ಲಿ ಚೀನಾದ ಜಿಡಿಪಿ 6.2ಕ್ಕೆ ಇಳಿಕೆಯಾಗುವ ಸಾಧ್ಯತೆ ಇದ್ದು, ಆ ಬಳಿಕದ 2 ವರ್ಷಗಳಲ್ಲಿ ಮತ್ತೆ ಶೇ. 6ಕ್ಕೆ ಕುಸಿತವಾಗುವ ಅಪಾಯವಿದೆ ಎಂದು ವಿಶ್ವಬ್ಯಾಂಕ್ ಎಚ್ಚರಿತೆ ನೀಡಿದೆ. 2018ರಲ್ಲಿ ಚೀನಾ ಆರ್ಥಿಕತೆ ಅಭಿವೃದ್ದಿ ದರ ಶೇ. 6.5ಕ್ಕೆ ಏರಿಕೆಯಾಗುವ ನಿರೀಕ್ಷೆ ಇತ್ತು. ಆದರೆ ಚೀನಾದ ಆರ್ಥಿಕ ನೀತಿಯಸ್ಸಿ ತಿದ್ದುಪಡಿ ಕಠಿಣ ನಿಯಮಗಳಿಂದಾಗಿ ಆರ್ಥಿಕತೆ ಅಭಿವೃದ್ಧಿ ಕುಸಿತವಾಗಿದೆ ಎಂದು ವಿಶ್ವಬ್ಯಾಂಕ್ ಅಭಿಪ್ರಾಯಪಟ್ಟಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com