ಲೋಕಸಭೆ ಚುನಾವಣೆ ಹಿನ್ನೆಲೆ: ಮೋದಿ ವಿರುದ್ಧ ಪ್ರಿಯಾಂಕಾ ಗಾಂಧಿ ಕಾಂಗ್ರೆಸ್ 'ಬ್ರಹ್ಮಾಸ್ತ್ರ'!

ಜ್ಯೂನಿಯರ್ ಇಂದಿರಾ ಗಾಂಧಿ ಎಂದೇ ಪ್ರಖ್ಯಾತವಾಗಿರುವ ಸೋನಿಯಾ ಪುತ್ರಿ ಪ್ರಿಯಾಂಕಾ ಗಾಂಧಿ ವಾದ್ರಾ ಕೊನೆಗೂ ಸಕ್ರಿಯ ರಾಜಕಾರಣಕ್ಕೆ ಎಂಟ್ರಿ ಕೊಟ್ಟಿದ್ದಾರೆ....
ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ( ಸಂಗ್ರಹ ಚಿತ್ರ)
ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ( ಸಂಗ್ರಹ ಚಿತ್ರ)
ನವದೆಹಲಿ: ಜ್ಯೂನಿಯರ್ ಇಂದಿರಾ ಗಾಂಧಿ ಎಂದೇ ಪ್ರಖ್ಯಾತವಾಗಿರುವ ಸೋನಿಯಾ ಪುತ್ರಿ ಪ್ರಿಯಾಂಕಾ ಗಾಂಧಿ ವಾದ್ರಾ ಕೊನೆಗೂ ಸಕ್ರಿಯ ರಾಜಕಾರಣಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹೊತ್ತಲ್ಲೆ ಪಕ್ಷದ ಉಳಿವಿಗಾಗಿ ಹೊಸ ದಾಳ ಉರುಳಿಸಿದೆ,  ಕಾಂಗ್ರೆಸ್  ಅಧ್ಯಕ್ಷ ರಾಹುಲ್ ಗಾಂಧಿ ಉತ್ತರ ಪ್ರದೇಶ ಪೂರ್ವ ವಿಭಾಗಕ್ಕೆ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಕಾಂಗ್ರೆಸ್ ಪ್ರಧಾನ ಉಸ್ತುವಾರಿ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿದ್ದಾರೆ.
ಜೊತೆಗೆ ಜೋತಿರಾದಿತ್ಯ ಸಿಂಧಿಯಾ ಅವರನ್ನು ಉತ್ತರ ಪ್ರದೇಶ ಪಶ್ಚಿಮ ವಿಭಾಗದ ಕಾಂಗ್ರೆಸ್ ಪ್ರಧಾನ ಉಸ್ತುವಾರಿ ಕಾರ್ಯದರ್ಶಯನ್ನಾಗಿ ನೇಮಿಸಿ ರಾಹುಲ್ ಗಾಂಧಿ ಆದೇಶ ಹೊರಡಿಸಿದ್ದಾರೆ, ಉತ್ತರ ಪ್ರದೇಶದಲ್ಲಿ ದೀರ್ಘಕಾಲದಿಂದ ಅನುಭವಿಸಿರುವ ಸೋಲಿಗೆ ಅಂತ್ಯ ಹಾಡಲು ನಿರ್ಧರಿಸಿದೆ.
ಪ್ರಿಯಾಂಕಾ ಗಾಂಧಿ ಆಗಮನ ಪಕ್ಷದ ಕೇಡಾರ್ ನಲ್ಲಿ ಹೊಸ ಹುರುಪು ತಂದಿದೆ, ಮುಂದಿನ ದಿನಗಳಲ್ಲಿ ಪ್ರಿಯಾಂಕಾ ಕೈಗೊಳ್ಳುವ ನಿರ್ಧಾರ ಹಾಗೂ ಕಾರ್ಯಕ್ರಮಗಳು ಮಹತ್ವವಾಗಿದ್ದು, ಆಸಕ್ತಿ ಮೂಡಿಸಲಿವೆ.
ರಾಹುಲ್ ಗಾಂಧಿಯಷ್ಟೇ ಪ್ರಿಯಾಂಕಾ ಕೂಡ ಜನಪ್ರಿಯರಾಗಿದ್ದಾರೆ, ಹಲವು ವಿಷಯಗಳಲ್ಲಿ ಪ್ರಿಯಾಂಕಾ  ರಾಹುಲ್ ನಡವಳಿಕೆಗೆಳು ಒಂದೇ ಆಗಿವೆ, ಇಂದಿರಾಗಾಂಧಿ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವ ಎಲ್ಲಾ ಲಕ್ಷಣಗಳು ಪ್ರಿಯಾಂಕಾರಲ್ಲಿ ಕಾಣುತ್ತವೆ,  ಆಕೆ ಪಕ್ಷದ ನಿಜವಾದ ಆಯ್ಕೆ, 
ಬಹಳ ವರ್ಷಗಳಿಂದ ಪ್ರಿಯಾಂಕಾ ಗಾಂಧಿ ಸಕ್ರಿಯ ರಾಜಕಾರಣಕ್ಕೆ ಬರಬೇಕೆಂಬುದು ಹಲವರ ಬಯಕೆಯಾಗಿತ್ತು, ಆದರೆ ಕಾಲ ಕೂಡಿ ಬಂದಿರಲಿಲ್ಲ,
ಆ ದಿನಗಳು ಮುಗಿದಿದೆ, ದಶಕಗಳ ಯುಪಿಎ ಸರ್ಕಾರ ನಡೆಸುವಲ್ಲಿ ಸೋನಿಯಾ ಗಾಂಧಿ ತಮ್ಮ ಸಾಮರ್ಥ್ಯ ಸಾಬೀತು ಪಡಿಸಿದ್ದಾರೆ,  ಈಗ ರಾಹುಲ್ ಗಾಂದಿ ಮತ್ತು ಪ್ರಿಯಾಂಕಾ ತಮ್ಮ ಪ್ರತಿಭೆಯನ್ನು ಒರೆಗೆ ಹಚ್ಚುವ ಕಾಲ ಒದಗಿ ಬಂದಿದೆ, ವಂಶ ಪಾರಂಪರ್ಯ ರಾಜಕೀಯ ಎಂಬ ಏನೇ ಆರೋಪಗಳು ಕೇಳಿ ಬಂದರು ಪಕ್ಷವನ್ನು ಕೇಂದ್ರದಲ್ಲಿ ಅಧಿಕಾರಕ್ಕೆ ತರಲು ಶ್ರಮಿಸಬೇಕಿದೆ, ಜೊತೆಗೆ ಆ ಕೆಲಸ ಅಂದುಕೊಂದಷ್ಟು ಸರಳವಾದದ್ದು ಅಲ್ಲ.
ಉತ್ತರ ಪ್ರದೇಶದಲ್ಲಿ ಈಗಾಗಲೇ ಚುನಾವಣಾ ಪೂರ್ವ ಮೈತ್ರಿ  ಜಾರಿಯಲ್ಲಿದೆ, ಮಾಯಾವತಿ- ಅಖಿಲೇಶ್ ಯಾದವ್ ಮಹಾಘಟ್ ಬಂಧನ್ ದಿಂದ ಕಾಂಗ್ರೆಸ್ ಅನ್ನು ಹೊರಗಿಟ್ಟಿದ್ದಾರೆ, ಹೀಗಾಗಿ ಕಾಂಗ್ರೆಸ್ ಎಸ್ಪಿ- ಬಿಎಸ್ ಜೊತೆಗೆ ಬಿಜೆಪಿ ವಿರುದ್ಧವೂ ಚುನಾವಣೆಯಲ್ಲಿ ಹೋರಾಡಬೇಕಿದೆ, ಇದು ತ್ರಿಕೋನ ಸ್ಪರ್ದೆಯ ಹೋರಾಟವಾಗಿ ಪರಿಣಮಿಸಲಿದೆ,
ಪೂರ್ವ ಉತ್ತರ ಪ್ರದೇಶದಲ್ಲಿ ಬಿಜೆಪಿ ಪ್ರಾಬಲ್ಯವಿದೆ ಎಂಬುದಕ್ಕೆ ಯಾವುದೇ ಸಾಕ್ಷಿಯಿಲ್ಲ, ಹೀಗಿರುವಾಗದ ಎಸ್ ಪಿ ಮತ್ತು ಬಿಎಸ್ ಪಿ ಎಷ್ಟು ಸೀಟುಗಳನ್ನು ಗೆಲ್ಲುತ್ತವೆ ಎಂಬ ಮೇಲೆ ನಿರ್ಧರಿತವಾಗಿರುತ್ತದೆ. ಪರಿಸ್ಥಿತಿ ಹೀಗಿರುವಾಗ ಮತ್ತೊಂದು ಹಂತದಲ್ಲಿ ಎಸ್ ಪಿ-ಬಿಎಸ್ ಪಿ ಕಾಂಗ್ರೆಸ್ ಜೊತೆ ಕೈ ಜೋಡಿಸುವ ಪರಿಸ್ಥಿತಿ ಕೂಡ ಎದುರಾಗುವ ಸಾಧ್ಯತೆಯಿದೆ, ಇಲ್ಲವಾದರೇ ಮತ ವಿಭಜನೆಯಾಗುವ ಸಾಧ್ಯತೆಯಿದೆ.
ಪ್ರಿಯಾಂಕಾ ಏಕೆ ಒಪ್ಪಿಕೊಂಡರು ಎಂಬ ಪ್ರಶ್ನೆ ಎದುರಾಗಿದೆ, ಏಕೆಂದರೇ ಮುಂಬರುವ ಲೋಕಸಭೆ ಚುನಾವಣೆ ತಮ್ಮ ಸಹೋದರ ರಾಹುಲ್ ಗಾಂಧಿ ಅತಿ ಪ್ರಮುಖ ವಾದ ರಾಜಕೀಯ ಸಮರ, ಪಿಎಂ ಹುದ್ದೆಗೆ ರಾಹುಲ್ ಗಾಂಧಿಯನ್ನು ಮುಂಚೂಣಿಗೆ ತರುವ ಅವಶ್ಯಕತೆಯಿದೆ,
ಬಿಜೆಪಿ ಕಾರಣದಿಂದಾಗಿ ಕಾಂಗ್ರೆಸ್ ಈಗಾಗಲೇ ಮೇಲ್ಜಾತಿ ಜನರ ಮತಗಳನ್ನು ಕಳೆದುಕೊಂಡಿದೆ, ಪ್ರಿಯಾಂಕಾ ಆಗಮನದಿಂದಾಗಿ ಸ್ವಲ್ಪ ಮಟ್ಟಿಗಿನ ಲಾಭ ಆಗಬಹುದು, ಪೂರ್ವ ಉತ್ತರ ಪ್ರದೇಶದಲ್ಲಿ ಪಿಎಂ ಸ್ಪರ್ಧಿಸುವ ಕ್ಷೇತ್ರ ಹಾಗೂ ಸಿಎಂ ಯೋಗಿ ಆದಿತ್ಯನಾಥ್ ಅವರ ವಿಧಾನಸಭೆ ಕ್ಷೇತ್ರಗಳಿವೆ, ಇಲ್ಲಿ ಕಾಂಗ್ರೆಸ್ ನದ್ದು ,ಸಾಂಪ್ರಾದಾಯಿಕ ರಾಜಕೀಯವಿದೆ, ಇಲ್ಲಿನ ಜಾತಿ ರಾಜಕೀಯದ ಸಂಕೀರ್ಣತೆಯ ನೈಜತೆಯ ಅರಿವು ಪ್ರಿಯಾಂಕಾಗಿಲ್ಲ, 
ಅಮೇಥಿ ಮತ್ತು ರಾಯ್ ಬರೇಲಿಯಲ್ಲಿ ಪಕ್ಷದ ಸಾಮರ್ಥ್ಯ ಕುಸಿಯುತ್ತಿದೆ, ಫೆಬ್ರವರಿ 1 ರಿಂದ ಪ್ರಿಯಾಂಕಾ ಅಧಿಕಾರ ವಹಿಸಿಕೊಳ್ಳಲಿದ್ದಾರೆ, ಆದರೆ ಪ್ರಿಯಾಂಕಾ ಪತಿ ರಾಬರ್ಟ್ ವಾದ್ರಾ ಅವರ ವಿರುದ್ಧ ವಿರುವ ಭ್ರಷ್ಟಾಚಾರ ಆರೋಪ ಆಕೆಗೆ ಮುಳುವಾಗಬಹುದು, ಪ್ರಿಯಾಂಕಾ ನೇಮಕದಿಂದ ಎಚ್ಚೆತ್ತುಕೊಂಡಿರುವ ಬಿಜೆಪಿ ಕಾಂಗ್ರೆಸ್ ಗೆ ಕೌಂಟರ್ ನೀಡಲು ಏನೆಲ್ಲಾ ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com