ಪೋಷಕರ ಋಣ ತೀರಿಸಲಾಗದು: ಹಳೆಯ ಸಂಪ್ರದಾಯಕ್ಕೆ ಸಡ್ಡು ಹೊಡೆದ ವಧು, ವಿಡಿಯೋ ವೈರಲ್!

ಹೊಸದಾಗಿ ಮದುವೆಯಾಗಿ ಗಂಡನ ಮನೆಗೆ ಹೋಗುವ ವಧು ಕಣ್ಣೀರು ಸುರಿಸುತ್ತಾ ತಂದೆ-ತಾಯಿಯರನ್ನು ಬಿಟ್ಟು ಹೋಗುವುದು ಎಂತವರ ಕಣ್ಣಲ್ಲೂ ನೀರೂರಿಸುತ್ತದೆ.

Published: 31st January 2019 12:00 PM  |   Last Updated: 01st February 2019 02:29 AM   |  A+A-


ಸಂಗ್ರಹ ಚಿತ್ರ

Posted By : VS VS
Source : Online Desk
ಹೊಸದಾಗಿ ಮದುವೆಯಾಗಿ ಗಂಡನ ಮನೆಗೆ ಹೋಗುವ ವಧು ಕಣ್ಣೀರು ಸುರಿಸುತ್ತಾ ತಂದೆ-ತಾಯಿಯರನ್ನು ಬಿಟ್ಟು ಹೋಗುವುದು ಎಂತವರ ಕಣ್ಣಲ್ಲೂ ನೀರೂರಿಸುತ್ತದೆ. ಆದರೆ ಇಲ್ಲೊಬ್ಬ ವಧು ಈ ಎಲ್ಲಾ ಸಂಪ್ರದಾಯಗಳಿಗೆ ಸಡ್ಡು ಹೊಡೆದಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ.

ಬಂಗಾಲಿ ವಧು ಕೆಂಪು ಬನಾರಸ್ ಸೀರೆಯಲ್ಲಿ ಕಂಗೊಳಿಸುತ್ತಿದ್ದು ಗಂಡನ ಮನೆಗೆ ಹೋಗುವ ಮುನ್ನ ಕನಕಾಂಜಲಿ ಆಚರಣೆ ಮಾಡಬೇಕಾಗುತ್ತದೆ. ಈ ಆಚರಣೆಯಲ್ಲಿ ವಧು ತನ್ನ ತಾಯಂದಿರಿಗೆ ಅಕ್ಕಿಯನ್ನು ಎಸೆದು ಅವರ ಋಣವನ್ನು ತೀರಿಸಿದ್ದೇನೆ ಎಂದು ಹೇಳಬೇಕಾಗುತ್ತದೆ. ಆದರೆ ಈ ವಧು ನಾವು ಎಂದಿಗೂ ತಾಯಿಯ ಋಣವನ್ನು ತೀರಿಸಲಾಗದು ಎಂದು ಹೇಳಿರುವ ವಿಡಿಯೋ ಇದೀಗ ವೈರಲ್ ಆಗಿದೆ. 

ತಾಯಿಯ ಮುಖವನ್ನು ನೋಡಿ ಮುದ್ದಾಗಿ ನಗುತ್ತಾ ನಾನು ಹೋಗುತ್ತೇನೆ. ನನಗೆ ಇಷ್ಟವಾದಾಗ ನನ್ನ ತವರು ಮನೆಗೆ ಬರುತ್ತೇನೆ ಎಂದಿದ್ದು ಈ ಮಾತುಗಳು ಎಲ್ಲರನ್ನು ಮಂತ್ರ ಮುಗ್ಧಗೊಳಿಸಿದೆ.
Stay up to date on all the latest ರಾಷ್ಟ್ರೀಯ news
Poll
Farmers

ಕೇಂದ್ರ ಸರ್ಕರದ ಕೃಷಿ ಸುಧಾರಣಾ ಮಸೂದೆಗೆ ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯೇ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp