22 ವರ್ಷದ ಮಹಿಳೆ ಹೊಟ್ಟೆಯಲ್ಲಿ 1.68 ಕೆಜಿ ಚಿನ್ನಾಭರಣ ಪತ್ತೆ, ಭಯಭೀತರಾದ ವೈದ್ಯರು!

ಒಂದು ಗಂಟೆ ಹದಿನೈದು ನಿಮಿಷಗಳ ಕಾಲ ನಡೆದ ಶಸ್ತ್ರಚಿಕಿತ್ಸೆ ವೇಳೆ 22 ವರ್ಷದ ಮಹಿಳೆಯ ಹೊಟ್ಟೆಯಲ್ಲಿ ಬರೋಬ್ಬರಿ 1.68 ಕೆಜಿ ಚಿನ್ನಾಭರಣವನ್ನು ವೈದ್ಯರು ಹೊರತೆಗೆದಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬಿರ್ಭಮ್(ಪಶ್ಚಿಮ ಬಂಗಾಳ): ಒಂದು ಗಂಟೆ ಹದಿನೈದು ನಿಮಿಷಗಳ ಕಾಲ ನಡೆದ ಶಸ್ತ್ರಚಿಕಿತ್ಸೆ ವೇಳೆ 22 ವರ್ಷದ ಮಹಿಳೆಯ ಹೊಟ್ಟೆಯಲ್ಲಿ ಬರೋಬ್ಬರಿ 1.68 ಕೆಜಿ ಚಿನ್ನಾಭರಣವನ್ನು ವೈದ್ಯರು ಹೊರತೆಗೆದಿದ್ದಾರೆ. 
22 ವರ್ಷದ ಮಹಿಳೆ ರುನಿ ಕತುನಾ ಮಾನಸಿಕ ಅಸ್ವಸ್ಥೆ ಎಂದು ಹೇಳಲಾಗುತ್ತಿದ್ದು ಬಿರ್ಭಮ್ ಸರ್ಕಾರಿ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ನಡೆಸಲಾಗಿತ್ತು. ರುನಿ ಹೊಟ್ಟೆಯಲ್ಲಿ ಸರ, ಮೂಗುತಿ, ಕಿವಿಯೋಲೆ ಮತ್ತು ಬಳೆ ಸೇರಿದಂತೆ 1.5 ಕೆಜಿ ತೂಕದ ಚಿನ್ನಾಭರಣ ಹಾಗೂ 5 ಹಾಗೂ 10 ರುಪಾಯಿ 60 ನಾಣ್ಯಗಳನ್ನು ವೈದ್ಯರು ಹೊರತೆಗೆದಿದ್ದಾರೆ.
ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ರುನಿ ಆಸ್ಪತ್ರೆಗೆ ದಾಖಲಾಗಿದ್ದು ಸ್ಕ್ಯಾನ್ ಮಾಡಿ ನೋಡಿದಾಗ ವೈದ್ಯರಿಗೆ ಶಾಕ್ ಆಗಿದೆ. ಹೊಟ್ಟೆಯಲ್ಲಿ ನಾಣ್ಯಗಳು ಮತ್ತು ಆಭರಣಗಳು ಇರುವುದಾಗಿ ಗೋಚರವಾಗಿದೆ. ತಕ್ಷಣ ವೈದ್ಯರು ರುನಿ ಶಸ್ತ್ರ ಚಿಕಿತ್ಸೆ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com