ಲೋಕಸಭೆ ಬೆನ್ನಲ್ಲೇ ರಾಜ್ಯಸಭೆಯ ಕಲಾಪವೂ ಆಗಸ್ಟ್ 7 ರವರೆಗೆ ವಿಸ್ತರಣೆ

ಲೋಕಸಭೆ ಕಲಾಪದ ಅವಧಿಯನ್ನು 8 ದಿನಗಳ ಕಾಲ ವಿಸ್ತರಿಸಿದ ಬೆನ್ನಲ್ಲೇ ರಾಜ್ಯಸಭೆ ಕಲಾಪವನ್ನೂ ಕೂಡ 8 ದಿನಗಳ ಕಾಲ ವಿಸ್ತರಿಸಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಲೋಕಸಭೆ ಕಲಾಪದ ಅವಧಿಯನ್ನು 8 ದಿನಗಳ ಕಾಲ ವಿಸ್ತರಿಸಿದ ಬೆನ್ನಲ್ಲೇ ರಾಜ್ಯಸಭೆ ಕಲಾಪವನ್ನೂ ಕೂಡ 8 ದಿನಗಳ ಕಾಲ ವಿಸ್ತರಿಸಲಾಗಿದೆ.
ಪ್ರಸಕ್ತ ನಡೆಯುತ್ತಿರುವ ರಾಜ್ಯಸಭೆಯ ಅಧಿವೇಶನವನನ್ನೂ ಬರುವ ಆಗಸ್ಟ್ 7 ರವರೆಗೆ ವಿಸ್ತರಿಸಲಾಗಿದೆ ಎಂದು ಶುಕ್ರವಾರ ಪ್ರಕಟಿಸಲಾಗಿದೆ. ಶುಕ್ರವಾರ ಸದನ ಸಮಾವೇಶಗೊಂಡ ನಂತರ ಸಭಾಪತಿ ಎಂ.ವೆಂಕಯ್ಯ ನಾಯ್ಡು ಅವರು, ಸರ್ಕಾರದ ಕಲಾಪ, ಸಲಹಾ ಸಮಿತಿಯ ತೀರ್ಮಾನದಂತೆ, ರಾಜ್ಯಸಭೆಯ ಪ್ರಸ್ತುತ ಅಧಿವೇಶನ ಇಂದೇ ಕೊನೆಗೊಳ್ಳಬೇಕಿತ್ತು; ಆದರೆ ಅದನ್ನು ಆಗಸ್ಟ್ 7 ರವರೆಗೆ ವಿಸ್ತರಿಸಲಾಗಿದೆ ಎಂದರು.
ಅಂತೆಯೇ ವಿಸ್ತೃತ ಅವಧಿಯಲ್ಲಿ ಯಾವುದೇ ಪ್ರಶ್ನೋತ್ತರ ಕಲಾಪ ಇರುವುದಿಲ್ಲ ಎಂದು ಅವರು ಹೇಳಿದರು.
ಇನ್ನು ಆಗಸ್ಟ್ 7ರಹೊತ್ತಿಗೆ ಇನ್ನೂ 12 ಮಸೂದೆಗಳ ಅಂಗೀಕಾರ ಪಡೆಯಲು ಕೇಂದ್ರ ಸರ್ಕಾರ ಹವಣಿಸುತ್ತಿದ್ದು, ಈ ಪೈಕಿ 
> ದಿವಾಳಿತನ ಮತ್ತು ಬ್ಯಾಂಕ್ ದಿವಾಳಿತನ (ತಿದ್ದುಪಡಿ) ಮಸೂದೆ
> ಮುಸ್ಲಿಂ ಮಹಿಳೆಯರ (ವಿವಾಹದ ಹಕ್ಕುಗಳ ರಕ್ಷಣೆ) ಮಸೂದೆ, 2019 (ತ್ರಿವಳಿ ತಲಾಖ್)
> ಕಂಪನಿಗಳ ತಿದ್ದುಪಡಿ ಮಸೂದೆ
> ಅನಿಯಂತ್ರಿತ ಠೇವಣಿ ಯೋಜನೆಗಳ ಮಸೂದೆ, 2019
> ಯುಎಪಿಎ ಮಸೂದೆ
> ಮೋಟಾರು ವಾಹನಗಳ ತಿದ್ದುಪಡಿ ಮಸೂದೆ, 2019
> ಗ್ರಾಹಕ ಸಂರಕ್ಷಣಾ ಮಸೂದೆ, 2019
> ಜಲಿಯನ್ ವಾಲಾ ಬಾಗ್ ರಾಷ್ಟ್ರೀಯ ಸ್ಮಾರಕ (ತಿದ್ದುಪಡಿ) ಮಸೂದೆ 2019
> ಸರೊಗಸಿ (ನಿಯಂತ್ರಣ) (ಬಾಡಿಗೆ ತಾಯಿ) ಮಸೂದೆ
> ವೇತನ ಮಸೂದೆ 2019
> ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳ ಮಸೂದೆ, 2019 ಗಳ ಅನುಮೋದನೆ ಪಡೆಯಲು ಸರ್ಕಾರ ಮುಂದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com