ನಾಪತ್ತೆಯಾಗಿ 24 ಗಂಟೆ ಕಳೆದರೂ ಭಾರತೀಯ ವಾಯುಪಡೆ ವಿಮಾನದ ಬಗ್ಗೆ ಇನ್ನೂ ಸಿಗದ ಸುಳಿವು!

ನಾಪತ್ತೆಯಾಗಿ 24 ಗಂಟೆ ಕಳೆದರೂ ಭಾರತೀಯ ವಾಯುಪಡೆ ಎಎನ್ -32 ವಿಮಾನ ಇನ್ನೂ ಪತ್ತೆಯಾಗಿಲ್ಲ.13 ಮಂದಿ ಪ್ರಯಾಣಿಕರಿದ್ದ ವಿಮಾನ ಅಸ್ಸಾಂನ ಜೊರ್ಹತ್ ನಿಂದ ಅರುಣಾಚಲ ಪ್ರದೇಶದ ಮೆಂಚೂಕಾ ಕಡೆಗೆ ತೆರಳುತಿತ್ತು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ನಾಪತ್ತೆಯಾಗಿ 24 ಗಂಟೆ ಕಳೆದರೂ ಭಾರತೀಯ ವಾಯುಪಡೆ ಎಎನ್ -32 ವಿಮಾನ ಇನ್ನೂ ಪತ್ತೆಯಾಗಿಲ್ಲ.13 ಮಂದಿ ಪ್ರಯಾಣಿಕರಿದ್ದ ವಿಮಾನ ಅಸ್ಸಾಂನ ಜೊರ್ಹತ್ ನಿಂದ ಅರುಣಾಚಲ ಪ್ರದೇಶದ ಮೆಂಚೂಕಾ  ಕಡೆಗೆ ತೆರಳುತಿತ್ತು.
ಎಂಟು ಮಂದಿ ಸಿಬ್ಬಂದಿ ಸೇರಿದಂತೆ  ಒಟ್ಟು 13 ಮಂದಿಯನ್ನೊಳಗೊಂಡ ಅಂಟೊನೊವಾ ಎಎನ್ -32 ವಿಮಾನ ಅರುಣಾಚಲ ಪ್ರದೇಶದ ಮೆಂಚೂಕಾ ಕಡೆಗೆ ತೆರಳುತ್ತಿರಬೇಕಾದರೆ ನಾಪತ್ತೆಯಾಗಿದೆ.
ಈ ವಿಮಾನದ ಪತ್ತೆಯಾಗಿ ಸುಕೋಯ್ 30 ಯುದ್ಧ ವಿಮಾನವನ್ನು ನಿಯೋಜಿಸಲಾಗಿದೆ. ಸಿ-130 ಹರ್ಕ್ಯೂಲಸ್  ಕೂಡಾ ವಿಶೇಷ ಕಾರ್ಯಾಚರಣೆ ನಡೆಸುತ್ತಿದೆ ಆದರೆ, ಎಎನ್ -32 ವಿಮಾನ ಇನ್ನೂ ಪತ್ತೆಯಾಗಿಲ್ಲ.
ಜರ್ಹತ್ ನಲ್ಲಿ ನಿನ್ನೆ 12-27ಕ್ಕೆ ಟೇಕಾಫ್ ಆದ ಭಾರತೀಯ ವಾಯುಪಡೆ ವಿಮಾನ  ಚೀನಾ ಗಡಿ ಪ್ರದೇಶ ಅರುಣಾಚಲ ಪ್ರದೇಶದ ಶಿ- ಯೋಮಿ ಜಿಲ್ಲೆಯ ಮೆಂಚುಕಾ ಏರ್ ಫೀಲ್ಡ್ ನಲ್ಲಿ ಲ್ಯಾಂಡ್ ಆಗಬೇಕಾಗಿತ್ತು. ಆದರೆ, ವಿಮಾನ ಅರುಣಾಚಲ ಪ್ರದೇಶ ತಲುಪಿಲ್ಲ. ನಿನ್ನೆ ಮಧ್ಯಾಹ್ನ 1 ಗಂಟೆಯಿಂದ ಸಂಪರ್ಕಕ್ಕೆ ಸಿಗುತ್ತಿಲ್ಲ.
ಭಾರತೀಯ ಸೇನೆಯ ವಾಯುಪಡೆ ಹಾಗೂ ಭೂ ಸೇನೆ ರಾತ್ರಿಯಿಡೀ ಶೋಧ ಕಾರ್ಯಾಚರಣೆ ನಡೆಸಿದೆ.ಸೋಮವಾರ ವಿಮಾನ ಪತನವಾಗಿರುವ ಸ್ಥಳದ ಬಗ್ಗೆ ಮಾಹಿತಿ ಪಡೆಯಲಾಗಿದೆ ಎಂಬ ವರದಿ ಸ್ವೀಕರಿಸಲಾಗಿತ್ತು. ಆದರೆ, ಯಾವುದೇ ಅವಶೇಷಗಳು ಪತ್ತೆಯಾಗಿಲ್ಲ. ಇಂದು ಕೂಡಾ ಶೋಧ ಕಾರ್ಯ ಮುಂದುವರೆದಿದೆ.
ನಾಪತ್ತೆಯಾಗಿರುವ ವಿಮಾನದ ಪತ್ತೆಗಾಗಿ ಕ್ರಮ ಕೈಗೊಳ್ಳುಂತೆ ಸೇನೆಯ ಉಪ ಮುಖ್ಯಸ್ಥರೊಂದಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್  ಮಾತುಕತೆ ನಡೆಸಿದ್ದಾರೆ. ವಿಮಾನದಲ್ಲಿದ್ದವರು ಎಲ್ಲರೂ ಕ್ಷೇಮವಾಗಿ ಇರಲಿ ಎಂದು ಪ್ರಾರ್ಥಿಸುವುದಾಗಿ ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com