ಮೈತ್ರಿ ಬೇಡವಾದರೆ ಉತ್ತರ ಪ್ರದೇಶ ಉಪ ಚುನಾವಣೆಯಲ್ಲಿ ಏಕಾಂಗಿ ಸ್ಪರ್ಧೆಗೂ ಸಿದ್ಧ: ಅಖಿಲೇಶ್

ಒಂದು ವೇಳೆ ಬಿಎಸ್ ಪಿ ಜೊತೆಗಿನ ಮೈತ್ರಿ ಮುರಿದು ಬಿದ್ದರೆ, ಖಂಡಿತಾ ಸಮಾಜವಾದಿ ಪಕ್ಷ ಏಕಾಂಗಿಯಾಗಿ ಉಪ ಚುನಾವಣೆಯಲ್ಲಿ ಸೆಣಸಲಿದೆ ಎಂದು ಎಸ್ ಪಿ ನಾಯಕ ಅಖಿಲೇಶ್ ಯಾದವ್ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಲಖನೌ: ಒಂದು ವೇಳೆ ಬಿಎಸ್ ಪಿ ಜೊತೆಗಿನ ಮೈತ್ರಿ ಮುರಿದು ಬಿದ್ದರೆ, ಖಂಡಿತಾ ಸಮಾಜವಾದಿ ಪಕ್ಷ ಏಕಾಂಗಿಯಾಗಿ ಉಪ ಚುನಾವಣೆಯಲ್ಲಿ ಸೆಣಸಲಿದೆ ಎಂದು ಎಸ್ ಪಿ ನಾಯಕ ಅಖಿಲೇಶ್ ಯಾದವ್ ಹೇಳಿದ್ದಾರೆ.
ಅತ್ತ ಬಿಎಸ್ ಪಿ ಅಧಿನಾಯಕಿ ಮಾಯಾವತಿ ಮೈತ್ರಿ ಕಡಿದುಕೊಳ್ಳುವ ಕುರಿತು ಮಾಹಿತಿ ನೀಡಿದ ಬೆನ್ನಲ್ಲೇ ಸುದ್ದಿಗಾರರೊಂದಿಗೆ ಮಾತನಾಡಿದ ಅಖಿಲೇಶ್ ಯಾದವ್, ಒಂದು ವೇಳೆ ಬಿಎಸ್ ಪಿ ಜೊತೆಗಿನ ಮೈತ್ರಿ ಕಡಿದುಬಿದ್ದರೆ, ಖಂಡಿತಾ ಸಮಾಜವಾದಿ ಪಕ್ಷ ಏಕಾಂಗಿಯಾಗಿ ಸೆಣಸಲಿದೆ. ಆದರೆ ಮೈತ್ರಿ ಕಡಿದುಕೊಳ್ಳಬಾರದು ಎಂಬುದು ನನ್ನ ಅಭಿಪ್ರಾಯ. ಆದರೆ ಮೈತ್ರಿ ರಹಿತವಾಗಿಯೇ ನಾವು ಉಪ ಚುನಾವಣೆ ಎದುರಿಸಬೇಕಾಗಿ ಬಂದರೆ ಖಂಡಿತಾ ನಾವು ಏಕಾಂಗಿಯಾಗಿ ಉಪ ಚುನಾವಣೆ ಎದುರಿಸಲಿದ್ದೇವೆ. ಅಲ್ಲದೆ ಎಲ್ಲ 11 ಕ್ಷೇತ್ರಗಳಲ್ಲೂ ಸಮಾಜವಾದಿ ಪಕ್ಷ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ ಎಂದು ಹೇಳಿದ್ದಾರೆ.
ಇಂದು ಬೆಳಗ್ಗೆಯಷ್ಟೇ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಬಿಎಸ್ ಪಿ ಅಧಿನಾಯಕಿ ಮಾಯಾವತಿ, 'ಇದು ಶಾಶ್ವತ ಬ್ರೇಕ್ ಅಪ್ ಅಲ್ಲ, ಭವಿಷ್ಯದಲ್ಲಿ ಸಮಾಜವಾದಿ ಪಕ್ಷ ರಾಜಕೀಯವಾಗಿ ಉತ್ತಮವಾದ ಯಶಸ್ಸು ಗಳಿಸಿದರೇ, ಮತ್ತೆ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ. ಒಂದು ವೇಳೆ ಅದು ಸಾಧ್.ವಾಗದಿದ್ದರೇ ನಾವು ಪ್ರತ್ಯೇಕವಾಗಿಯೇ ಕೆಲಸ ಮಾಡುತ್ತೇವೆ, ಈ ಉಪಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುತ್ತೇವೆ ಎಂದು ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com