ವೇಶ್ಯೆಯರನ್ನೂ ಬಿಡದ ಕಾಮುಕರು: ಮೂವರ ಮೇಲೆ 9 ಮಂದಿಯಿಂದ ಸಾಮೂಹಿಕ ಅತ್ಯಾಚಾರ!

ಉತ್ತರ ಪ್ರದೇಶದಲ್ಲಿ ಕಾಮುಕರ ಅಟ್ಟಹಾಸ ಮುಂದುವರೆದಿದ್ದು, ಮೂವರು ವೇಶ್ಯರನ್ನು 9 ಮಂದಿ ಅಪಹರಿಸಿ ಸಾಮೂಹಿಕ ಅತ್ಯಾಚಾರ ಗೈದಿರುವ ವಿದ್ರಾವಕ ಘಟನೆ ನಡೆದಿದೆ.

Published: 20th June 2019 12:00 PM  |   Last Updated: 20th June 2019 12:16 PM   |  A+A-


Three Sex Workers Allegedly Gangraped By 9 Men At Noida Farmhouse

ಸಂಗ್ರಹ ಚಿತ್ರ

Posted By : SVN SVN
Source : PTI
ನೊಯ್ಡಾ: ಉತ್ತರ ಪ್ರದೇಶದಲ್ಲಿ ಕಾಮುಕರ ಅಟ್ಟಹಾಸ ಮುಂದುವರೆದಿದ್ದು, ಮೂವರು ವೇಶ್ಯರನ್ನು 9 ಮಂದಿ ಅಪಹರಿಸಿ ಸಾಮೂಹಿಕ ಅತ್ಯಾಚಾರ ಗೈದಿರುವ ವಿದ್ರಾವಕ ಘಟನೆ ನಡೆದಿದೆ.

ದೆಹಲಿಯ ಲಜಪತ್ ನಗರದ ಮೆಟ್ರೋ ನಿಲ್ದಾಣದ ಬಳಿ ಗಿರಾಕಿಗಳಿಗಾಗಿ ಕಾಯುತ್ತಿದ್ದಾಗ ಓಲಾ ಕ್ಯಾಬ್ ನ ಸ್ವಿಫ್ಟ್ ಡಿಜೈರ್ ಕಾರಿನಲ್ಲಿ ಬಂದ ಇಬ್ಬರು ಗಿರಾಕಿಗಳ ಸೋಗಿನಲ್ಲಿ ಮಹಿಳೆಯರನ್ನು ಸಂಪರ್ಕಿಸಿದ್ದಾರೆ. 3000 ಸಾವಿರ ರೂಗಳಿಗೆ ಡೀಲ್ ಮಾಡಿಕೊಂಡ ದುಷ್ಕರ್ಮಿಗಳು ಮಹಿಳೆಯರನ್ನು ನೊಯ್ಡಾದ ಸೆಕ್ಟರ್ 18ಗೆ ಬರುವಂತೆ ಹೇಳಿ 3600 ರೂ ಮುಂಗಡ ಹಣವನ್ನೂ ನೀಡಿದ್ದಾರೆ. 

ಬಳಿಕ ಮಹಿಳೆಯರನ್ನು ಕರೆದುಕೊಂಡು ನೋಯ್ಡಾ ಸೆಕ್ಟರ್ 135 ಸಮೀಪದ ಫಾರ್ಮ್ ಹೌಸ್ ಗೆ ಕರೆದೊಯ್ದ ದುಷ್ಕರ್ಮಿಗಳು ಅಲ್ಲಿ ಮತ್ತೆ ಏಳು ಮಂದಿಯೊಂದಿಗೆ ಸೇರಿ ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ಗೈದಿದ್ದಾರೆ. ಈ ವೇಳೆ ಮಹಿಳೆಯರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಒಪ್ಪಂದ ಪ್ರಕಾರ ಇಬ್ಬರು ಮಾತ್ರ ಬರಬೇಕು. ಆದರೆ 9 ಮಂದಿ ಇದ್ದೀರಿ.. ನಮಗೆ ಈ ಒಪ್ಪಂದ ಬೇಡ. ನಾವು ದೆಹಲಿಗೆ ವಾಪಸ್ ಆಗುತ್ತೇವೆ ಎಂದಾಗ ಮಹಿಳೆಯರನ್ನು ಬೆದರಿಸಿದ ಕಾಮುಕರು ಒಬ್ಬರಾದ ಮೇಲೆ ಒಬ್ಬರಂತೆ ಸಾಮೂಹಿಕ ಅತ್ಯಾಚಾರ ವೆಸಗಿದ್ದಾರೆ. 

ಅಲ್ಲದೆ ಮಹಿಳೆಯರನ್ನು ಥಳಿಸಿ ಅವರ ಬಳಿ ಇದ್ದ ಹಣವನ್ನೂ ಕಸಿದುಕೊಂಡಿದ್ದಾರೆ. ಈ ಸಂಬಂಧ ಮಹಿಳೆಯರು ನೋಯ್ಡಾ ಪೊಲೀಸರಿಗೆ  ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಘಟನೆ ನಡೆದ ಫಾರ್ಮ್ ಹೌಸ್ ಗೆ ಬೀಗ ಜಡಿದಿದ್ದು, 7 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
Stay up to date on all the latest ರಾಷ್ಟ್ರೀಯ news
Poll
DJ-Halli-Violence12

ಹಿಂಸಾಚಾರದಲ್ಲಿ ತೊಡಗಿ ಆಸ್ತಿಪಾಸ್ತಿಗೆ ಹಾನಿ ಮಾಡುವ ಗಲಭೆಕೋರರಿಂದಲೇ ನಷ್ಟದ ಹಣ ವಸೂಲಿ ಮಾಡುವುದರಿಂದ ಗುಂಪು ಗಲಭೆ ತಡೆಯಬಹುದೆ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp