ದೆಹಲಿ ಬಿಜೆಪಿ ಮುಖ್ಯಸ್ಥ ಮನೋಜ್ ತಿವಾರಿಗೆ ಅಪರಿಚಿತರಿಂದ ಜೀವ ಬೆದರಿಕೆ

ದೆಹಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿಗೆ ಆಪರಿಚಿತ ದುಷ್ಕರ್ಮಿಯೊಬ್ಬ ಜೀವ ಬೆದರಿಕೆ ಒಡ್ಡಿದ್ದಾನೆ.

Published: 23rd June 2019 12:00 PM  |   Last Updated: 23rd June 2019 01:03 AM   |  A+A-


Manoj Tiwari

ಮನೋಜ್ ತಿವಾರಿ

Posted By : RHN RHN
Source : The New Indian Express
ನವದೆಹಲಿ: ದೆಹಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿಗೆ ಆಪರಿಚಿತ ದುಷ್ಕರ್ಮಿಯೊಬ್ಬ ಜೀವ ಬೆದರಿಕೆ ಒಡ್ಡಿದ್ದಾನೆ. ತಿವಾರಿಯವರ ಖಾಸಗಿ ಮೊಬೈಲ್ ಸಂಖ್ಯೆಗೆ ಬಂದ ಸಂದೇಶ (ಎಸ್.ಎಂ.ಎಸ್.) ಒಂದರಲ್ಲಿ "ನಿಮ್ಮನ್ನು ಮುಗಿಸಲು ನನ್ನ ಮೇಲೆ ತೀವ್ರ ಒತ್ತಡವಿದೆ" ಎಂದು ಬರೆಯಲಾಗಿದೆ.

ಇದೇ ವೇಳೆ ಪ್ರಧಾನ ಮಂತ್ರಿಯವರನ್ನೂ ಸಹ "ಅಗತ್ಯಬಿದ್ದಲ್ಲಿ ಹತ್ಯೆಮಾಡಲಾಗುತ್ತದೆ" ಎಂದು ದುಷ್ಕರ್ಮಿ ಎಸ್‌ಎಂಎಸ್ ಮೂಲಕ  ತಿಳಿಸಿದ್ದಾಗಿ ತಿವಾರಿ ಹೇಳಿದ್ದಾರೆ.

"ಬೆದರಿಕೆ ಬಗ್ಗೆ ನಾನು ಪೊಲೀಸರಿಗೆ ಮಾಹಿತಿ ನೀಡಿದ್ದೇನೆ" ಎಂದು ತಿವಾರಿ ಪಿಟಿಐಗೆ ತಿಳಿಸಿದ್ದಾರೆ.

ದುಷ್ಕರ್ಮಿಯು ತಿವಾರಿಯವರಿಗೆ ಹಿಂದಿಯಲ್ಲಿ ಸಂದೇಶ ಕಳಿಸಿದ್ದು "ತೀವ್ರ ಒತ್ತಡದ ಕಾರಣಕ್ಕಾಗಿ ನಾನು ನಿಮ್ಮನ್ನು ಹತ್ಯೆಗೈಯಲು ಮುಂದಾಗಿದ್ದಕ್ಕೆ ಕ್ಷಮೆ ಇರಲಿ" ಎಂದು ಕೇಳಿಕೊಂಡಿದ್ದಾನೆ.

ಬೆದರಿಕೆ ಬಗ್ಗೆ ಅಧಿಕೃತ ದೂರು ಶೀಘ್ರದಲ್ಲೇ ಸಲ್ಲಿಕೆಯಾಗಲಿದೆ ಎಂದು ದೆಹಲಿ ಬಿಜೆಪಿಯ ಮಾಧ್ಯಮ ವಕ್ತಾರರಾದ ನೀಲಕಂತ್ ಬಕ್ಷಿ ಹೇಳಿದ್ದಾರೆ ತಿವಾರಿಯವರ ಮೊಬೈಲ್ ಗೆ ಶುಕ್ರವಾರ ಮಧ್ಯಾಹ್ನ 12.52 ಕ್ಕೆ ಎಸ್‌ಎಂಎಸ್ ಬಂದಿದ್ದು, ಶನಿವಾರ ಸಂಜೆ ನೋಡಿದ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಅವರು ಹೇಳಿದರು.
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp