ಹೈದರಾಬಾದ್: ನಾಯಿಯ ಅತ್ಯಾಚಾರಿಯ ಕುರಿತ ಮಾಹಿತಿಗೆ 1 ಲಕ್ಷ ರೂ. ಬಹುಮಾನ ಘೋಷಿಸಿದ ಎನ್‌ಜಿಒ

ವ್ಯಕ್ತಿಯೊಬ್ಬ ನಾಯಿಯ ಮೇಲೆ ಅತ್ಯಾಚಾರ ನಡೆಸಿರುವ ವೀಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆದ ಒಂದು ದಿನದ ನಂತರ ಅಂತರಾಷ್ಟ್ರೀಯ ಎನ್.ಜಿ.ಒ. ಅಪರಿಚಿತ ಆರೋಪಿಯನ್ನು ಪತ್ತೆ ಮಾಡಿದವರಿಗೆ 1 ಲಕ್ಷ ರೂ.ಬಹುಮಾನ ಘೋಷಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಹೈದರಾಬಾದ್: ವ್ಯಕ್ತಿಯೊಬ್ಬ ನಾಯಿಯ ಮೇಲೆ ಅತ್ಯಾಚಾರ ನಡೆಸಿರುವ ವೀಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆದ ಒಂದು ದಿನದ ನಂತರ ಅಂತರಾಷ್ಟ್ರೀಯ ಎನ್.ಜಿ.ಒ. ಅಪರಿಚಿತ ಆರೋಪಿಯನ್ನು ಪತ್ತೆ ಮಾಡಿದವರಿಗೆ 1 ಲಕ್ಷ ರೂ.ಬಹುಮಾನ ಘೋಷಿಸಿದೆ.
 ಹ್ಯೂಮನ್ ಸೊಸೈಟಿ ಇಂಟರ್ನ್ಯಾಷನಲ್ / ಇಂಡಿಯಾ (ಎಚ್‌ಎಸ್‌ಐ) ಎಂಬ ಸಂಸ್ಥೆ ನಾಯಿಯ ಮೇಲೆ ಅತ್ಯಾಚಾರ ನಡೆಸಿದನೆನ್ನಲಾದ ಆರೋಪಿಯನ್ನು ಪತ್ತೆ ಮಾಡಿ ಬಂಧಿಸಿದರೆ 1 ಲಕ್ಷ ರೂ. ನೀಡುವುದಾಗಿ ಹೇಳಿದೆ.
ಅಪರಿಚಿತ ವ್ಯಕ್ತಿಗಳು ದಾಖಲಿಸಿದ ವೀಡಿಯೊವು ನಾಯಿಯೊಂದನ್ನು ವ್ಯಕ್ತಿ ಬಲವಂತವಾಹಿ ಹಿಡಿದಿಟ್ಟುಕೊಂಡಿದ್ದಾನೆ. ಹಾಗೆಯೇ ಅಪರಿಚಿತ ಶಿಥಿಲ ಕಟ್ಟಡದಲ್ಲಿ ಆ ಮೂಕ ಪ್ರಾಣಿಯ ಮೇಲೆ ಅತ್ಯಾಚಾರ ನಡೆಸಿದ್ದಾನೆ ಎಂದು ತೋರಿಸಿದೆ.
“ಹಿಂಸಾತ್ಮಕ ಜನರು ಹೆಚ್ಚಾಗಿ ಪ್ರಾಣಿಗಳನ್ನು ನಿಂದಿದಿಸುತ್ತಾರೆ. ಆದರೆ ಮಾನವನೇ ಪ್ರಾಣಿಗಳಂತೆ ವರ್ತಿಸುತ್ತಾರೆ.ಇದರಿಂದಾಗಿ ಈ ಪ್ರಕರಣವನ್ನು ನಾವು ಗಂಬೀರವಾಗಿ ಪರಿಗಣಿಸಬೇಕಿದೆ" ಎಚ್‌ಎಸ್‌ಐ / ಭಾರತದ ವ್ಯವಸ್ಥಾಪಕ ನಿರ್ದೇಶಕ ಎನ್. ಜಿ. ಜಯಸಿಂಹ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com