ಮಹಾರಾಷ್ಟ್ರ: ಥಾಣೆಯಲ್ಲಿ ಮುಸ್ಲಿಂ ಕ್ಯಾಬ್ ಡ್ರೈವರ್ ಮೇಲೆ ಹಲ್ಲೆ, ಜೈ ಶ್ರೀರಾಮ್ ' ಹೇಳುವಂತೆ ತಾಕೀತು

ಮಹಾರಾಷ್ಟ್ರದ ಥಾಣೆಯಲ್ಲಿ ಮುಸ್ಲಿಂ ಸಮುದಾಯದ ಒಲಾ ಕ್ಯಾಬ್ ಡ್ರೈವರ್ ಮೇಲೆ ಗುಂಪೊಂದು ಹಲ್ಲೆ ನಡೆಸಿದ್ದು, ಶ್ರೀರಾಮ ಘೋಷಣೆ ಕೂಗುವಂತೆ ಒತ್ತಾಯಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಥಾಣೆ: ಮಹಾರಾಷ್ಟ್ರದ ಥಾಣೆಯಲ್ಲಿ  ಮುಸ್ಲಿಂ ಸಮುದಾಯದ ಒಲಾ ಕ್ಯಾಬ್ ಡ್ರೈವರ್ ಮೇಲೆ ಗುಂಪೊಂದು ಹಲ್ಲೆ ನಡೆಸಿದ್ದು, ಶ್ರೀರಾಮ ಘೋಷಣೆ ಕೂಗುವಂತೆ ಒತ್ತಾಯಿಸಿರುವ ಘಟನೆ ನಡೆದಿದೆ.
ಕಳೆದ ಶನಿವಾರ ಈ ಘಟನೆ ನಡೆದಿದ್ದು, ಮೂವರು ಆರೋಪಿಗಳನ್ನು ಬಂಧಿಸಿ  ನಿನ್ನೆವೆರೆಗೂ  ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿತ್ತು. ಇನ್ನಿತರ ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ ಎಂದು ಮುಂಬ್ರಾ ಪೊಲೀಸರು ಹೇಳಿದ್ದಾರೆ.
ಜೂನ್ 22 ರ ರಾತ್ರಿ ಮುಂಬ್ರಾದ ಓಲಾ ಕ್ಯಾಬ್ ಡ್ರೈವರ್ ಫೈಸಲ್ ಉಸ್ಮಾನ್ ಖಾನ್,  ಥಾಣೆ ಜಿಲ್ಲೆಯ ದೂರದ ತುದಿಯಲ್ಲಿರುವ ದಿವಾದಿಂದ ಕೆಲವು ಪ್ರಯಾಣಿಕರನ್ನು ಕರೆದುಕೊಂಡು ಹೋಗಲು ಹೋಗಿದ್ದರು. ಮಾರ್ಗಮಧ್ಯದಲ್ಲಿ ಕ್ಯಾಬ್  ಕೆಟ್ಟುಹೋಗಿದ್ದು,  ಸರಿಪಾಡಲು ಪಾರ್ಕಿಂಗ್ ಮಾಡಿದ್ದಾರೆ.
ಕೂಡಲೇ ಮೊಬೈಕ್ ನಲ್ಲಿ ಬಂದ  ನಾಲ್ಕೈದು ಮಂದಿ ಕ್ಷುಲಕ ಕಾರಣಕ್ಕೆ ಖಾನ್ ಜೊತೆಗೆ ವಾಗ್ವಾದ ನಡೆಸಿದ್ದಾರೆ. ನಂತರ ಆತನ ಮೇಲೆ ಹಲ್ಲೆ ನಡೆಸಿದ್ದಾರೆ. ಇದರಿಂದ ಭಯಗೊಂಡ ಪ್ರಯಾಣಿಕರು ಕ್ಯಾಬ್ ನಿಂದ ಪಲಾಯನ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಉಸ್ಮಾನ್ ಖಾನ್ ಅಲ್ಲಾ ಎಂದು ಕೂಗಿದಾಗ ಮುಸ್ಲಿಂ ವ್ಯಕ್ತಿ ಎಂದು ಅರಿತುಗೊಂಡ ದುಷ್ಕರ್ಮಿಗಳು, ಜೈ ಶ್ರೀರಾಮ್ ಎಂದು ಹೇಳುವಂತೆ ಒತ್ತಾಯಿಸಿದ್ದಾರೆ.  
ಮತ್ತಷ್ಟು ಹಲ್ಲೆಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ಪದೇ ಪದೇ ಶ್ರೀರಾಮ್ ಎಂದು  ಗಾಯಾಳು ಹೇಳಿದ್ದಾನೆ.ಆತನಿಗೆ ಪ್ರಜ್ಞೆ ಹೋಗುವವರೆಗೂ ಹಲ್ಲೆ ನಡೆಸಿದ್ದಾರೆ. ನಂತರ ಆತನ ಮೊಬೈಲ್ ಪೋನ್ ಕಸಿದುಕೊಂಡಿದ್ದಾರೆ ಎಂದು ಅವರು ಹೇಳಿದರು. 
ನಂತರ ಆತ ಇಡೀ ಘಟನೆಯನ್ನು ವಿವರಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸ್ಥಳೀಯ ಮಾಧ್ಯಮವೊಂದು ಪ್ರಸಾರ ಮಾಡಿದೆ.ಕೂಡಲೇ ಕಾರ್ಯಪ್ರವೃತ್ತರಾದ ಮುಂಬ್ರಾ ಪೊಲೀಸರ ತಂಡ ದಿವಾ, ಜೈ ದೀಪ್ ಮುಂಡೆ ಹಾಗೂ ಅನಿಲ್ ಸೂರ್ಯವಂಶಿ ಮತ್ತು ಮಂಗೇಶ್ ಮುಂಡೆ ಎಂಬವರನ್ನು ಬಂದಿಸಿದ್ದು,  ವಿವಿಧ ಸೆಕ್ಷನ್ ಗಳಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com